
ಹೊನ್ನಾವರ: ಪಟ್ಟಣದ 140 ವರ್ಷಗಳ ಪುರಾತನವಾದ ಶ್ರೀ ಶಾರದಾಂಬಾ ದೇವಿ ಮತ್ತು ಶ್ರೀ ಚಂದ್ರಮೌಳೇಶ್ವರ ಶಿಲಾಮಯ ದೇವಸ್ಥಾನದ ಮುಖ್ಯದ್ವಾರ ರಾಜಗೋಪುರದ ಭೂಮಿ ಪೂಜಾ ಕಾರ್ಯಕ್ರಮ ಶೃಂಗೇರಿಯ ಶ್ರೀ ಶ್ರೀ ಶ್ರೀ ಜಗದ್ಗುರುಗಳ ಶುಭಾಶೀರ್ವಾದದೊಂದಿಗೆ ಶನಿವಾರ ರಾಜ್ಯ ಮೀನುಗಾರಿಕೆ ಮತ್ತು ಬಂದರು, ಒಳನಾಡು ಜಲ ಸಾರಿಗೆ ಮತ್ತು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಮಂಕಾಳು ಎಸ್. ವೈದ್ಯರವರು ರಾಜಗೋಪುರದ ಭೂಮಿಪೂಜೆ ನೆರವೇರಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ದೇವಸ್ಥಾನ ಹಾಗೂ ಶಾಲೆ ಎರಡು ಅಭಿವೃದ್ದಿ ಆದಲ್ಲಿ ಮಾತ್ರ ಆ ಸಮಾಜ ಹಾಗೂಆ ಊರು ಅಭಿವೃದ್ದಿಯಾಗಲಿದೆ. ಕ್ಷೇತ್ರದವರು ಶಾಸಕರನ್ನಾಗಿ ಮಾಡಿದಕ್ಕೆ ರಾಜ್ಯಕ್ಕೆ ಮಂತ್ರಿಯಾಗಲೂ ಸಾಧ್ಯವಾಯಿತು. ರಾಜಕಾರಣಕ್ಕಾಗಿ ದೇವಸ್ಥಾನ ಇರಬಾರದು. ದೇವಸ್ಥಾನ ಕಟ್ಟಲು ಸಹಾಯಮಾಡಬೇಕು. ದೇವಸ್ಥಾನ ಸಮಾಜದ ಆಸ್ತಿ. ಈ ಸ್ಥಳದಲ್ಲಿ ಯಾವುದೇ ರಾಜಕಾರಣ ಮಾಡದೇ ದೇವರು ಕೊಟ್ಟಂತಹ ಅವಕಾಶವಾಗಿದ್ದು ದೇವರಿಗಾಗಿ ಆ ಅವಕಾಶವನ್ನ ತ್ಯಾಗ ಮಾಡಬೇಕು ಅಂತ ಹೇಳಿ ನಾನು ನಿರ್ಧಾರ ಮಾಡಿದ್ದೆನೆ. ಸರ್ಕಾರದಿಂದ ಎಷ್ಟು ಸಾಧ್ಯವೊ ಅಷ್ಟು ಅನುದಾನ ತರುತ್ತೇನೆ. 5 ಲಕ್ಷ ಹಣ ವೈಯಕ್ತಿಕವಾಗಿ ನೀಡುತ್ತೇನೆ.ಆದಷ್ಟು ಬೇಗ ರಾಜಗೋಪುರದ ಕಾಮಗಾರಿ ನಡೆಸಿ ಎಂದರು.
ಈ ಸಮಾಜದ ಸ್ವಲ್ಪ ಜನ ಶಿಕ್ಷಣವಂತರಾಗಿದ್ದಾರೆ. ಮುಂದೆ ಎಲ್ಲರು ಶಿಕ್ಷಣವಂತರಾಗಲಿ. ಯಾರಾದರೂ ಬಡವರಿದ್ದು ಓದಲು ಆಸಕ್ತಿ ಇದ್ದು,ಅವಕಾಶ ವಂಚಿತರಾದವರಿದ್ದರೆ ನನ್ನ ಗಮನಕ್ಕೆ ತನ್ನಿ ಅವರ ಇಚ್ಚೆಯಂತೆ ಓದಲು ಅವಕಾಶ ಕಲ್ಪಿಸುತ್ತೇನೆ. ನನಗೆ ಆಸಕ್ತಿ ಇದ್ದವರು ಬೇಕು,ಆ ಅವಕಾಶ ನನ್ನ ಹತ್ರ ಇದೆ,ಅದನ್ನು ಸಮಾಜದವರು ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ವಿದ್ಯಾವಂತರಾಗಲು ಅವಕಾಶ ಮಾಡಿ ಕೊಡಿ,ಮಾರ್ಗದರ್ಶನ ಮಾಡಿ ಸಾಕು ಬಾಕಿ ಎಲ್ಲ ಸರ್ಕಾರದಿಂದಲೂ ಸಾಧ್ಯ ಆಗುತ್ತದೆ.ಇಲ್ಲದೆ ಇದ್ದರೆ ನಿಮ್ಮ ಸಮಾಜಕ್ಕೆ ನಾನು ಇದ್ದೀನಿ ಎಂದು ಭರವಸೆ ನೀಡಿದರು.
ತದನಂತರ ಸಚಿವರಿಗೆ ಹೊನ್ನಾವರ ಚಾರೋಡಿ ಮೇಸ್ತ ಸಮಾಜ ಬಾಂಧವರಿAದ ಸನ್ಮಾನ ನಡೆಯಿತು.
ವೇದಿಕೆಯಲ್ಲಿ ಲಕ್ಷಣಮೇಸ್ತ, ಅಚ್ಯುತ್ ಮೇಸ್ತ, ಪ್ರದೀಪ ಮೇಸ್ತ, ದೇವಪ್ಪ ಮೇಸ್ತ, ನಾಗೇಶಮೇಸ್ತ,ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೊವಿಂದ ನಾಯ್ಕ, ಆಶಾಮೇಸ್ತ , ಶ್ರೇಯಾಮೇಸ್ತ , ವಿದ್ಯಾ ಮೇಸ್ತ, ಉಪಸ್ಥಿತರಿದ್ದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ