December 20, 2024

Bhavana Tv

Its Your Channel

ರೋಟರಿ ಕ್ಲಬ್ ಹೊನ್ನಾವರ ಇವರಿಂದ 77 ನೇ ವರ್ಷದ ಸ್ವಾತಂತ್ರೋತ್ಸವ

ರೋಟರಿ ಅಧ್ಯಕ್ಷರಾದ ರೋ.ದೀಪಕ್ ಲೋಪಿಸ್ ರವರು ಧ್ವಜಾರೋಹಣ ಕಾರ್ಯ ನೆರವೇರಿಸಿ ಮಾತನಾಡುತ್ತಾ…ಸ್ವತಂತ್ರ ಎನ್ನುವುದು ಮಾನವನ ಸ್ವಾಭಾವಿಕ ಹಕ್ಕು ಯಾರೂ ಯಾರಮೇಲೂ ದಬ್ಬಾಳಿಕೆ ಮಾಡದಂತೆ ಬ್ರಾತೃತ್ವ ಭಾವನೆಯಿಂದ ನಾವೆಲ್ಲಾ ಬಾಳಬೇಕು ಅದುವೇ ಸ್ವಾತಂತ್ರ‍್ಯ ದ ನಿಜವಾದ ಅರ್ಥ.ಎಂದರು.ಹಿರಿಯ ಶಿಕ್ಷಕರಾದ ರೋ.ಜಿ.ಟಿ.ಹೆಭ್ಬಾರ್ ರವರು ದ್ವಜವಂದನೆ ಮಾಡಿದರು.ಇವೆಂಟ್ ಛೇರ್ಮನ್ ರೋ.ತುಳಸೀದಾಸ್ ಶೇಟ್ ರವರು ದೇಶದ ಕಾನೂನುಗಳನ್ನು ಗೌರವಿಸಿ ದೇಶಕ್ಕಾಗಿ ದುಡಿದು ದೇಶದ ಅಭಿವೃದ್ಧಿಗೆ ಶ್ರಮಿಸುವಂತೆ ಯುವಕರಿಗೆ ಕರೆನೀಡಿದರು.
ಇದೇ ಸಂಧರ್ಭದಲ್ಲಿ ಮಾಜಿ ಸೈನಿಕರಾದ ಶ್ರೀ ಶ್ರೀನಿವಾಸ್ ರಾವ್ ಮಾತನಾಡಿ ನಾನು ದೇಶಸೇವೆ ಮಾಡಿದ ಸೇವಕ.ರೋಟರಿ ಧ್ವಜಾರೋಹಣ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದು ನನಗೆ ಹೆಮ್ಮ ಎನಿಸಿದೆ..ಸ್ವತಂತ್ರ ದಿನಾಚರಣೆ ಯು ದೀಪಾವಳಿ ದಸರಾ ಹಬ್ಬಗಳಿಗಿಂತ ಮಿಗಿಲಾಗಿದೆ ಎಂದರು.
ರೋಟರಿ ಕಾರ್ಯದರ್ಶಿ ಯಾದ ಶ್ರೀ ರಾಜೇಶ್ ನಾಯ್ಕರವರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಎಲ್ಲರಿಗೂ ವಂದನೆಯನ್ನು ಸಲ್ಲಿಸಿದರು.

error: