May 5, 2024

Bhavana Tv

Its Your Channel

ಭಟ್ಕಳದ ಗಾಯಕಿ ಪವಿತ್ರ ನಾಯ್ಕ ಅವರಿಗೆ ಭಾರತ ಗೌರವ ಪ್ರಶಸ್ತಿ

ಭಟ್ಕಳ : ಕನ್ನಡ ಸಾಹಿತ್ಯ ಪರಿಷತ್ತು ದಕ್ಷಿಣ ಗೋವಾ ಜಿಲ್ಲಾ ಘಟಕ, ಸಾಲಸೇಟ ತಾಲೂಕಾ ಘಟಕ, ಹಾಗೂ ಸ್ನೇಹಯುವ ಸಾಂಸ್ಕೃತಿಕ ಸಂಘ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಮಡಗಾಂವ ಲಕ್ಷ್ಮೀ ಎಂಟರ್‌ಪ್ರೈಸಸ್ ಹೋಟೆಲ್‌ನಲ್ಲಿ ಆಯೋಜಿಸಿದ್ದ ಕಲಾ ಸಂಗಮ ಗೋವಾ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಟ್ಕಳದ ಉದಯೋನ್ಮುಕ ಗಾಯಕಿ ಪವಿತ್ರ ನಾಯ್ಕ ಅವರಿಗೆ ಸಂಗೀತ ಕ್ಷೇತ್ರದ ಸಾಧನೆಯನ್ನ ಗುರುತಿಸಿ ಭಾರತ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇವರು ಉತ್ತರ ಕನ್ನಡದ ಭಟ್ಕಳದ ನಿವಾಸಿಯಾಗಿದ್ದು ಬಡತನದಲ್ಲೂ ತಮ್ಮ ಪ್ರತಿಭೆಯನ್ನು ಚಲಬಿಡದೆ ಸಾಧಿಸಿ ಉತ್ತಮ ಗಾಯಕಿಯಾಗಿ ಉತ್ತರ ಕನ್ನಡದಲ್ಲಿ ಹೆಸರು ಗಳಿಸಿದ್ದಾರೆ. ಅನೇಕ ಸಂಘ ಸಂಸ್ಥೆಗಳಿAದ ಪ್ರಶಸ್ತಿಗಳನ್ನ ಪಡೆದ ಇವರು ಈಗ ತಮ್ಮದೇ ಆದ ಆರ್ಕೇಸ್ಟಾç ತಂಡ ಸ್ಥಾಪಿಸಿ ಕಾರ್ಯಕ್ರಮವನ್ನು ನಿಡುತ್ತ ಹೆಸರನ್ನು ಗಳಿಸಿದ್ದಾರೆ.

ಗೋವಾದ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್, ಕಸಾಪ ಗೋವಾ ರಾಜ್ಯಾಧ್ಯಕ್ಷ ಡಾ.ಸಿದ್ಧಣ್ಣ ಮೇಟಿ, ಕರ್ನಾಟಕದ ಸಾರ್ವಜನಿಕ ಗೃಂಥಾಲಯ ಇಲಾಖೆಯ ನಿರ್ದೇಶಕ ಸತೀಶಕುಮಾರ ಹೊಸ್ಮನಿ, ಕಸಾಪ ಗೋವಾ ರಾಜ್ಯ ಗೌ.ಕಾರ್ಯದರ್ಶಿ ನಾಗರಾಜ ಗೋಂದಕರ್, ಕಸಾಪ ದಕ್ಷಿಣ ಗೋವಾ ಜಿಲ್ಲಾಧ್ಯಕ್ಷ ಪರಶುರಾಮ ಕಲಿವಾಳ, ಸಾಲಸೇಟ ತಾಲೂಕಾ ಅಧ್ಯಕ್ಷ ಬಸವರಾಜ ಬನ್ನಿಕೊಪ್ಪ, ಚಿತ್ರನಟಿ ಮೀನಾ, ಹಿರಿಯ ಪತ್ರಕರ್ತ ರಹಮತ್ ಕಂಚಗಾರ, ಜುವಾರಿನಗರ ಕನ್ನಡ ಸಂಘದ ಅಧ್ಯಕ್ಷ ಶಿವಾನಂದ ಬಿಂಗಿ, ಹಿರೀಯ ಪತ್ರಕರ್ತ ಮಾರುತಿ ಬಡಿಗೇರ, ಸ್ನೇಹಯುವ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ರAಜಿತಕುಮಾರ್, ಮತ್ತಿತರರು ಉಪಸ್ಥಿತರಿದ್ದರು.

error: