December 21, 2024

Bhavana Tv

Its Your Channel

ಭಟ್ಕಳದಲ್ಲಿ ಮತ್ತೊಂದು ಕೋವಿಡ್ ಪಾಸಿಟಿವ್: 68 ವರ್ಷದ ವೃದ್ಧನಲ್ಲಿ ಸೋಂಕು ಪತ್ತೆ

ಭಟ್ಕಳ:ಕಳೆದ ಮೂರು ದಿನಗಳಿಂದ ಯಾವುದೇ ಕೊರೋನಾ ಪ್ರಕರಣ ಪತ್ತೆಯಾಗದ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಇನ್ನೊಂದು ಪ್ರಕರಣ ದೃಢ ಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿರುವ ಸಕ್ರಿಯ ಸೋಂಕಿತರ ಸಂಖ್ಯೆ 31 ಕ್ಕೆ ತಲುಪಿದೆ.
ಭಟ್ಕಳದಲ್ಲಿ ಈ ಹಿಂದೆ ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಸೋಂಕು ತಗುಲಿಸಿಕೊಂಡು ಇದೀಗ ಕಾರವಾರದ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತ ಸಂಖ್ಯೆ 740ರ ಸಂಪರ್ಕದಲ್ಲಿದ್ದ 68 ವರ್ಷದ ವೃದ್ಧನಲ್ಲಿ ಇಂದು ಕೋರೋನಾ ಸೋಂಕು ದೃಢ ಪಟ್ಟಿದೆ.
ಈ ಮೂಲಕ ಜಿಲ್ಲೆಯ ಒಟ್ಟೂ ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆ ಕಂಡಿದ್ದು. ಇವರಲ್ಲಿ 11 ಮಂದಿ ಈಗಾಗಲೇ ಗುಣಮುಖರಾಗಿ ಬಿಡುಗಡೆಯಾಗಿದ್ದು ಸಕ್ರಿಯ ಸೋಂಕಿತರ ಸಂಖ್ಯೆ 31ಕ್ಕೆ ತಲುಪಿದೆ.
ಇನ್ನು ಇವುಗಳನ್ನು ಹೊರತು ಪಡಿಸಿದರೆ ದುಬೈನಿಂದ ಆಗಮಿಸಿ ಮಂಗಳೂರಿನಲ್ಲಿ ಕೊರೋನಾ ಪತ್ತೆಯಾಗಿರುವ ಕಾರವಾರದ ವ್ಯಕ್ತಿ ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ

error: