November 21, 2024

Bhavana Tv

Its Your Channel

ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ

ಭಟ್ಕಳ: ಲಂಚ ಸ್ವೀಕರಿಸುತ್ತಿರುವ ವೇಳೆ ಭಟ್ಕಳ ಪುರಸಭೆ ಮುಖ್ಯಾಧಿಕಾರಿ ನೀಲಕಂಠ ಮೇಸ್ತ, ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಒಳಚರಂಡಿ ಜೋಡಣೆಗೆ 50 ಸಾವಿರ ಲಂಚ ಪಡೆಯುವಾಗಲೇ ನೀಲಕಂಠ ಮೇಸ್ತಾ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಸದ್ಯ ಲೋಕಾಯುಕ್ತ ಅಧಿಕಾರಿಗಳು ಪುರಸಭೆ ಕಚೇರಿಯಲ್ಲಿ ಮುಖ್ಯಾಧಿಕಾರಿ ನೀಲಕಂಠ ಮೇಸ್ತಾರನ್ನು ಬೆಳ್ಳಿಗ್ಗೆಯಿಂದ ಸಂಜೆ ತನಕ ವಿಚಾರಣೆ ನಡೆಸಿ ಅವರ ವಿರುದ್ಧ ದೂರು ದಾಖಲಿಸಿದ್ದಾರೆ

ಮೊಹ್ಮದ ಇದ್ರಿಸ್ ಮೋಹತೇಷಾಮ್ ಎನ್ನುವವರ ನೀಡಿದ ದೂರಿನ ಆಧಾರದ ಮೇಲೆ ಶುಕ್ರವಾರ ಕಾರವಾರ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ಮಾಡಲಾಗಿದೆ. ಒಳಚರಂಡಿ ಜೋಡಣೆ ವಿಚಾರದಲ್ಲಿ ನೀಲಕಂಠ ಮೇಸ್ತಾ ಲಂಚ ಸ್ವೀಕರಿಸುತ್ತಿದ್ದರು. ದೂರುದಾರ ನೀಡಿದ ಹೇಳಿಕೆ ಪ್ರಕಾರ ನೀಲಕಂಠ ಮೇಸ್ತಾ ಒಳಚರಂಡಿ ಜೋಡಣೆಗೆ ಲಂಚಕ್ಕಾಗಿ ಬೇಡಿಕೆಯಿಟ್ಟಿದ್ದರು

ಈ ಬಗ್ಗೆ ಮಾತನಾಡಿದ ಮಾತನಾಡಿದ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಅವರು, ನೀಲಕಂಠ ಮೇಸ್ತಾ ಲಂಚ ಪಡೆಯುವ ವಿಚಾರದಲ್ಲಿ ಮೋಹತೇಷಾಮ ಕಾರವಾರ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರುದಾರ ಸಂಬಂಧಿಕರರ‍್ವರ 20 ಗುಂಟೆ ಜಾಗ ಭಟ್ಕಳದ ಸೂಸಗಡಿಯಲ್ಲಿದ್ದು ಸದ್ಯ ಅವರು ಚೆನೈಯಲ್ಲಿ ಕೆಲಸ ಮಾಡುತ್ತಿದ್ದರು. ಅವರು 2003 ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡಿದ್ದರು. ಆದರೆ ಆ ವೇಳೆಯಲ್ಲಿ ಮನೆ ಕಟ್ಟಲು ಸಾಧ್ಯವಾಗದ ಕಾರಣ ಅದನ್ನು ಮುಂದುಡಿದ್ದರು. ಬಳಿಕ 2015ಕ್ಕೆ ಮನೆ ಕೆಲಸ ಪರ‍್ಣಗೊಳಿಸಿದ್ದರು. ಆದರೆ ಮನೆಯಲ್ಲಿ ವಾಸವಾಗಿರಲಿಲ್ಲ. ಬಳಿಕ ಈ ರ‍್ಷ ಜುಲೈ ತಿಂಗಳಲ್ಲಿ ನಾವು ಮನೆಯಲ್ಲಿ ವಾಸ ಮಾಡುತ್ತೇವೆ. ನೀನು ಪುರಸಭೆ ಯವರಿಂದ ಫಾಮ್ 3 ಪಡೆದುಕೊಳ್ಳುವಂತೆ ಮೋಹತೇಷಾಮ ಬಳಿ ಹೇಳುತ್ತಾರೆ. ಬಳಿಕ ಇವರ ತಮ್ಮ ಸ್ನೇಹಿತರ ಶಕೀಲ್ ಮೋಹತೇಷಾಮ ಗೆ ಮುಖ್ಯಾಧಿಕಾರಿ ಬಳಿ ತೆರಳಿ ವಿಚಾರಿಸಿಕೊಂಡು ಫಾಮ್ 3 ಗೆ ರ‍್ಜಿ ಹಾಕುವಂತೆ ಹೇಳುತ್ತಾರೆ.

ಬಳಿಕ ಶಕೀಲ್ ರ‍್ಜಿ ನೀಡಿ ಮುಖ್ಯಾಧಿಕಾರಿ ಬಳಿ ವಿಚಾರಿಸಿದಾಗ ಅನೇಕ ರ‍್ಷದಿಂದ ತೆರಿಗೆ ತುಂಬದೇ ಬಾಕಿ ಇರುವುದರಿಂದ ತೆರಿಗೆ ಮತ್ತು ದಂಡ ತುಂಬಿದರೆ ಫಾಮ್ 3 ಸಿಗುತ್ತದೆ ಎಂದು ಹೇಳಿದ್ದಾರೆ. ನಂತರ ಜುಲೈ 21 ಗೆ ಹೋಗಿ ಎಷ್ಟು ಹಣ ನೀಡಬೇಕು ಎಂದು ಕೇಳಿದಾಗ 2 ಲಕ್ಷ ಕೊಡಿ ಎಂದು ಪುರಸಭೆ ಮುಖ್ಯಾಧಿಕಾರಿ ಹೇಳಿದ್ದರು. ನಂತರ ದೂರುದಾರರು ತಮ್ಮ ಸಂಬಂಧಿಕರ ಬಳಿ ಹೇಳಿದಾಗ ಹಣ ನೀಡುವಂತೆ ಹೇಳಿದ್ದರು. ಬಳಿಕ ಶಕೀಲ್ ಬಳಿ 2 ಲಕ್ಷ ಕೊಟ್ಟು ಕಳುಹಿಸುತ್ತಾರೆ. ನಂತರ ಮುಖ್ಯಾಧಿಕಾರಿ ಹಣ ತೆಗೆದುಕೊಂಡು ಮನಗೆ ಬರಲು ತಿಳಿಸದ್ದರು. 2 ಲಕ್ಷ ಹಣ ಪಡೆದುಕೊಂಡ ಮುಖ್ಯಾಧಿಕಾರಿ 90.068 ರೂಪಾಯಿ ರಶೀದಿ ನೀಡಿ. ಉಳಿದ ಮೊತ್ತವನ್ನು ತಾವೇ ಇಟ್ಟುಕೊಂದಿದ್ದರು. ಆದರೂ ಕೂಡ ಆ ವೇಳೆ ಫಾಮ್ 3 ನೀಡಿರಲಿಲ್ಲ. ಇಷ್ಟಾದರೂ ಒಂದು ರ‍್ಷದಿಂದ ಫಾಮ್ 3 ನೀಡದೆ ಯುಜಿಡಿ ಕಾಮಗಾರಿ ಕೂಡ ನಡೆಸದೆ ಇರುವುದರಿಂದ ನವೆಂಬರ್ 12 ರಂದು ಶಕೀಲ್ ಪುನಃ ಮುಖ್ಯಾಧಿಕಾರಿ ಬಳಿ ಬಂದು ಮನವಿ ಮಾಡಿಕೊಳ್ಳುತ್ತಾರೆ. ಆ ವೇಳೆ ಮತ್ತೆ ಮುಖ್ಯಾಧಿಕಾರಿ 1 ಲಕ್ಷಕ್ಕೆ ಬೇಡಿಕೆ ಸದ್ಯ ಇಟ್ಟು 50 ಸಾವಿರ ನೀಡಿ ಬಳಿಕ ತಕ್ಷಣ ನಿಮ್ಮ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿದ್ದರು. ಮತ್ತೆ ಲಂಚ ನೀಡಲು ಇಷ್ಟವಿಲ್ಲದ ಕಾರಣ ಗುರುವಾರ ನಮ್ಮ ಕಾರವಾರದ ಕಚೇರಿಗೆ ಬಂದು ದೂರು ನೀಡಿದ್ದರು. ಅದರಂತೆ ನಾವು ಬೆಳ್ಳಿಗ್ಗೆ ಬಂದು ಅವರು ಕಚೇರಿಯಲ್ಲಿ ಲಂಚ ಸ್ವೀಕರಿಸುವಾಗ ದಾಳಿ ಮಾಡಿದಾಗ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ ಎಂದರು

ಲೋಕಾಯುಕ್ತ ದಾಳಿ ವೇಳೆ ಎಸ್ಪಿ ಕುಮಾರ ಚಂದ್ರ ಹಾಗೂ ಪ್ರಭಾರಿ ಲೋಕಾಯುಕ್ತ ಡಿವೈಎಸ್ಪಿ ವಿನಾಯಕ ಬಿಲ್ಲವ ನೇತೃತ್ವದಲ್ಲಿ ಪ್ರಸಾದ ಪನ್ನೆಕರ ಹಾಗೂ 14 ಜನ ಪಿ.ಐ ಸಿಬ್ಬಂದಿಗಳು ಉಪಸ್ಥಿತರಿದ್ದರು. ಇತ್ತಿಚಿಗಷ್ಟೇ ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಅವರ ನೇತೃತ್ವದ ತಂಡ, ಹೊನ್ನಾವರ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ

error: