ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ (ರಿ) ರಾಜ್ಯಘಟಕ- ಧಾರವಾಡ
ಧಾರವಾಡ.ಮೇ.೧೮. ಕೊವಿಡ್ ಎರಡನೇ ಅಲೆಗೆ ಸಿಕ್ಕಿ ನೂರಾರು ಶಿಕ್ಷಕರು ಸತ್ತಿರುವ ಸುದ್ದಿ ಎಲ್ಲರಲ್ಲು ನೋವನ್ನು ತಂದಿದೆ.ಶಿಕ್ಷಕರ ಇಂತಹ ಸಾವುಗಳು ನಿಜಕ್ಕೂ ದುರದೃಷ್ಟಕರವೇ ಸರಿ. ಅವರನ್ನೇ ಅವಲಂಬಿಸಿದ್ದ ಅವರ ಕುಟುಂಬಗಳು ಇಂದು ದುಃಖದಲ್ಲಿ ಮರುಗುತ್ತಿವೆ. ಇಂತಹ ದುಸ್ಥಿತಿ ನಿಜಕ್ಕೂ ಯಾರಿಗು ಬರಬಾರದಿತ್ತು ಎಂದು ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ರವರು ತಮ್ಮ ಮನಸಿನ ನೋವನ್ನು ಹಂಚಿಕೊ0ಡಿದ್ದಾರೆ.
ಸರ್ಕಾರಿ ,ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಯಾವುದೇ ಶಿಕ್ಷಕರು ಇಂದು ಕೊರೊನಾ ಗೆ ಬಲಿಯಾಗಿರಬಹುದು ಅಂತಹ ಶಿಕ್ಷಕರ ಕುಟುಂಬಗಳಿಗೆ ಪರಿಹಾರ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಉಪಚುನಾವಣೆ ಕರ್ತವ್ಯದ ಮೇಲೆ ಹಾಗೂ ಕೊವಿಡ್ ಕರ್ತವ್ಯದ ಮೇಲೆ ಸಾವನ್ನಪ್ಪಿದ ಶಿಕ್ಷಕರೇ ಹೆಚ್ಚಾಗಿದ್ದು, ಪ್ರತೀ ಶಿಕ್ಷಕರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ ಅವರಿಗೆ ದೊರೆಯಬೇಕಾದ ಪರಿಹಾರ ಹಣವನ್ನು ಕೂಡಲೇ ಅವರ ಕುಟುಂಬಗಳಿಗೆ ನೀಡಬೇಕೆಂದು ಸರ್ಕಾರ ವನ್ನು ಈ ಮೂಲಕ ಒತ್ತಾಯಿಸುತ್ತೇವೆ. ಹಾಗೆಯೇ ಕೋವಿಡ್ ಕರ್ತವ್ಯಕ್ಕೆ ನಿಯೋಜಿಸುವ ಶಿಕ್ಷಕರುಗಳಿಗೆ ಸೂಕ್ತವಾದ ರಕ್ಷಣ ಪಿಪಿಇ ಕಿಟ್ ಒದಗಿಸಬೇಕು, ಪ್ರತೀ ಶಿಕ್ಷಕ ಸಮೂಹವನ್ನು ಕೊರೊನಾ ವಾರಿಯರ್ ಎಂದು ಪರಿಗಣಿಸಬೇಕು,ಪ್ರತೀ ಶಿಕ್ಷಕ ಶಿಕ್ಷಕಿಯರುಗಳಿಗೆ ಕೊವಿಡ್ ಲಸಿಕೆ ಹಾಕಿಸಿ ಕೊಳ್ಳಲು ಮೊದಲ ಸಾಲಿನ ಆದ್ಯತೆ ನೀಡಬೇಕೆಂದು ಘನ ಸರ್ಕಾರವನ್ನು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕಿನ ಅಧ್ಯಕ್ಷರು,ಕಾರ್ಯದರ್ಶಿಗಳು, ಹಾಗೂ ಎಲ್ಲಾ ಪದಾದಿಕಾರಿಗಳ ವತಿಯಿಂದ ಡಾ.ಲತಾ.ಎಸ್.ಮುಳ್ಳೂರ ಸಂಸ್ಥಾಪಕ ರಾಜ್ಯಾಧ್ಯಕ್ಷರು. ಶ್ರೀಮತಿ ಜ್ಯೋತಿ. ಹೆಚ್. ರಾಜ್ಯ ಪ್ರಧಾನ ಕಾರ್ಯದರ್ಶಿ. ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಒತ್ತಾಯಿಸಿದೆ.
More Stories
ಜಿಲ್ಲೆಗೆ ಪ್ರತಿದಿನ 40 ಟನ್ ಆಕ್ಸಿಜನ್ ಬಳಕೆಯಾಗುತ್ತಿದೆ ; ಬೆಡ್ ಹಾಗೂ ಆಕ್ಸಿಜನ್ ಸೇರಿದಂತೆ ಕೋವಿಡ್ ಚಿಕಿತ್ಸೆಗೆ ಯಾವುದೇ ಕೊರತೆ ಇಲ್ಲ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ