December 22, 2024

Bhavana Tv

Its Your Channel

ಲಯನ್ಸ ಕ್ಲಬ್ ವತಿಯಿಂದ “ಮುದ್ದು ಕೃಷ್ಣ, ಮುದ್ದು ರಾಧೆ ಸ್ಪರ್ಧೆ

ಹೊನ್ನಾವರ : ಲಯನ್ಸ ಕ್ಲಬ್ ವತಿಯಿಂದ “ಮುದ್ದು ಕೃಷ್ಣ, ಮುದ್ದು ರಾಧೆ ಸ್ಪರ್ಧೆ” ಜರುಗಿತು. ಲಯನ್ಸ ಸಭಾಭವನದಲ್ಲಿ ಲಯನ್ಸ ಕ್ಲಬ್ ಮತ್ತು ಲಿಯೋ ಕ್ಲಬ್ ಆಶ್ರಯದಲ್ಲಿ ಮೂರು ವಿಭಾಗದಲ್ಲಿ ಕೃಷ್ಣನ ವೇಷ ಹಾಗೂ ರಾಧೆಯ ವೇಷದಲ್ಲಿ ಸುಮಾರು 65ಕ್ಕೂ ಹೆಚ್ಚಿನ ಪುಟಾಣಿಗಳು ತಮ್ಮ ಪ್ರತಿಭೆಯನ್ನು ಪ್ರದರ್ಶಿದರು.

ಕಾರ್ಯಕ್ರಮ ಉದ್ಘಾಟಿಸಿದ ಲಯನ್ಸ ಕ್ಲಬ್ ಎಂಜೆ.ಎಫ್ ಎಸ್.ಜೆ.ಕೃರನ್ ಮಾತನಾಡಿ ಲಯನ್ಸ ಕ್ಲಬ್ ಹಲವು ಸಮಾಜಮುಖಿ ಕಾರ್ಯಕ್ರಮದ ನಡುವೆ ಮುದ್ದು ಕೃಷ್ಣ ಹಾಗೂ ಮುದ್ದು ರಾಧೆ ಸ್ಪರ್ಧೆ ಆಯೋಜಿಸುವ ಮೂಲಕ ಮಕ್ಕಳಿಗೆ ಪೋತ್ಸಾಹ ನೀಡುತ್ತಾ ಬಂದಿದ್ದೇವೆ. ಇಂದು ತಮ್ಮ ಮಕ್ಕಳಿಗೆ ಮುದ್ದಾದ ವೇಷವನ್ನು ತೊಡಿಸುವ ಮೂಲಕ ಅವರಲ್ಲಿರುವ ಪ್ರತಿಭೆ ಪ್ರದರ್ಶನಗೊಳ್ಳುವಲ್ಲಿ ಶ್ರಮಿಸಿದ್ದೀರಿ. ಮುಂದಿನ ಭವಿಷ್ಯವು ಉತ್ತಮವಾಗಿರಲು ಅವರಿಗೆ ಪೊತ್ಸಾಹದ ಜೊತೆ ಸದಾ ಕಾಲ ಮಾರ್ಗದರ್ಶನ ನೀಡುವಂತೆ ಸಲಹೆ ನೀಡಿದರು.
ಲಯನ್ಸ ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ ಪ್ರತಿವರ್ಷದಂತೆ ಈ ವರ್ಷವು ಎರಡು ವಿಭಾಗದಲ್ಲಿ ಮುದ್ದು ಕೃಷ್ಣ ಮತ್ತು ಮುದ್ದು ರಾಧೆ ಸ್ಪರ್ಧೆಯ ಮೂಲಕ 65ಕ್ಕೂ ಹೆಚ್ಚಿನ ಪುಟಾಣಿಗಳು ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ. ಎಲ್ಲಾ ಸದಸ್ಯರ ಸಹಕಾರದಿಂದ ವರ್ಣಿರಂಜಿತವಾದ ನಡೆದ ಕಾರ್ಯಕ್ರಮ ನಡೆದಿದೆ. ಮಲ್ಲಿಕಾರ್ಜುನ್ ಟೆಕ್ಸಟೆಲ್ಸ ವಿಕ್ರಮ್ ಹಾಗೂ ಲಯನ್ಸ ಸದಸ್ಯ ಹರೀಶ ನಾಯ್ಕ ಇವರ ಪ್ರಾಯೋಜಕತ್ವದಲ್ಲಿ ನಡೆದಿದ್ದು, ಮುದ್ದು ರಾಧೆ ಸ್ಪರ್ಧೆಯು ಲಿಯೋ ಕ್ಲಬ್ ಸಹಕಾರದಿಂದ ನಡೆದಿದೆ ಎಂದು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ವಿಜೇತ ಸ್ಪರ್ಧಾಳುಗಳಿಗೆ ಬಹುಮಾನ ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ಸಮಧಾನಕರ ಬಹುಮಾನ ನೀಡಲಾಯಿತು.
ಲಯನ್ಸ ಕಾರ್ಯದರ್ಶಿ ಮಹೇಶ ನಾಯ್ಕ, ಖಜಾಂಚಿ ಶಿವಾನಂದ ಭಂಡಾರಿ, ಇವೆಂಟ್ ಚೇರಮೆನ್ ಹರೀಶ ನಾಯ್ಕ, ಲಯನ್ಸ ಲಿಯೋ ಸದಸ್ಯರು ಹಾಜರಿದ್ದರು.

error: