April 4, 2025

Bhavana Tv

Its Your Channel

ಹೊನ್ನಾವರದಲ್ಲಿ ೨ವರ್ಷದ ಮಗು ಸೇರಿದಂತೆ ಜಿಲ್ಲೆಯಲ್ಲಿ ೬ ಹೊಸ ಸೊಂಕಿತರ ಪ್ರಕರಣ ಪತ್ತೆ

ಉತ್ತರಕನ್ನಡದಲ್ಲಿ ಕರೋನಾರ್ಭಟ ಮುಂದುವರೆದಿದ್ದು ಇಂದು ಆರು ಮಂದಿಗೆ ಕೋವಿಡ್- ೧೯ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಳಿಯಾಳದಲ್ಲಿ ಮುಂಬೈನಿoದ ವಾಪಸ್ ಆಗಿದ್ದ ನಾಲ್ಕು ವರ್ಷದ ಬಾಲಕ, ಮಂಗಳೂರಿನ ಕಂಟೈನ್ಮೆoಟ್ ಝೋನ್‌ಗೆ ಹೋಗಿ ಬಂದಿದ್ದ ಅಂಕೋಲಾ ಮೂಲದ ೫೦ ವರ್ಷದ ಪುರುಷ, ಮುಂಬೈನಿAದ ವಾಪಸ್ ಆಗಿದ್ದ ೩೭ ವರ್ಷದ ಪುರುಷ ಹಾಗೂ ಆತನ ಎರಡು ವರ್ಷದ ಮಗುವಿಗೂ ಸೋಂಕು ದೃಢಪಟ್ಟಿದೆ ಇತ್ತೀಚಿಗೆ ಸೋಂಕು ದೃಢಪಟ್ಟಿದ್ದ ಯಲ್ಲಾಪುರದ ಸಾರಿಗೆ ಬಸ್ ಕಂಡಕ್ಟರ್ ಸಂಪರ್ಕಕ್ಕೆ ಬಂದಿದ್ದಯಲ್ಲಾಪುರದ ೨೬ ವರ್ಷದ ಸಾರಿಗೆ ಸಿಬ್ಬಂದಿ, ಮುಂಬೈನಿAದ ವಾಪಸ್ ಆಗಿದ್ದ ಸೋಂಕಿತನ ಸಂಪರ್ಕಕ್ಕೆ ಬಂದಿದ್ದ ೨೮ ವರ್ಷದ ಯಲ್ಲಾಪುರ ಮೂಲದ ಯುವಕನಿಗೂ ಸೋಂಕು ದೃಢಪಟ್ಟಿದೆ. ಅಂಕೋಲಾ ಪ್ರಕರಣ ನೆರೆಯ ಕುಮಟಾ ತಾಕಲೂಕಿಗೂ ಆತಂಕ ಮನೆಮಾಡಿದ್ದು ಆತನು ಕುಮಟಾ ಹಾಗೂ ಆತನ ಸಂಪರ್ಕಕ್ಕೆ ಬಂದಿದ್ದವರು ಹೊನ್ನಾವರ ಕುಮಟಾ, ಅಂಕೋಲದಲ್ಲಿ ಸಂಚಾರ ನಡೆಸಿರುವುದರಿಂದ ಇನ್ನಷ್ಟು ಆತಂಕ ಮನೆಮಾಡಿದೆ. ಹೊನ್ನಾವರದಲ್ಲಿ ಇಂದು ಪತ್ತೆಯಾದ ಪ್ರಕರಣದ ಕ್ವಾರಂಟೈನಲ್ಲಿದ್ದವರಾದ್ದರಿAದ ಆತಂಕವಿಲ್ಲ. ಮುಂಬೈನಿoದ ಜೂನ್ ೨೧ರಂದು ಆಗಮಿಸಿ ನೇರವಾಗಿ ಹೋಟೆಲ್ ಕ್ವಾರಂಟೈನ್‌ನಲ್ಲಿದ್ದರು. ಒಂದೇ ಕುಟುಂಬದ ಮೂವರು ತಾಲೂಕಿನ ಬಳಕೂರು ಮೂಲದವರಾಗಿದ್ದು ತಂದೆ ಹಾಗೂ ಮಗುವಿನ ವರದಿಯಲ್ಲಿ ಪಾಸಟಿವ್ ಬಂದಿದ್ದು, ಪತ್ನಿಯ ವರದಿ ಬಾಕಿ ಇದೆ. ದಿನದಿಂದ ದಿನಕ್ಕೆ ತಾಲೂಕಿನಲ್ಲಿ ಸೊಂಕಿತರ ಸಂಖ್ಯೆ ಹೆಚ್ಚುತ್ತಲ್ಲಿದ್ದು ಇನ್ನಷ್ಟು ಆತಂಕ ತಾಲೂಕಿನ ಜನತೆಯದ್ದಾಗಿದೆ.

error: