ಹೊನ್ನಾವರ : ತಾಲೂಕಾ ನಾಮಧಾರಿ ಅಭಿವೃದ್ದಿ ಸಂಘದ ಆಡಳಿತ ಸಮಿತಿ ಹಾಲಿ ಸದಸ್ಯರಾಗಿದ್ದ ಇವರು ಮಂಗಳವಾರ ಹೃದಯಾಗಾತದಿಂದ ನಿಧನ ಹೊಂದಿದ್ದಾರೆ, ಅವರ ನಿಧನದ ಸುದ್ದಿ ತಿಳಿದ ಕೂಡಲೇ ಸಂಘದ ಅಧ್ಯಕ್ಷ ಮಂಜುನಾಥ ನಾರಾಯಣ ನಾಯ್ಕ್ , ಉಪಾಧ್ಯಕ್ಷ ಟಿ. ಟಿ.ನಾಯ್ಕ, ಸದಸ್ಯ ಎಸ್. ಕೆ.ನಾಯ್ಕ, ರಾಮಪ್ಪ ನಾಯ್ಕ ಹಾಗೂ ಸಂಘದ ಸದಸ್ಯರು ಇಂದು ಅವರ ಮನೆಗೆ ತೆರಳಿ ಸಂತಾಪ ಸೂಚಿಸಿದ್ದಾರೆ. ಸಂಘದ ಕ್ರಿಯಾಶೀಲ ಸದಸ್ಯರಾದ ಗಣಪತಿ ನಾಯ್ಕ ಇವರ ನಿಧನದಿಂದ ಸಂಘಕ್ಕೆ ತುಂಬಾ ನಷ್ಟವಾಗಿದೆ. ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟಂಬದವರಿಗೆ ಆ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಸಂಘದ ಪರವಾಗಿ ಪ್ರಾಥಿಸಿದರು. ಅವರಿಗೆ 52 ವರ್ಷವಾಗಿತ್ತು ಮತ್ತು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ