September 27, 2024

Bhavana Tv

Its Your Channel

ಭಟ್ಕಳ ತಾಲೂಕಿನಾದ್ಯಂದ ಬುಧುವಾರ ಬೆಳ್ಳಿಗ್ಗೆ ಯಿಂದ ಸುರಿಯುತ್ತಿರುವ ಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ತ

ಭಟ್ಕಳ ತಾಲೂಕಿನಾದ್ಯಂದ ಬುಧುವಾರ ಬೆಳ್ಳಿಗ್ಗೆ ಯಿಂದ ಸುರಿಯುತ್ತಿರುವ ಗಾಳಿ ಮಳೆಗೆ ಜನ ಜೀವನ ಅಸ್ತವ್ಯಸ್ತಗೊಂಡಿದ್ದು ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ಜನರು ತೊಂದರೆ ಅನುಭವಿಸಿದ್ದಾರೆ..

ಹವಾಮಾನ ಇಲಾಖೆಯಿಂದ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಬಗ್ಗೆ ಮುನ್ಸೂಚನೆ ನೀಡಿದ್ದರು. ಅದರಂತೆ ನಿನ್ನೆ ಮಂಗಳವಾರ ಸಂಜೆಯಿAದ ಶುರುವಾದ ಮಳೆಗೆ ಜನರ ಜೀವನ ಆಸ್ವಸ್ಥಗೊಂಡಿದೆ. ತಾಲೂಕಿನ ಹೆಬಳೆ ಜಟಗೇಶ್ವರ ದೇವಸ್ಥಾನ ಸುತ್ತ ನೀರು ನಿಂತಿದು ನೀರಿನಿಂದ ಜಲಾವೃತಗೊಂಡಿದೆ. ಅದೇ ರೀತಿಮುರುಡೇಶ್ವರ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮಳೆ ನೀರಿನಿಂದ ಸಂಪೂರ್ಣ ಜಾಲಾವರ್ತಾಗೊಂಡಿದೆ

ಅದೇ ರೀತಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ತೊಂದರೆ ಉಂಟಾಯಿತು.
ಭಟ್ಕಳ ಶಂಸುದ್ದಿನ್ ಸರ್ಕಲ್ ಸಮೀಪ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಂದಿನAತೆ ನೀರು ನಿಂತಿತ್ತು. ಹಾಗೂ ರಂಗಿನಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿ ವರ್ಷದಂತೆ ಇಂದು ಕೂಡ ನೀರು ನಿಂತ ಪರಿಣಾಮ ವಾಹನ ಸವಾರರು ತೊಂದರೆ ಅನುಭವಿಸಿದರು

ಮಾವಳ್ಳಿ 1 ಗ್ರಾಮದ ಜನತಾ ಕಾಲೋನಿಯ ಅಂಗನವಾಡಿ ಕಟ್ಟಡದ ಮೇಲೆ ಬೆಳ್ಳಿಗ್ಗೆ 8 ಗಂಟೆಗೆ ಅಕೇಶಿಯ ಮರ ಬಿದ್ದು ಅಂಗನವಾಡಿ ಕೇಂದ್ರದ ಮೇಲ್ಚಾವಣಿ ಹಂಚು ಮುರಿದು ಬಿದ್ದಿದ್ದು , ಗೋಡೆಯಲ್ಲಿ ಸ್ವಲ್ಪ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಈ ವೇಳೆ ಅಂಗನವಾಡಿ ಕೇಂದ್ರದಲ್ಲಿ ಯಾವುದೇ ಮಕ್ಕಳು ಇಲ್ಲದೆ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ.

ಶಿರಾಲಿ 1 ಗ್ರಾಮದ ಗಣಪತಿ ನಾರಾಯಣ ದೇವಾಡಿಗ ಇವರ ವಾಸ್ತವ್ಯದ ಮನೆ ಮೇಲೆ ತೆಂಗಿನ ಮರ ಬಿದ್ದು ಭಾಗಶಃ ಹಾನಿಯಾಗಿದೆ. ಹೆಬಳೆ ಗ್ರಾಮದ ತೆಂಗಿನಗುAಡಿ,ಹಿರೇಕೆರಿಯಲ್ಲಿ ಇಂದು ಮಳೆಯ ನೀರಿನ ಜೊತೆಗೆ ಸಮುದ್ರದ ನೀರು ಸಹ ಉಕ್ಕಿ ಸಾರ್ವಜನಿಕ ವಾಸ್ತವ್ಯ ಇರುವ ಪ್ರದೇಶಗಳಿಗೆ ನೀರು ನುಗ್ಗಿರುವ ಬಗ್ಗೆ ಸಾರ್ವಜನಿಕರ ದೂರಿನ ಮೇರೆಗೆ ,ಹೆಬಳೆ ಗ್ರಾಮ ಪಂಚಾಯತ ಪಿ.ಡಿ.ಓ ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿದ್ದು.ಕೆಲವರ ಮನೆಯಂಚಿನವರೆಗೂ ನೀರು ತುಂಬಿದ್ದು. ಕೃಷಿ ಜಮೀನಿಗೂ ಕೂಡ ನೀರು ನುಗ್ಗಿದೆ.

ಕೊಪ್ಪ ಗ್ರಾಮದ ಹಿಂಡ ಸಮೀಪದವೆಂಕಟೇಶ್ ದುರ್ಗು ನಾಯ್ಕ ರವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದ್ದು, ಯಾವುದೇ ಜನ ಜಾನುವಾರು ಗಳಿಗೆ ಜೀವ ಹಾನಿಯಾಗಿಲ್ಲ. ಇವರ ವಾಸ್ತವ್ಯದ ಮನೆಗೆ ಕಳೆದ ಸಾಲಿನಲ್ಲಿ ಸಹ ಹಾನಿಯಾಗಿದ್ದು ಪರಿಹಾರ ನೀಡಲಾಗಿತ್ತು.

ಬೆಂಗ್ರೆ ಚಿಟ್ಟಿ ಹಕ್ಕಲನ ಗೊಯ್ದು ಈರಯ್ಯ ದೇವಾಡಿಗ ಮನೆಯ ಮೇಲೆ ಅಡಿಕೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ.ದುರ್ಗಮ್ಮ ನಾರಾಯಣ ದೇವಡಿಗ ಮಠದ ಮನೆ ಪಕ್ಕಾ ಮನೆಯ ಮೇಲ್ಛಾವಣಿ ಭಾಗಶಃ ಹಾನಿ.ಪಾರ್ವತಿ ಸುಕ್ರಯ್ಯ ದೇವಡಿಗ ಮಠದ ಮನೆ ಪಕ್ಕಾಮನೆಯ ಮೇಲ್ಛಾವಣಿ ಹಂಚು ಹಾರಿಹೋಗಿ ಭಾಗಶ: ಹಾನಿ. ಗಣಪತಿ ಸುಕ್ರಯ್ಯ ದೇವಡಿಗ ಬೊಗ್ರಿಜಡ್ಡು ವಾಸ್ತವ್ಯದ ಪಕ್ಕಾ ಮನೆಯ ಮೇಲ್ಚಾವಣಿಯ ಹಂಚು ಗಾಳಿಮಳೆಗೆ ಹಾರಿಹೋಗಿ ಭಾಗಶಃ ಹಾನಿಯಾಗಿದ್ದು ಜನ ಜಾನುವಾರಗಳಿಗೆ ಯಾವುದೇ ಪ್ರಾಣಹಾನಿಯಾಗಿಲ್ಲ ವಾಗಿದೆ

error: