March 28, 2025

Bhavana Tv

Its Your Channel

ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ

ಭಟ್ಕಳ: ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಘಟನೆ ಅಂಜುಮನ ಇಂಜಿನಿಯರ್ ಕಾಲೇಜು ಸಮೀಪವಿರುವ ಪುರಸಭೆ ವಾಟರ ಪಿಲ್ಟರ ಟ್ಯಾಂಕ ಬಳಿ ನಡೆದಿದೆ.

ಬಂಧಿತ ಆರೋಪಿಗಳನ್ನು ಮೊಹಮ್ಮದ ಜೀಯಾಮ್ ಸಿರಾಜುಲ್ ಹಸನ್, ಹಿಲಾಲ್ ಸ್ಟ್ರೀಟ್, ಮಗ್ಗುಂ ಕಾಲೋನಿ ನಿವಾಸಿ , ನಸರುದ್ದೀನ ಶೇಖ ಗುಲಾಮ್ ಮೈಹಿದ್ದೀನ್ ಬೇಳ್ನಿ ಬಂದರ ನಿವಾಸಿ ,ನೌಮಾನ ಮೌಲಾ ಶೇಖ ಆಜಾದ ನಗರ ಮುಗ್ಧಂ ಕಾಲೋನಿ ನಿವಾಸಿ, ಮೊಹಮ್ಮದ ಫಾನ ಮೊಹಮ್ಮದ ಇರ್ಷಾದ ಮಗ್ಗುಂ ಕಾಲೋನಿ, ನ್ಯಾಶನಲ್ ರೋಡ್ ನಿವಾಸಿ ಎಂದು ತಿಳಿದು ಬಂದಿದೆ. ಈ ನಾಲ್ವರು ಭಟ್ಕಳದ ಅಂಜುಮನ ಇಂಜಿನಿಯರ್ ಕಾಲೇಜಿನ ಸಮೀಪ ಇರುವ ಪುರಸಭೆ ವಾಟರ ಪಿಲ್ಟರ ಟ್ಯಾಂಕ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಭಟ್ಕಳ ನಗರ ಠಾಣೆಯ ಪೊಲೀಸರು ದಾಳಿ ಮಾಡಿ 15 ಸಾವಿರ ಮೌಲ್ಯದ 370 ಗ್ರಾಂ ಗಾಂಜಾ ಹಾಗೂ 3 ಸಾವಿರ ಮೌಲ್ಯದ 1.8 ಗ್ರಾಂ MDMA(Methaphetamine)ನಿಷೇದಿತ ಮಾದಕ ಪದಾರ್ಥವನ್ನು ಯಾವುದೇ ಪರವಾನಿಗೆ ಇಲ್ಲದೇ ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಹುಂಡೈ ಕಂಪನಿಯ ಕಾರಿನಲ್ಲಿ ಸಂಗ್ರಹಿಸಿಟ್ಟುಕೊAಡಾಗ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ

ಈ ಕಾರ್ಯಾಚರಣೆಯಲ್ಲಿ ಡಿ.ವೈಎಸ್ಪಿ ಮಹೇಶ ಎಂ.ಕೆ ರವರ ಮಾರ್ಗದರ್ಶನದಲ್ಲಿ ಮತ್ತು ಗೋಪಿಕೃಷ್ಣ. ಕೆ.ಆರ್ ಪೋಲೀಸ ನಿರೀಕ್ಷಕರು ಭಟ್ಕಳ ಶಹರ ಠಾಣೆ ರವರ ನೇತ್ರತ್ವದಲ್ಲಿ ಭಟ್ಕಳ ಶಹರ ಪೊಲೀಸ ಠಾಣೆಯ ಪಿ.ಎಸ್.ಐ ನವೀನ ಎಸ್ ನಾಯ್ಕ ಹಾಗೂ ಸಿಬ್ಬಂದಿಯವರಾದ ಅರುಣ ಪಿಂಟೋ, ದೀಪಕ ಎಸ್ ನಾಯ್ಕ, ಮದಾರಸಾಬ ಚಿಕ್ಕೇರಿ, ದೇವು ರಾಮಾ ನಾಯ್ಕ, ಕಿರಣಕುಮಾರ ನಾಯ್ಕ ಕೃಷ್ಣಾ ಎನ್.ಜಿ, ಅನೀಲ ರಾಠೋಡ, ಕಾಶಿನಾಥ ಗೊಟಗುಣಸಿ, ಮಹಾಂತೇಶ ಹಿರೇಮಠ ಕಿರಣ ಪಾಟೀಲ್ ರವರು ದಾಳಿಯನ್ನು ಕೈಗೊಂಡು ಆರೋಪಿತರನ್ನು ವಶಕ್ಕೆ ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರ ಪಡಿಸಿರುತ್ತಾರೆ.ÀiÁಲೀಕರಾದ ನೇನೇಕಟ್ಟೆ ಬಸವರಾಜಪ್ಪ ನಿಧನ

error: