December 21, 2024

Bhavana Tv

Its Your Channel

ಶ್ರೀರಾಮ ಕ್ಷೇತ್ರದ ಟ್ರಸ್ಟಿಯಾಗಿದ್ಸ ಜೆ.ಎನ್.ನಾಯ್ಕ,( ಬಾಬು ಮಾಸ್ತರು) ನಿಧನ

ಭಟ್ಕಳ:ತಾಲೂಕಿನ ನಾಮಧಾರಿ ಸಮಾಜದ ಹಿರಿಯರು ಶ್ರೀ ನಿಚ್ಚಲಮಕ್ಕಿ ವೆಂಕಟರಮಣ ಧೇವಸ್ಥಾನದ ಮಾಜಿ ಅಧ್ಯಕ್ಷರು, ಹಾಗೂ ಧರ್ಮಸ್ಥಳದ ಶ್ರೀರಾಮ ಕ್ಷೇತ್ರದ ಟ್ರಸ್ಟಿಯಾಗಿದ್ಸ ಶ್ರೀ ಜೆ.ಎನ್.ನಾಯ್ಕ,( ಬಾಬು ಮಾಸ್ತರು) (೮೪) ಅಸೌಖ್ಯದಿಂದ ತಮ್ಮ ಮುಂಡಳ್ಳಿ ಯ ಸ್ವಗೃಹದಲ್ಲಿ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ. ಭಟ್ಕಳ ನಾಮಧಾರಿ ಸಮಾಜದ ಬೀಷ್ಮರೆಂದೇ ಪ್ರಖ್ಯಾತರಾಗಿದ್ದ ಇವರು ಸಮಾಜದ ಸಂಘಟನೆಯಲ್ಲಿ ಹಲವಾರು ಸೇವಾ ಸಂಸ್ಥೆಗಳಲ್ಲಿ , ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ
ಜನಾನುರಾಗಿಯಾಗಿದ್ದರು, ಮೃತರ ಪತ್ನಿ,ಇಬ್ಬರು ಪುತ್ರರು, ಐವರು ಪುತ್ರಿಯರು,ಸೇರಿದಂತೆ ಹಲವಾರು ಬಂಧುಬಳಗವನ್ನು ಅಗಲಿದ್ದಾರೆ, ಇವರ ನಿಧನಕ್ಕೆ , ನಾಮಧಾರಿ ಸಮಾಜದ ಗುರುಮಠ ಶ್ರೀ ನಿಚ್ಚಲಮಕ್ಕಿ ದೇವಸ್ಥಾನದ ಆಡಳಿತ ಮಂಡಳಿ ,ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಗುರುದೇವ ಮಠ ,ಭಟ್ಕಳ ಶ್ರೀರಾಮ ಕ್ಷೇತ್ರ ಸೇವಾ ಸಮಿತಿ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳು ಶೋಕ ವ್ಯಕ್ತಪಡಿಸಿವೆ.

error: