March 17, 2025

Bhavana Tv

Its Your Channel

ಬಸ್ ಚಾಲಕನನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೇಸ್ ಮುಖಂಡರು

ಹೊನ್ನಾವರ: ಮುಂಜಾನೆ ಹೊನ್ನಾವರಕ್ಕೆ ಬರುವ ಸಾರಿಗೆ ಬಸ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಮಹಿಳೆಯರಿಗೆ ಬಸ್ ನಿಲ್ಲಿಸದೇ ತೀವ್ರ ನಿರ್ಲಕ್ಷö ತೋರುತ್ತಿದ್ದ ಸಾರಿಗೆ ಸಿಬ್ಬಂದಿಗಳ ವರ್ತನೆಯಿಂದ ವಿದ್ಯಾರ್ಥಿಗಳಿಗೆ ತೀವ್ರ ಅನಾನೂಕೂಲತೆ ಉಂಟಾಗಿರುತ್ತಿರುವುದನ್ನು ಖಂಡಿಸಿ ವಿದ್ಯಾರ್ಥಿಗಳ ಪಾಲಕರು ಹಾಗೂ ಕಾಂಗ್ರೇಸ್ ಮುಖಂಡರು ಸಾರಿಗೆ ಸಿಬ್ಬಂದಿಗಳಿಗೆ ಇಂತಹ ಘಟನೆಗಳು ಪುನರಾವರ್ತನೆ ಆಗದಂತೆ ಬಸ್ ನಿಲ್ದಾಣಕ್ಕೆ ಗುರುವಾರ ತೆರಳಿ ರಸ್ತೆ ಸಾರಿಗೆ ಅಧಿಕಾರಿಗಳನ್ನು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳ ಜೊತೆಗೆ ಮಾತನಾಡಿದ ರಾಜ್ಯ ಕೆ.ಪಿ.ಸಿ.ಸಿ ಸದಸ್ಯ ಎಮ್. ಎನ್. ಸುಬ್ರಹ್ಮಣ್ಯ ವಿದ್ಯಾರ್ಥಿನಿಯರನ್ನು, ಮಹಿಳೆಯರನ್ನು ಬಿಟ್ಟು ಬರುತ್ತಿರುವುದುದು ಸರ್ಕಾರದ ಕುರಿತು ಹಗುರವಾಗಿ ಮಾತನಾಡುವುದು ತಾಲೂಕಿನಾದ್ಯಂತ ವಿವಿಧ ಮಾರ್ಗಗಳಲ್ಲಿ ಕೇಳಿಬರುತ್ತಿದೆ. ಇಂತಹ ಘಟನೆ ಪುನರಾವರ್ತನೆ ಆದಲ್ಲಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಜಗದೀಪ ತೆಂಗೇರಿ ಮಾತನಾಡಿ ಮೂಡ್ಕಣಿ, ಚರ್ಚಕ್ರಾಸ್, ಸೂಳಗೋಡು, ದಿಬ್ಬಣಗಲ್, ಖರ್ವಾ ಭಾಗಗಳ ವಿದ್ಯಾರ್ಥಿಗಳಿಗೆ ಮುಂಜಾನೆ ತೀವ್ರ ಅನಾನೂಕೂಲತೆ ಉಂಟಾಗುತ್ತಿದೆ. ಮುಂಜಾನೆಯ ಮೊದಲ ತರಗತಿ ವಿದ್ಯಾರ್ಥಿಗಳಿಗೆ ತಪ್ಪಿದರೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಹಿನ್ನೆಡೆ ಆಗುತ್ತದೆ. ಸರ್ಕಾರಿ ಉದ್ಯೋಗದಲ್ಲಿ ಇರುವಾಗ ಸರ್ಕಾರದ ನಿಲುವಿನ ಕುರಿತು ಹಗುರವಾಗಿ ಮಾತನಾಡಬಾರದು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪಾಲಕರು ಕೆ.ಎಸ್.ಆರ್.ಟಿ.ಸಿ ನಿಲ್ದಾಣ ನಿಯಂತ್ರಕರಿಗೆ ಕೆಲ ಸಿಬ್ಬಂದಿಗಳಿAದ ತಮಗಾಗುತ್ತಿರುವ ಅನಾನುಕೂಲತೆ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ನಿಲ್ದಾಣದ ನಿಯಂತ್ರಕರು ಕೆಲ ಮಾರ್ಗದಲ್ಲಿ ಬಸ್ ಅಲಭ್ಯತೆಯಿಂದಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ನಮ್ಮ ಸಿಬ್ಬಂದಿಗಳಿAದ ಅಹಿತಕರ ವರ್ತನೆ ಪುನರಾವರ್ತನೆ ಆಗದಂತೆ ಸೂಚನೆ ನೀಡುತ್ತೇವೆ ಎಂದರು. ಈ ಸಂದರ್ಭದಲ್ಲಿ ಕಾಂಗ್ರೇಸ್ ಮುಖಂಡ ಬಾಲಚಂದ್ರ ನಾಯ್ಕ, ಕೃಷ್ಣ ಮಾರಿಮನೆ, ಕೃಷ್ಣ ಹರಿಜನ, ಮೋಹನ ನಾಯ್ಕ, ನ್ಯಾಯವಾದಿ ಸೂರಜ ನಾಯ್ಕ ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಪಾಲಕರು ಉಪಸ್ಥಿತರಿದ್ದರು.

error: