
ಹೊನ್ನಾವರ : ೨೦೧೯ರಲ್ಲಿ ವಿದ್ಯುತ್ ಅವಘಡದಿಂದ ಗೋವು ಸಾವನಪ್ಪಿದರಿಂದ ವಿದ್ಯುತ್ ಇಲಾಖೆಯಿಂದ ಮಂಜೂರಾದ ಚೆಕ್ ಅನ್ನು ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿ ತಾಲೂಕ ಪಂಚಾಯತಿ ಸಭಾಭವನದಲ್ಲಿ ಫಲಾನುಭವಿಗಳಿಗೆ ವಿತರಿಸಿದರು.
ನಂತರ ಮಾತನಾಡಿ ಸರ್ಕಾರ ಹಲವು ಯೋಜನೆಗಳ ಮೂಲಕ ಸಮಸ್ಯೆ ಆದಾಗ ನೆರವಿಗೆ ಬರುತ್ತದೆ. ಆಕಸ್ಮೀಕ ಅವಘಡದಿಂದ ಗೋವು ಕಳೆದುಕೊಂಡಾಗ ಅದರಿಂದಾಗುವ ಆರ್ಥಿಕ ನಷ್ಟವನ್ನು ತಗ್ಗಿಸುವ ನಿಟ್ಟಿನಲ್ಲಿ ಇಂತಹ ಯೋಜನೆಗಳನ್ನು ತಂದಿದ್ದು ಹೊನ್ನಾವರದಲ್ಲಿ ೩ ಫಲಾನುಭವಿಗಳು ಒಟ್ಟೂ೧ ಲಕ್ಷಕ್ಕೂ ಅಧಿಕ ಪರಿಹಾರ ಪಡೆದಿದ್ದಾರೆ. ಸಮಸ್ಯೆ ಬಂದಾಗ ಕಳೆಗುಂದದೆ ಧೈರ್ಯವಾಗಿ ಎದುರಿಸಲು ಇಂತಹ ಯೋಜನೆ ಆತ್ಮಸೈರ್ಯ ತುಂಬುತ್ತದೆ ಎಂದರು.
ಈ ಸಂದರ್ಭದಲ್ಲಿ ಕಾರ್ಯನಿರ್ವಹಣಾಧಿಕಾರಿ ಕರಿಂ ಅಸದಿ, ಹೆಸ್ಕಾ ಅಭಿಯಂತರರಾದ ಶಂಕರ ಗೌಡ, ಹೆಸ್ಕಾಂ ನೌಕರರ ಸಂಘದ ಅಧ್ಯಕ್ಷ ಗಜಾನನ ನಾಯ್ಕ, ಪಟ್ಟಣ ಪಂಚಾಯತಿ ಸದಸ್ಯರಾದ ವಿಜು ಕಾಮತ್, ಸುಜಾತ ಮೆಸ್ತ, ಮೇಧಾ ನಾಯ್ಕ ಗ್ರಾಮ ಪಂಚಾಯತ ಅಧ್ಯಕ್ಷ ಟಿ.ಎಸ್.ಹೆಗಡೆ, ಬಿಜೆಪಿ ಮಂಡಲಧ್ಯಕ್ಷ ರಾಜೇಶ ಭಂಡಾರಿ, ಯುವ ಮೊರ್ಚಾ ಅಧ್ಯಕ್ಷ ಸಚೀನ ಶೇಟ್ ಮಹಿಳಾ ಮೊರ್ಚಾ ಅಧ್ಯಕ್ಷೆ ಶಾರದಾ ನಾಯ್ಕ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.