
ಹೊನ್ನಾವರ : ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ದೇವರ ಜಾತ್ರಾ ಮಹೋತ್ಸವದ ನಿಮಿತ್ತ ಪವಿತ್ರ ಶರಾವತಿ ನದಿ ತಟದಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಮಾರುತಿ ಗುರೂಜಿಯವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ “ಶರಾವತಿ ಆರತಿ” ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನಗೊ0ಡಿತು. ಜಾತ್ರಾ ಮಹೋತ್ಸವದ ಭಾಗವಾಗಿ ದಿನಾಂಕ 18/04/2024 ರಿಂದ 21/04/2024 ರವರೆಗೆ ಶರಾವತಿ ನದಿ ದಡದಲ್ಲಿ ‘ಶರಾವತಿ ಕುಂಭ’ವನ್ನು ಆಯೋಜಿಸಲಾಗಿದ್ದು, ಸಾಧು-ಸಂತರನ್ನೊಡಗೂಡಿ ಭಕ್ತಾದಿಗಳಿಗೆ ತ್ರಿಕಾಲ ಪುಣ್ಯಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪುಣ್ಯನದಿ ಶರಾವತಿಯನ್ನು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಪೂಜಿಸಿ ಗೌರವಿಸುವ ಉದ್ದೇಶದಿಂದ ಶರಾವತಿ ಕುಂಭದ ಸಂದರ್ಭದಲ್ಲಿ ಪ್ರತಿವರ್ಷವು ‘ಶರಾವತಿ ಆರತಿ’ಯನ್ನು ಆಯೋಜಿಸಿಕೊಂಡು ಬಂದಿದ್ದು ಈ ವರ್ಷವು ಪರಮಪೂಜ್ಯ ಶ್ರೀ ಮಾರುತಿ ಗುರೂಜಿಯವರ ಸಾನಿಧ್ಯದಲ್ಲಿ ಸಾಧು-ಸಂತರು, ಪುರೋಹಿತರು, ಭಕ್ತಾದಿಗಳು ಶರಾವತಿ ಮಾತೆಗೆ ಬಾಗಿನ ಅರ್ಪಿಸಿ, ಆರತಿ ಬೆಳಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ