
ಎಸ್.ಎಸ್.ಎಲ್.ಸಿ ನಂತರದ ಪಿಯುಸಿ ಎರಡು ವರ್ಷದಲ್ಲಿ ಸತತ ಪ್ರಯತ್ನಪಟ್ಟರೆ ಭವಿಷ್ಯದಲ್ಲಿ ನೀವು ಇಟ್ಟ ಗುರಿ ಸುಲಭವಾಗಿ ತಲುಪುತ್ತೀರಿ ಎಂದು ಭಟ್ಕಳ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಸಾಯನಶಾಸ್ತ್ರ ಉಪನ್ಯಾಸಕರಾದ ಎಮ್. ಕೆ. ನಾಯ್ಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
.
ಹೊನ್ನಾವರ ; ಪಟ್ಟಣದ ನ್ಯೂ ಎಜುಕೇಶನ ಸೊಸೈಟಿ ಮತ್ತು ನ್ಯೂ ಇಂಗ್ಲಿಷ್ ಸ್ಕೂಲ್ ಪೂರ್ವ ವಿದ್ಯಾರ್ಥಿಗಳ ಸಂಘದ ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನಲ್ಲಿ ಸಾಧನೆ ಮಾಡಿದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಶಾಲಾ ಆವರಣದಲ್ಲಿ ಜರುಗಿತು.
ಸಾಧನೆ ಮಾಡಿದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿದರೆ ಮುಂದಿನ ವ್ಯಾಸಂಗಕ್ಕೆ ಇತರರಿಗೂ ಪ್ರೇರಣೆಯಾಗಲಿದೆ. ಪಿ.ಯು ವ್ಯಾಸಂಗದ ಸಮಯ ಒಂದು ರೀತಿ ತಪಸ್ಸಿನಂತೆ ಅದರಲ್ಲೂ ನೀಟ್ ಪರೀಕ್ಷೆ ಎದುರಿಸುವುದು ದೊಡ್ಡ ಸವಾಲು ಆದರೆ ಇಂದಿನ ವಿದ್ಯಾರ್ಥಿಗಳು ಪರಿಶ್ರಮ ಪಟ್ಟು ಈ ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಬಡತನ ಮತ್ತು ಶ್ರೀಮಂತ ಭೇದಭಾವವಿಲ್ಲ. ಬಡತನದಿಂದ ಬಂದಿದ್ದೇನೆ ಎನ್ನುವ ಕೀಳರಿಮೆಯ ಛಲವು ಇದೆಲ್ಲಕ್ಕಿಂತ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಿದ್ದು, ನಾವು ಅಂತಹ ಅನೇಕ ಸಾಧಕರನ್ನು ನೋಡಿದ್ದೇವೆ ಎಂದರು.
ನ್ಯೂ ಇಂಗ್ಲೀಷ್ ಶಾಲೆಯ ಕನ್ನಡ ಮಾಧ್ಯಮ ಆಂಗ್ಲ ಮಾಧ್ಯಮ ವಿಭಾಗದ ಸಾಧನೆ ಮಾಡಿದ ೩೫ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಿ.ಆರ್.ಸಿ. ಎಸ್.ಎಮ್.ಹೆಗಡೆ ಮಾತನಾಡಿ ಸತತವಾಗಿ ೧೬ ವರ್ಷದಿಂದ ನೂರರಷ್ಟು ಫಲಿತಾಂಶ ಸಾಧನೆ ಇತರೆ ಸಂಸ್ಥೆಗೆ ಮಾದರಿಯಾಗಿದೆ. ಒಂದು ಶಾಲೆಯ ಶೈಕ್ಷಣಿಕ ಉನ್ನತಿಗೆ ಹಳೆಯ ವಿದ್ಯಾರ್ಥಿ ಸಂಘದಿAದ ಸಾಧ್ಯವಿದೆ. ಇವರ ಕ್ರೀಯಾತ್ಮಕ ಸಹಕಾರದಿಂದ ಈ ಶಾಲೆ ಉತ್ತುಂಗಕ್ಕೆ ಏರುತ್ತಿದೆ. ಶಾಲೆ ಹಾಗೂ ಶಿಕ್ಷಕರ ಮೇಲೆ ಪ್ರೀತಿಯೇ ಕಲಿಕೆಯ ಮೇಲೆ ವಿದ್ಯಾರ್ಥಿಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ಅಧ್ಯಕ್ಷ ರಘುನಾಥ ಪೈ ಮಾತನಾಡಿ ಶಿಕ್ಷಣ ಕಲಿಸಿದ ಶಾಲೆ ಮತ್ತು ಗುರುಗಳನ್ನು ಎಂದಿಗೂ ಮರೆಯಬೇಡಿ. ಇಂದಿನ ಸನ್ಮಾನ ಮುಂದಿನ ಶೈಕ್ಷಣಿಕ ಹಂತದ ಸಾಧನೆಗೆ ಮುನ್ನುಡಿಯಂತೆ. ಮುಂದಿನ ದಿನದಲ್ಲಿ ನಿಮ್ಮ ಮೇಲಿನ ಜವಬ್ದಾರಿ ಹೆಚ್ಚಿದೆ ಎಂದು ಭಾವಿಸಿ ಇನ್ನು ಹೆಚ್ಚಿನ ಶೈಕ್ಷಣಿಕ ಸಾಧನೆ ಮಾಡುವಂತೆ ಶುಭ ಹಾರೈಸಿದರು.
ವೇದಿಕೆಯಲ್ಲಿ ಆಡಳಿತ ಮಂಡಳಿಯ ಕಾರ್ಯದರ್ಶಿ ನಾಗರಾಜ ಕಾಮತ,ಮುಖ್ಯಾಧ್ಯಾಪಕರುಗಳಾದ ಜಯಂತ ನಾಯಕ, ಕಮಲಾ ನಾಯ್ಕ ಉಪಸ್ಥಿತರಿದ್ದರು. ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗರಾಜ ಕಾಮತ್ ಸ್ವಾಗತಿಸಿ, ಶಿಕ್ಷಕ ಅಶೋಕ ಕಾರ್ಯಕ್ರಮ ನಿರ್ವಹಿಸಿದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ