December 22, 2024

Bhavana Tv

Its Your Channel

ಕೃಷ್ಣರಾಜಪೇಟೆ ಪಟ್ಟಣದ ಶ್ರೀ ಲಕ್ಷ್ಮೀ ರೈಸ್ ಮಿಲ್ ನಲ್ಲಿ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದ ತಹಶೀಲ್ದಾರ್ ಎಂ.ಶಿವಮೂರ್ತಿ …

ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ರೈಸ್ ಮಿಲ್ ನಲ್ಲಿ ಭತ್ತದ ರಾಶಿಗೆ ವಿಶೇಷಪೂಜೆ ಸಲ್ಲಿಸಿದ ಶಿವಮೂರ್ತಿ ಅವರು ಅಧಿಕೃತವಾಗಿ ಭತ್ತ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿದರು… ರೈತರು ಭತ್ತ ಖರೀದಿ ಕೇಂದ್ರಕ್ಕೆ ಸರಬರಾಜು ಮಾಡುವ ಭತ್ತಕ್ಕೆ ಪ್ರತೀ ಕ್ವಿಂಟಾಲ್ ಗೆ 1830 ರೂ ದರದಲ್ಲಿ ಖರೀದಿ ಮಾಡಲಾಗುವುದು..ರೈತ ಬಾಂಧವರು ತಮ್ಮ ಪಹಣಿಯೊಂದಿಗೆ ಪರಿಶುದ್ಧವಾದ ಗುಣಮಟ್ಟದ ಭತ್ತವನ್ನು ಸರಬರಾಜು ಮಾಡಬೇಕು ಎಂದು ತಹಶೀಲ್ದಾರ್ ಶಿವಮೂರ್ತಿ ಮನವಿ ಮಾಡಿದರು….
ಈ ಸಂದರ್ಭದಲ್ಲಿ ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಎಸ್.ಮಂಜುನಾಥ್, ಆಹಾರ ನಾಗರಿಕ ಸರಬರಾಜು ಇಲಾಖೆಯ ನಿರೀಕ್ಷಕ ಮಂಜುನಾಥ್, ಎಪಿಎಂಸಿ ಮಾಜಿನಿರ್ದೇಶಕ ಕೆ.ವೇಣುಗೋಪಾಲ್, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಪುರುಷೋತ್ತಮ್ ಮತ್ತು ತಾಲ್ಲೂಕಿನ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು…

error: