December 19, 2024

Bhavana Tv

Its Your Channel

. `ನನ್ನ ತಲೆಮಾರು ತಮ್ಮ ಬದುಕಿನಲ್ಲಿ ಗಾಂಧಿ ತತ್ವಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು?’ ಪ್ರಬಂಧ ಸ್ಪರ್ಧೆ

ಹೊನ್ನಾವರ ; ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲೂಕಿನ ಕವಲಕ್ಕಿಯ ಕವಿ ಪ್ರಕಾಶನವು ಗಾಂಧಿ ಜಯಂತಿ-2023 ಪ್ರಬಂಧ ಸ್ಪರ್ಧೆಯನ್ನು ಪ್ರೌಢಶಾಲೆ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಏರ್ಪಡಿಸಿದೆ ಎಂದು ಕವಿ ಪ್ರಕಾಶನದ ಡಾ. ಎಚ್. ಎಸ್. ಅನುಪಮಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. `ನನ್ನ ತಲೆಮಾರು ತಮ್ಮ ಬದುಕಿನಲ್ಲಿ ಗಾಂಧಿ ತತ್ವಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು?’ ಎಂಬ ವಿಷಯದ ಬಗೆಗೆ ಪ್ರೌಢಶಾಲೆಯ ಮತ್ತು ಪದವಿಪೂರ್ವ (ಪಿಯುಸಿ, ಐಟಿಐ, ಡಿಪ್ಲೊಮಾ ಮತ್ತಿತರ ಪದವಿಪೂರ್ವ ಕೋರ್ಸುಗಳ ವಿದ್ಯಾರ್ಥಿಗಳು) 1000-2000 ಪದಗಳ ಮಿತಿಯಲ್ಲಿ ಪ್ರಬಂಧ ಬರೆದು ಸೆಪ್ಟೆಂಬರ್ 16ನೆಯ ತಾರೀಖಿನ ಒಳಗೆ ತಲುಪುವಂತೆ ಬರೆದು ಕಳಿಸಬೇಕು.
ಕೈಬರಹ ಅಥವಾ ಬೆರಳಚ್ಚು ಮಾಡಿದ ಬರಹವಾಗಿರಬೇಕು. ಜೆರಾಕ್ಸ್ ಅನ್ನು ಸ್ವೀಕರಿಸುವುದಿಲ್ಲ. ಉತ್ತರಕನ್ನಡ ಜಿಲ್ಲೆ ವ್ಯಾಪ್ತಿಯ ಪ್ರೌಢಶಾಲಾ/ಪದವಿಪೂರ್ವ ವಿದ್ಯಾರ್ಥಿಗಳೆಲ್ಲ ಪಾಲ್ಗೊಳ್ಳಬಹುದು. ತಂತಮ್ಮ ವಿದ್ಯಾಸಂಸ್ಥೆಯ ಮುಖ್ಯಸ್ಥರ ಸಹಿ ಪಡೆದು, ತಮ್ಮ ಹೆಸರು, ವಿಳಾಸ, ಫೋನ್ ನಂಬರನ್ನು ಪ್ರತ್ಯೇಕ ಹಾಳೆಯಲ್ಲಿ ಬರೆದು ಪ್ರಬಂಧ ಕಳಿಸಬೇಕು. ಬೇರಾರದ್ದನ್ನೋ ನಕಲು ಮಾಡಿದ, ಡೌನ್ ಲೋಡ್ ಮಾಡಿದ ಪ್ರಬಂಧಗಳೆAದು ತಿಳಿದು ಬಂದರೆ ಪರಿಗಣಿಸುವುದಿಲ್ಲ. ತಮ್ಮದೇ ಅಭಿಪ್ರಾಯವನ್ನು ಸರಳ ಕನ್ನಡದಲ್ಲಿ ಬರೆದರೂ ನಡೆದೀತು, ಸ್ವಂತ ಯೋಚನೆಗಳನ್ನೇ ಪರಿಗಣಿಸಲಾಗುವುದು. ಪ್ರೌಢಶಾಲೆ, ಪದವಿಪೂರ್ವ ವಿಭಾಗಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಎರಡೂ ವಿಭಾಗದಲ್ಲಿ ಮೊದಲ, ಎರಡನೆಯ ಮತ್ತು ಮೂರನೆಯ ಬಹುಮಾನಕ್ಕೆ ತಲಾ ಹತ್ತುಸಾವಿರ, ಐದು ಸಾವಿರ, ಮೂರು ಸಾವಿರ ಬಹುಮಾನ ನೀಡಲಾಗುವುದು. ವಿಜೇತರ ಹೆಸರು ಮತ್ತು ಬಹುಮಾನ ನೀಡುವ ಸಮಯ/ಸ್ಥಳದ ಬಗೆಗೆ ಸೆಪ್ಟೆಂಬರ್ 25ರಂದು ಪತ್ರಿಕಾ ಪ್ರಕಟಣೆ ನೀಡಲಾಗುವುದು. ಎಲ್ಲ ವಿಷಯಗಳಲ್ಲೂ ತೀರ್ಪುಗಾರರು ಮತ್ತು ಸಂಘಟಕರ ಅಭಿಪ್ರಾಯವೇ ಅಂತಿಮ.

ಪ್ರಬAಧ ಕಳಿಸಬೇಕಾದ ಅಂಚೆ ವಿಳಾಸ: ಸುಬ್ರಾಯ ಮಂಜು ಗೌಡ, ಕೇರಾಫ್ ಜಲಜ ಜನರಲ್ ಮತ್ತು ಮೆಟರ್ನಿಟಿ ಕ್ಲಿನಿಕ್, ಕವಲಕ್ಕಿ ಅಂಚೆ-581361, ಹೊನ್ನಾವರ ತಾಲೂಕು, ಉತ್ತರ ಕನ್ನಡ ಜಿಲ್ಲೆ.

ಮಾಹಿತಿ ಅಗತ್ಯವಿದ್ದಲ್ಲಿ ಮಾತ್ರ ಸಂಪರ್ಕಿಸಬೇಕಾದ ಸಂಖ್ಯೆ: 9480459107 (ಕ್ಲಿನಿಕ್), ಸಾಂಡ್ರಾ (9480667738), ನಾಗವೇಣಿ ಸುಬ್ರಾಯ, (8277225944).

error: