March 16, 2025

Bhavana Tv

Its Your Channel

ಯಶಸ್ವಿಯಾಗಿ ನಡೆದ ಶಾಲಾ ಸಂಸತ್ತು ಚುನಾವಣೆ

ಹೊನ್ನಾವರ ; ಮಕ್ಕಳಲ್ಲಿ ಚುನಾವಣೆಯ ಕುರಿತು ಮಾಹಿತಿ ಸಿಗಬೇಕು. ಹಾಗೂ ಸಾಂವಿಧಾನಿಕ ಹುದ್ದೆಗಳ ಬಗ್ಗೆ ಅರಿವಾಗಬೇಕು ಎಂಬ ಉದ್ದೇಶಕ್ಕೆ ಶಾಲಾ ಮಕ್ಕಳಿಗೆ ಚುನಾವಣೆಯನ್ನು ನಡೆಸಲಾಗುತ್ತದೆ. ತಾಲೂಕಿನ ಕೊಳಗದ್ದೆಯ ಶ್ರೀ ಸಿದ್ಧಿವಿನಾಯಕ ವಿದ್ಯಾಮಂದಿರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಲಾ ಸಂಸತ್ತು ಚುನಾವಣೆ ಯಶಸ್ವಿಯಾಗಿ ನಡೆಯಿತು. ಮೊಬೈಲ್ ನಲ್ಲಿ ಚುನಾವಣೆಯ ಅಪ್ಲಿಕೇಶನ್ಗಳನ್ನು ಬಳಸಿ, ವಿವಿಪ್ಯಾಡ್ ನಂತೆ ವ್ಯವಸ್ಥೆ ಮಾಡಿ , ಹುದ್ದೆಗೆ ನಿಂತ ವಿದ್ಯಾರ್ಥಿಗಳು ಉಳಿದ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಮತಯಾಚನೆಯನ್ನು ಮಾಡಿ ನಂತರ ಚುನಾವಣೆ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಚುನಾವಣೆಯಲ್ಲಿ ಯಾವ ರೀತಿ ಪ್ರಕ್ರಿಯೆಗಳು ನಡೆಯುತ್ತವೆ ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ರೂಪದಲ್ಲಿ ಈ ಚುನಾವಣೆ ನಡೆದಿದ್ದು ವಿಶೇಷವಾಗಿತ್ತು. ಇದೇ ವೇಳೆ ಶಾಲೆಯ ಸುತ್ತ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು. ಹಸಿರು ದಿನವನ್ನಾಗಿ ಆಚರಿಸಿ ವಿದ್ಯಾರ್ಥಿಗಳಲ್ಲಿ ಪರಿಸರದ ಮಹತ್ವವನ್ನು ತಿಳಿಸಲಾಯ್ತು.

error: