March 30, 2025

Bhavana Tv

Its Your Channel

ಕಾರ್ಕಳ ಪುರಸಭೆ ವ್ಯಾಪ್ತಿಯಲ್ಲಿ ನೀರಿಗೆ ತತ್ವಾರ ಎದುರಾಗುವ ಲಕ್ಷಣ

ಕಾರ್ಕಳ: ಪಟ್ಟಣ ಪ್ರದೇಶಗಳಿಗೆ ಪ್ರಮುಖವಾಗಿ ನೀರು ಪೂರೈಕೆ ಮಾಡುವ ಮುಂಡ್ಲಿ ಆಣೆಕಟ್ಟೆ ನಲ್ಲಿ ಜಲ ಮಟ್ಟ ತೀವ್ರ ಮಟ್ಟದಿಂದ ಕುಸಿತಿದ್ದು ನೀರಿನ ಸಮಸ್ಯೆ ಮುಂದಿನ ದಿನಗಳಲ್ಲಿ ಎದುರಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಕಾರ್ಕಳ ಪುರಸಭೆಯ ಮುಖ್ಯ ಅಧಿಕಾರಿ ರೂಪ ಜೆಶೆಟ್ಟಿಯವರು ಮಾಧ್ಯಮದೊಂದಿಗೆ ತಮ್ಮ ಕಚೇರಿಯಲ್ಲಿ ಹೇಳಿದರು. ನಂತರ ಮಾತನಾಡಿದ ಅವರು ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗತ ಕ್ರಮವಾಗಿ ಪುರಸಭೆ ಮುಂದಿನ ದಿನಗಳಲ್ಲಿ ಹೊಸ ಕ್ರಮಕ್ಕೆ ಮುಂದಾಗಿದೆ ಈ ಹಿಂದೆ ಪ್ರತಿನಿತ್ಯ ವಾರ್ಡಿನ ಎಲ್ಲ ಮನೆಗಳಿಗೆ ನೀರು ಬರುತ್ತಿದ್ದು ಮುಂದಿನ ಮಳೆಗಾಲದ ವರೆಗೆ ನೀರನ್ನು ಜನ ಮಿತವಾಗಿ ಬಳಸಿಕೊಳ್ಳುವಂತೆ ಮುಖ್ಯಾಧಿಕಾರಿಯವರು ಮಾಧ್ಯಮದ ಮೂಲಕ ವಿನಂತಿಸಿ ಕೊಂಡರು. ಅಲ್ಲದೆ ಪ್ರತಿನಿತ್ಯ ಬರುತ್ತಿದ್ದ ನೀರು ಇನ್ನು ಎರಡು ದಿನಕ್ಕೊಮ್ಮೆ ಬರಲಿದೆ ಹೀಗಾಗಿ ಜನರು ನೀರನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತದೆ ಎಂದು ಮುಖ್ಯ ಅಧಿಕಾರಿ ಯವರು ತಿಳಿಸಿದರು. ಮುಂಡ್ಲಿ ಜಲಾಶಯ ಬತ್ತುತ್ತಿರುವ ಪರಿಣಾಮ ಮುಂದಿನ ದಿನಗಳಲ್ಲಿ ರಾಮ ಸಮುದ್ರದ ನೀರು ಇಡೀ ಪುರಸಭೆ ವ್ಯಾಪ್ತಿಗೆ ಆಧಾರವಾಗಲಿದೆ ಎಂದು ಹೇಳಿದರು.


ಭಾವನಾ ಟಿವಿಗಾಗಿ ಅರುಣ ಭಟ್ ಕಾರ್ಕಳ

error: