December 22, 2024

Bhavana Tv

Its Your Channel

ರಸ್ತೆಯಲ್ಲಿ ಸಿಕ್ಕ ದೊಡ್ಡ ಮೊತ್ತದ ಹಣವನ್ನು ಮರಳಿ ಹಣ ಕಳೆದುಕೊಂಡವರಿಗೆ ಮುಟ್ಟಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಬಡ ವಿದ್ಯಾರ್ಥಿನಿ

ಕುಮಟಾ:
ತಾಲೂಕಿನ ಹೊನ್ಮಾವ ನಿವಾಸಿ ಗುಡಿಗಾರಗಲ್ಲಿ ಶಾಲೆಯ ೫ ನೇ ತರಗತಿಯ ವಿದ್ಯಾರ್ಥಿನಿ ಲಕ್ಷ್ಮಿ ಪರಮೇಶ್ವರ್ ಉಪ್ಪಾರ್ ಎಂದಿನAತೆ ಶುಕ್ರವಾರ ತನ್ನ ಮನೆಯಿಂದ ಪಟ್ಟಣದ ಗುಡಿಗಾರಗಲ್ಲಿ ಶಾಲೆಗೆ ನಡೆದು ಹೊಗುತ್ತಿದ್ದ ವೇಳೆ ಆಕೆಗೆ ರಸ್ತೆಯಲ್ಲಿ ಏನೋ ಬಿದ್ದಿರುವುದನ್ನು ಕಂಡು ಎತ್ತಿಕೊಂಡಿದ್ದಾಳೆ. ನಂತರ ಅದು ಹಣದ ಕಟ್ಟು ಎಂಬುದು ಅವಳ ಅರಿವಿಗೆ ಬಂದಿದೆ. ನಂತರ ಆಕೆ ತಕ್ಷಣ ಆ ಹಣವನ್ನ ತೆಗೆದುಕೊಂಡ ತನ್ನ ಶಾಲೆಗೆ ಹೋಗಿ ಶಿಕ್ಷಕರ ಬಳಿ ಕೊಟ್ಟು, ಶಾಲೆಗೆ ಬರುವಾಗ ದಾರಿಮಧ್ಯೆ ಈ ಹಣ ಸಿಕ್ಕಿದೆ ಎಂಬುದಾಗಿ ತಿಳಿಸಿದ್ದಾಳೆ. ಆದರೆ ರಸ್ತೆಯಲ್ಲಿ ಹಣ ಕಳೆದುಕೊಂಡವರು ಯಾರು ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಪಟ್ಟಣದ ದೇವರಹಕ್ಕಲ ನಿವಾಸಿ ಸುಮಾ ದಯಾನಂದ ವಾರೇಕರ್ ಎನ್ನುವವರು ಶುಕ್ರವಾರ ಧರ್ಮಸ್ಥಳ ಸಂಘದ ಸದಸ್ಯರ ಸುಮಾರು ೧೦೦೦೦ ರೂಪಾಯಿ ಹಣವನ್ನು ಸೇರಿಸಿಕೊಂಡು ಅದನ್ನು ಸಂಘಕ್ಕೆ ತುಂಬಲು ತೆಗೆದುಕೊಂಡು ಹೋಗುತ್ತಿದ್ದಾಗ ಆ ಹಣ ರಸ್ತೆಯಲ್ಲಿ ಬಿದ್ದು ಕಳೆದಿತ್ತು ಎನ್ನಲಾಗಿದೆ. ಹಣ ಕಳೆದು ಹೋಗಿರುವ ವಿಚಾರವನ್ನ ಸುಮಾ ಎಲ್ಲಾ ಕಡೆ ಹೇಳಿಕೊಂಡಿದ್ದಾಳೆ. ತಾನು ಓಡಾಡಿದ್ದ ರಸ್ತೆ ಹೆಚ್ಚಾಗಿ ಶಾಲಾ ವಿದ್ಯಾರ್ಥಿಗಳು ಸಂಚರಿಸುವ ರಸ್ತೆಯೂ ಅಗಿದ್ದು, ಈ ಹಿನ್ನೆಲೆ ಸುಮಾ ವಾರೇಕರ್ ಗುಡಿಗಾರಗಲ್ಲಿ ಶಾಲೆ ಶಿಕ್ಷಕರಿಗೆ ವಿಷಯ ತಿಳಿಸಲು ಮುಂದಾಗಿದ್ದಾಳೆ. ಈ ವೇಳೆ ಶಿಕ್ಷಕರು ತಮ್ಮ ಶಾಲೆಯ ವಿದ್ಯಾರ್ಥಿನಿ ಲಕ್ಷ್ಮೀ ಎಂಬಾತಳಿಗೆ ರಸ್ತೆಯಲ್ಲಿ ಹಣ ಸಿಕ್ಕಿದ್ದು ಅದನ್ನು ತಂದು ಶಿಕ್ಷಕರ ಬಳಿ ನೀಡಿರುವುದಾಗಿ ತಿಳಿಸಿದ್ದಾರೆ. ನಂತರ ಅದು ಸುಮಾ ವಾರೇಕರ್ ಅವರಿಗೆ ಸಂಬAಧಿಸಿದ ಹಣವೆಂಬುದನ್ನು ಖಚಿತ ಪಡಿಸಿಕೊಂಡ ಶಾಲಾ ಶಿಕ್ಷಕರು ವಿದ್ಯಾರ್ಥಿನಿ ಲಕ್ಷ್ಮಿಯ ಮುಖೇನ ಹಣವನ್ನು ಹಿಂದಿರುಗಿಸಿದ್ದಾರೆ. ಗುಡಿಗಾರಗಲ್ಲಿ ಶಾಲೆಯ ವಿದ್ಯಾರ್ಥಿನಿಯ ಪ್ರಾಮಾಣಿಕತೆ ಹಾಗೂ ಸಮಯ ಪ್ರಜ್ಞೆಯನ್ನು ಶಾಲೆಯ ಶಿಕ್ಷಕ ವೃಂದ ಹಾಗೂ ಸಾರ್ವಜನಿಕರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

error: