December 21, 2024

Bhavana Tv

Its Your Channel

ಹೆಗಡೆ ಪಂಚಾಯಿತಿ ವ್ಯಾಪ್ತಿಯ ಲುಕ್ಕೇರಿ ದೇವರಬೋಳೆ ನಿವಾಸಿಗಳು ನೀರಿನ ಸಮಸ್ಯೆಬಗ್ಗೆ ಶಾಸಕ ದಿನಕರ ಶೆಟ್ಟರಿಗೆ ಗುರುವಾರ ಮನವಿ

ಕುಮಟಾ ; ದೇವರಬೋಳೆ ಬಾಗದ ೭೪ ಕುಟುಂಬಗಳು ವಾಸಿಸುತ್ತಿರುವ ಭಾಗದ ನೀರನ್ನು ತೆಗೆದು ಬೇರೆ ವಾರ್ಡುಗಳಿಗೆ ಪೂರೈಸುತ್ತಿದ್ದಾರೆ. ಸುಮಾರು ೧೩ ಟ್ಯಾಂಕಗಳಿಗೆ ನೀರು ಸಾಗಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಬಾವಿ ಕೆರೆಗಳಿಗೆ ಸಮಸ್ಯೆಯಾಗುತ್ತಿದೆ. ಬರದ ಸಮಸ್ಯೆಕಾಡುತ್ತಿದೆ. ಹೀಗಾಗಿ ೧೩ ಟ್ಯಾಂಕ ಹೊರತಾಗಿ ಹೆಚ್ಚು ಟ್ಯಾಂಕಗೆ ಬಳಸಬಾರದು. ೨೪ ಗಂಟೆ ಪಂಪ್ ಬಳಸದೇ ಸಮಯಮಿತಿ ನಿಗದಿಪಡಿಸಬೇಕು. ಇದೀಗ ಶಾಂತವಾಗಿ ಮನವಿ ಸಲ್ಲಿಸುತ್ತಿದ್ದು ನಮ್ಮ ವಿನಂತಿ ಪುರಸ್ಕರಿಸದಿದ್ದರೆ ಮತ್ತೆ ಪುನಃ ನಮ್ಮ ಸಮಸ್ಯೆ ಹೇಳಿಕೊಂಡು ಜನಪ್ರತಿನಿಧಿಗಳು, ಅಧಿಕಾರಿಗಳ ಬಳಿ ಬರುವುದಿಲ್ಲ. ಟ್ಯಾಂಕ್ ಕಿತ್ತು ಬೀಸಾಡಬೇಕಾಗುತ್ತದೆ ಬೀದಿಗಿಳಿದು ಹೋರಾಡಬೇಕಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದರು.


ಮನವಿ ಸ್ವೀಕರಿಸಿದ ಶಾಸಕ ಶೆಟ್ಟಿ ಮಾತನಾಡಿ, ನಾವು ಜನಪ್ರಿನಿಽಗಳು ಹಾಗೂ ಅಽಕಾರಿಗಳು ಗ್ರಾಮಸ್ಥರ ಪರವಾಗಿ ಇದ್ದೇವೆ. ಇಲ್ಲಿಗೆ ಇಓ ಸಿ.ಟಿ.ನಾಯ್ಕ ಹಾಗೂ ಇಂಜಿನಿಯರ್ ರಾಘವೇಂದ್ರ ನಾಯ್ಕರನ್ನು ಕರೆಸಿ ಸ್ಥಳಪರೀಶಿಲಿಸಿ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇನೆ. ಪಂಚಾಯತಿ ಅಧ್ಯಕ್ಷ ಮಂಜುನಾಥ ಪಟಗಾರರಿಗೂ ದೂರವಾಣಿ ಮೂಲಕ ಮಾತನಾಡಿದ್ದೇನೆ. ಜನರಿಗೆ ಅನ್ಯಾಯವಾಗಬಾರದು. ಆ ರೀತಿಯಲ್ಲಿ ಸ್ವತಃ ಮುಂದೆ ನಿಂತು ಕೆಲಸ ಮಾಡುವುದಾಗಿ ತಿಳಿಸಿದರು.
.

error: