December 19, 2024

Bhavana Tv

Its Your Channel

ದೇಶದ ಸ್ವಾತಂತ್ರ‍್ಯದಲ್ಲಿ ಹಿರಿಯರ ತ್ಯಾಗ ಸ್ಮರಣೀಯ. ವಿನೋಧ ಅಣ್ವೇಕರ್

  ಶತಮಾನಗಳ ಕಾಲ ಬ್ರಿಟಿಷರ ದಾಸ್ಯತ್ವದಲ್ಲಿದ್ದ ಭಾರತ ಮಾತೆಯು ರಾಷ್ಟ್ರನಾಯಕರ ತ್ಯಾಗ ಬಲಿದಾನ ರಾಷ್ಟಪ್ರೇಮ ಹೋರಾಟದ ಫಲವಾಗಿ 1947 ಆಗಸ್ಟ್ 15ರಂದು ಸ್ವತಂತ್ರಗೊAಡಿದ್ದು ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಆಧ್ಯಕರ್ತವ್ಯವಾಗಿದೆ ಎಂದು ತಾಲೂಕುಪಂಚಾಯತ ಆಡಳಿತಅಧಿಕಾರಿಗಳು ಮತ್ತು ಜಿಲ್ಲಾಪಂಚಾಯತ ಮುಖ್ಯಯೋಜನಾಧಿಕಾರಿಗಳಾದವಿನೋಧ ಅಣ್ವೇಕರ್ ಅವರು ತಿಳಿಸಿದರು.
  ಅವರು ಹೊನ್ನಾವರ ತಾಲೂಕ ಪಂಚಾಯತ ಕಾರ್ಯಾಲಯದ ಆವರಣದಲ್ಲಿ ನಡೆದ 77ನೇ ಸ್ವಾತಂತ್ರ‍್ಯ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಸರ್ಕಾರದ ಜನಪರ ಯೋಜನೆಗಳು ಸಮಾಜದ ವ್ಯಕ್ತಿಗಳಿಗೆ ತಲುಪಿಸುವಲ್ಲಿ ಅಧಿಕಾರಿಗಳು ಪ್ರಾಮಾಣಿಕ ಕರ್ತವ್ಯ ನಿರ್ವಹಿಸಬೇಕಾಗಿದೆ. ಈ ಮೂಲಕ ಸ್ವಾತಂತ್ರ‍್ಯ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸೋಣ ಎಂದು ಕರೆನೀಡಿದರು. ಕಾರ್ಯಕ್ರಮದಲ್ಲಿ ಹಿರಿಯ ವಿದ್ವಾಂಸರು ಸಾಹಿತಿಗಳು ನಿವ್ರತ್ತ ಪ್ರಾಚಾರ್ಯರಾದ. ಡಾ||ಎನ್ ಆರ್ ನಾಯಕರವರನ್ನು ಅಭಿನಂದಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕರವರು ಪರಸ್ಪರ ಪ್ರೀತಿ-ವಿಶ್ವಾಸ ರಾಷ್ಟ್ರ ಪ್ರೇಮದೊಂದಿಗೆ ದೇಶ ಕಟ್ಟುವ ಕಾಯಕದಲ್ಲಿ ನಾವೆಲ್ಲ ತೊಡಗಿಸಿಕೊಳ್ಳೋಣ,ರಾಷ್ಟ್ರ ನಾಯಕರು ಹಿರಿಯರು ಹಾಕಿಕೊಟ್ಟ ಆದರ್ಶಗಳನ್ನು ಪಾಲಿಸೋಣ ಎಂದರು. ದಿನಾಂಕ 27-08-2023 ರಂದು ಗೃಹಲಕ್ಷ್ಮೀ ಯೋಜನೆಯ ಉದ್ಘಾಟನೆಯ ಯಶಸ್ವಿಗೆ ಎಲ್ಲರೂ ಸಹಕರಿಸಿ ಎಂದರು. ಸುದೀಶ ನಾಯ್ಕ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಪಂಚಾಯತ ವ್ಯವಸ್ಥಾಪಕ ರಾಮ ಬಟ್, ಸಿಬ್ಬಂದಿಗಳುವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
error: