
ಕಾರ್ಕಳ: ಶ್ರೀರಾಮ ಸೇನೆ ಮುಖ್ಯಸ್ಥ, ಹಾಗೂ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ತಮ್ಮ ಪಾಂಚನ್ಯ ಕಚೇರಿಯಲ್ಲಿ ಜರುಗಿದ ಪತ್ರಿಕಾಗೋಷ್ಠಿ ಉದ್ದೇಶಿಸಿಮಾತನಾಡಿದ ಅವರು ಈ ಕ್ಷೇತ್ರದಲ್ಲಿ ಜಯಗಳಿಸಿಬಂದಲ್ಲಿ ಕಾರ್ಕಳ ಪತ್ರಕರ್ತರ ಸಂಘದ ಸದಸ್ಯರಿಗೆ ಪತ್ರಿಕ ಭವನವನ್ನು ನಿರ್ಮಿಸಿ ಕೊಡುತ್ತೇನೆ. ಹಾಗೂ ಪತ್ರಕರ್ತರ ಸಮಸ್ಯೆಯನ್ನು ಸಾಧ್ಯವಾದಷ್ಟು ಬಗೆಹರಿಸಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಕಾರ್ಕಳ ಕ್ಷೇತ್ರದಲ್ಲಿ ಕಾಂಗ್ರೆಸ್ ಸಂಪೂರ್ಣ ನೆಲಕಚ್ಚಿ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ನಾವು ಹಣದ ಬಲದಿಂದ ಎಲ್ಲವನ್ನು ಖರೀದಿಸುತ್ತೇವೆ ಎಂಬ ಅಹಂಕಾರದಿAದ ಮತ ಬೇಟೆಗೆ ಹೊರಟಿದ್ದಾರೆ ಅದು ಕಾಂಗ್ರೆಸ್ಸಿಗರಿAದ ಸಾಧ್ಯವಿಲ್ಲ ಎಂದು ಹೇಳಿದರು. ಪ್ರಾಮಾಣಿಕ ಹಾಗೂ ನಿಷ್ಠಾವಂತ ಶಾಸಕರಾಗಿದ್ದ ಗೋಪಾಲ ಭಂಡಾರಿ ಅವರ ನಿಧನ ನಂತರ ಕಾರ್ಕಳ ಕ್ಷೇತ್ರದ ಕಾಂಗ್ರೆಸ್ ಮೂಲೆಗುಂಪು ಆಗಿದೆ ಎಂದು ಹೇಳಿದರು. ಇದೇ ೩೦ನೇ ತಾರೀಕಿನಂದು ಕಾರ್ಕಳ ಸಚಿವರ ಗುಳುಂ ಕಾರ್ಡ್ ದಾಖಲೆ ಸಮೇತ ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದರು. ಈ ಕ್ಷೇತ್ರದಲ್ಲಿ ಬಹಳಷ್ಟು ಕೃಷಿಕರಿದ್ದು ಇಷ್ಟರವರೆಗೆ ಕೃಷಿಕರಿಗೆ ಯಾವ ಸವಲತ್ತು ನೀಡದೆ ಸಚಿವರು ಸತಾಯಿಸುತ್ತಿದ್ದಾರೆ ಈ ಸಲದ ಚುನಾವಣೆಯಲ್ಲಿ ಸಚಿವರಿಗೆ ಸೂಕ್ತ ರೀತಿಯ ಉತ್ತರ ಸಿಗಲಿದೆ ಎಂದು ಹೇಳಿದರು. ಕಾರ್ಕಳಕ್ಕೆ ಬೆಂಗಳೂರು ,ಕೇರಳ, ಹಾಗೂ ಗೋವಾ ತುಂಬಾ ಹತ್ತಿರವಾಗಿದೆ. ಮೂರು ರಾಜ್ಯಗಳಿಗೂ ಬಹಳ ಅನುಕೂಲ ವಾಗುವಂತಹ ಉತ್ತಮ ಮಾರುಕಟ್ಟೆಯನ್ನು ಕಾರ್ಕಳದಲ್ಲಿ ನಿರ್ಮಿಸುತ್ತೇವೆ. ಇದರಿಂದ ಕೃಷಿಕರಿಗೆ ಬಹಳ ಪ್ರಯೋಜನವಾಗಲಿದೆ ಎಂದು ಹೇಳಿದರು. ಮಹಿಳಾಧ್ಯಕ್ಷೆ ದಿವ್ಯ ನಾಯಕ್, ನ್ಯಾಯವಾದಿ ಹರೀಶ್ ಅಧಿಕಾರಿ, ವಿವೇಕಾನಂದ ಶೆನೈ ಚಿತ್ತರಂಜನ್ ಶೆಟ್ಟಿ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ವರದಿ : ಅರುಣ ಭಟ್,ಕಾರ್ಕಳ
More Stories
ಪಾದಚಾರಿ ಮೇಲೆ ಕ್ರೇನ್ ಹರಿದು ಸ್ಥಳದಲ್ಲೆ ಸಾವು,
ಕಾರ್ಕಳ ಪರಶುರಾಮ ಮೂರ್ತಿ ಸಾಕ್ಷಿ ನಾಶ ಯತ್ನ: ಉದಯ ಕುಮಾರ್ ಶೆಟ್ಟಿ
ಅಜೆಕಾರು ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ರಥೋತ್ಸವ: ಸಾವಿರಾರು ಭಕ್ತರು ಭಾಗಿ