
ಭಟ್ಕಳ ; ಪಟ್ಟಣದಲ್ಲಿ ಕರೊನಾ ಅಟ್ಟಹಾಸವಾಡುತ್ತಿದ್ದಾಗ ಎದೆಗುಂದದೆ ಪೌರ ಕಾರ್ಮಿರಕೊಂದಿಗೆ ನಿಂತು ಮನೆಮನೆಗೆ ತೆರಳಿ ರಾಸಾಯನಿಕ ಸಿಂಪಡನೆ ಸೇರಿ ಇತರ ಮಹತ್ವದ ಕಾರ್ಯಗಳನ್ನು ನಿಭಾಯಿಸಿದ ಭಟ್ಕಳ ತಾಲೂಕಿನ ಜಾಲಿ ಪ.ಪಂ ಮತ್ತು ಪುರಸಭೆಗೆ ರಾಷ್ಟ್ರೀ ಸಫಾಯಿ ಕರ್ಮಚಾರಿ ಆಯೋಗ ಪ್ರಶಂಸನಾ ಪತ್ರ ನೀಡಿ ಗೌರವಿಸಿದೆ.
ಪಟ್ಟಣ ಕಂಟೇನ್ಮೆಂಟ್ ಝೋನ್ ಆಗಿದ್ದು ಜನರಲ್ಲಿ ಭಯದ ವಾತವಾರಣ ಮೂಡಿತ್ತು. ಆರಂಭದಲ್ಲಿ ಕರೊನಾದ ಕುರಿತು ಅನೇಕ ಉಹಾಪೋಹಗಳಿದ್ದು ಯಾವುದು ಮಾಡಬೇಕು ಮಾಡಬಾರದು ಎನ್ನುವ ಆತಂಕ ಜನರಲ್ಲಿತ್ತು. ಅಧಿಕಾರಿಗಳಿ ಮನದಲ್ಲೂ ಅಂತಹುದೆ ವಾತವರಣವಿತ್ತು. ಇದೆಲನ್ನವನ್ನು ತೊರೆದು ಜನರಲ್ಲಿ ಜಾಗೃತಿ ಮೂಡಿಸಿ, ಕರೊನಾ ಪ್ರಕರಣ ಪತ್ತೆಯಾದಲ್ಲಿ ಸೂಕ್ತ ಕ್ರಮ ಕೈಗೊಂಡು, ಅವರ ಮನೆಯನ್ನು ಸ್ವಚ್ಚಗೊಳಿಸಿ ಜನರಲ್ಲಿ ಜಾಲಿ ಪ.ಪಂ ಮತ್ತು ಪುರಸಭೆ ಭಟ್ಕಳ ಮಹತ್ವದ ಕಾರ್ಯನಿರ್ವಹಿಸಿದೆ. ಅದಕ್ಕಾಗಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ನವದೆಹಲಿ ಪ್ರಶಂಸೆ ವ್ಯಕ್ತಪಡಿಸಿ ಪ್ರಶಂಸನಾ ಪತ್ರ ನೀಡಿದೆ.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.