ಭಟ್ಕಳ ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ದೀಪಾವಳಿ ಟ್ರೋಪಿ 2024-25 ರ ತಾಲೂಕಾ ಮಟ್ಟದ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯವನ್ನು ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಈ ಪಂದ್ಯಾವಳಿ ಒಟ್ಟು 6 ತಂಡಗಳು ಬಾಗವಹಿಸಿದ್ದು. ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ವೈಕಿಂಗ್ಸ್ ಭಟ್ಕಳ ಮತ್ತು ವಿನಾಯಕ ಶೆಟ್ಟಿ ಮಾಲಕತ್ವದ ಅನ್ವಿ ಕ್ರಿಕೆಟರ್ಸ್ ನಡುವೆ ನಡೆದ ಹಣಾಹಣಿಯಲ್ಲಿ ಅನ್ವಿ ಕ್ರಿಕೆಟರ್ಸ್ ಜಯಗಳಿಸುವುದರ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತ್ತು.ಬಳಿಕ ಎರಡನೇ ಸಮಿಫೈನಲ್ ಪಂದ್ಯದಲ್ಲಿ ಯಕ್ಷೆ ಚೌಡೇಶ್ವರಿ ಹೊನ್ನಾವರ ಹಾಗೂ ಎಸ್ ಎಸ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ನಡುವೆ ನಡೆದ ಹಣಾಹಣಿ ಪಂದ್ಯದಲ್ಲಿ ಎಸ್. ಎಸ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ತಂಡ ಜಯಗಳಿಸುವುದರ ಮೂಲಕ ಫೈನಲ್ ಗೆ ಲಗ್ಗೆ ಇಟ್ಟಿತ್ತು, ನಂತರ ಅಂತಿಮ ಗಟ್ಟದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅನ್ವಿ ಕ್ರಿಕೆಟರ್ಸ್ ಮತ್ತು ಎಸ್. ಎಸ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ ನಡುವೆ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟಿಂಗ್ ಮಾಡಿ???ನ್ವಿ ಕ್ರಿಕೆಟರ್ಸ್ ತಂಡ 20 ಓವರ್ ನಲ್ಲಿ ಮಹೇಶ ಭಟ್ಟ ಅರ್ಧ ಶತಕ ಹಾಗೂ ಕೇಶವ ನಾಯ್ಕ 46 ರನ್ ಸಹಾಯದಿಂದ 181 ರನ್ ಗಳಿಸಿತು. ನಂತರ 182 ಗಳ ಗುರಿ ಬೆನ್ನಟ್ಟಿದ ಎಸ್. ಎಸ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆ 139 ರನ್’ಗಳಿಸಿ ಆಲ್ ಔಟ್ ಆಗುವ ಮೂಲಕ ರನ್ನರ್ ಅಪ್ ಆಗಿ ಹೊರ ಹೊಮ್ಮಿತು.
ಪಂದ್ಯಾವಳಿಯಲ್ಲಿ ಬೆಸ್ಟ್ ಬ್ಯಾಟ್ಸಮನ್ ಹೊನ್ನಾವರ ತಂಡದ ರಾಜೇಶ ದೇವಾಡಿಗ, ಬೆಸ್ಟ್ ಬೌಲರ್ ಅನ್ವಿ ತಂಡದ ಶೇಖರ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಅನ್ವಿ ತಂಡದ ಆಟಗಾಟ ಮಹೇಶ ಭಟ್ಟ ಪಡೆದುಕೊಂಡರು.,
ಪAದ್ಯಾವಳಿಯ ಚಾಂಪಿಯನ್ ಆಗಿ ಹೊರಹೊಮ್ಮಿದ ಅನ್ವಿ ಕ್ರಿಕೆಟರ್ಸ್ ತಂಡಕ್ಕೆ 55,555 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು ಹಾಗೂ ರನ್ನರ್ ಅಪ್ ತಂಡವಾದ ಎಸ್. ಎಸ್ ಎಸ್ ಸ್ಪೋರ್ಟ್ಸ್ ಕ್ಲಬ್ ಮಾವಿನಕಟ್ಟೆಗೆ 33,333 ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಯಿತು
ಪಂದ್ಯಾವಳಿಯ ಆಯೋಜಕರಾದ ಗೆಳೆಯರ ಬಳಗ, ಭಟ್ಕಳ ಈ ಪಂದ್ಯಾವಳಿ ಯಶಸ್ವಿಯಾಗಿ ನಡೆಸಲು ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು
More Stories
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ಹವ್ಯಾಸಿ ಯಕ್ಷಗಾನ ಕಲಾವಿದ ಕೃಷಿಕ ಕೃಷ್ಣಪ್ಪ ನಾಯ್ಕ ನಿಧನ
ಅಕ್ರಮವಾಗಿ ಗಾಂಜಾ ಮಾರಾಟ, ಭಟ್ಕಳ ಪೊಲೀಸರು ದಾಳಿ ಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ