March 26, 2025

Bhavana Tv

Its Your Channel

ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ

ಹೊನ್ನಾವರ: ತಾಲೂಕಿನ ಸಾಲಕೋಡ ಗ್ರಾಮದ ಕಾನಕ್ಕಿಯ ಕೃಷ್ಣಪ್ಪ ನಾರಾಯಣ ನಾಯ್ಕ, ಕಾನಕ್ಕಿ( 84) ತಮ್ಮ ಮನೆಯಲ್ಲಿ ನಿಧನರಾದರು. ಹವ್ಯಾಸಿ ಯಕ್ಷಗಾನ ಕಲಾವಿದರೂ, ಶ್ರಮಜೀವಿಗಳೂ, ಕೃಷಿಕರೂ ಆಗಿದ್ದರು. ಮೃತರು ಹೆಂಡತಿ, ಮೂರು ಜನ ಮಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರ ನಿಧನಕ್ಕೆ ಸಾಲಕೋಡ ಗ್ರಾ.ಪಂ.ಅಧ್ಯಕ್ಷೆ ಅಧ್ಯಕ್ಷರಾದ ಯಮುನಾ ನಾಯ್ಕ, ರಮೇಶ ಭಂಡಾರಿ ತಾ.ಪಂ. ಮಾಜಿ ಸದಸ್ಯರಾದ ಲಕ್ಷ್ಮಿ ಗೊಂಡ, ಮಹೇಶ ಭಂಡಾರಿ ಕೆರೆಕೋಣ, ಕೇಶವ ಶೆಟ್ಟಿ, ಕೆ.ಎಂ. ನಾಯ್ಕ , ಸಚಿನ್ ನಾಯ್ಕ, ಮಹೇಶ ನಾಯ್ಕ ಕಾನಕ್ಕಿ, ರಾಮ ಭಂಡಾರಿ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: