
ಭಟ್ಕಳ : ಕಳೆದ ಎರಡು ತಿಂಗಳಿನಿAದಿದ್ದ ಲಾಕ್ ಡೌನ್‌ನ ಶುಕ್ರವಾರದಿಂದ ಜಿಲ್ಲಾಡಳಿತ ಸಡಿಲಿಕೆ ಮಾಡಿದೆ. ಇದೀಗ ಜನ ಸಾಮಾಜಿಕ ಅಂತರ ಪಾಲನೆ ಮಾಡದೇ ನಿರ್ಲಕ್ಷ ತೋರುತ್ತಿದ್ದಾರೆ.
ಜಿಲ್ಲಾಡಳಿತ ಗುರುತಿಸಿದಂತೆ ಪಟ್ಟಣ ವ್ಯಾಪ್ತಿಯ ೫ ಕಂಟೇನ್ಮೆoಟ್ ಪ್ರದೇಶ ಹೊರತುಪಡಿಸಿ ಉಳಿದೆಡೆ ಕಳೆದ ಮೂರು ದಿನಗಳಿಂದ ಲಾಕ್‌ಡೌನ ವಿನಾಯಿತಿ ನೀಡಿದೆ. ಇದರಿಂದ ಕಳೆದ ಮೂರು ದಿನಗಳಿಂದ ಹೊರ ಬರಲು ಭಯ ಪಟ್ಟಿದ್ದ ಜನ ಇಂದು ರಾಜಾರೋಷವಾಗಿ ಸಾಮಾಜಿಕ ಅಂತರ ಮರೆತು ಓಡಾಡಿರುವುದು ಕಂಡು ಬಂದಿತು. ಪಟ್ಟಣದಲ್ಲಿ ಶೇ.೯೦ರಷ್ಟು ಅಂಗಡಿ -ಮುಂಗಟ್ಟು ತೆರೆದಿವೆ. ಜನರು ನಿರ್ಭಯವಾಗಿ ಖರೀದಿಯಲ್ಲಿ ತೊಡಗಿದ್ದಾರೆ.ಕೆಲವರು ಮಾಸ್ಕ ಧರಿಸಿದ್ದರೆ ಇನ್ನು ಕೆಲವರು ಹಾಗೆ ಸಂಚರಿಸುತ್ತಿದ್ದಾರೆ. ಸಾಮಾಜಿಕ ಅಂತರಕ್ಕೆ ಜನರು ಖ್ಯಾರೇ ಎನ್ನುತ್ತಿಲ್ಲ. ಲಾಕ್?ಡೌನ್ ಸಡಿಲಿಕೆಯಿಂದ ತೆರೆದ ಅಂಗಡಿಗಳು ಮಧ್ಯಾಹ್ನ ೨ ಗಂಟೆಗೆ ಮುಚ್ಚಲ್ಪಟ್ಟು ಮಾರನೇ ದಿನ ಮತ್ತೆ ತೆರಯಲಾಗುತ್ತದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.