June 26, 2024

Bhavana Tv

Its Your Channel

ಪತ್ರಿಕಾ ವಿತರಕೆಗೆ ಸೈಕಲ್ ಕೊಡುಗೆ

ಹೊನ್ನಾವರ: ಕಳೆದ 25 ವರ್ಷಗಳಿಂದ ಪಟ್ಟಣದ ಜನತೆಗೆ ದಿನಪತ್ರಿಕೆಯನ್ನು ಮನೆಮನೆಗೆ ವಿತರಿಸುವ ಕಾರ್ಯವನ್ನು ನಿಷ್ಠೆಯಿಂದ ಮಾಡುತ್ತಿರುವ ಪಟ್ಟಣದ ಕೆಳಗಿನಪಾಳ್ಯದ ಪತ್ರಿಕಾ ವಿತರಕ ಪ್ರಶಾಂತ ಶೇಟ್ ಅವರಿಗೆ ಹೊನ್ನಾವರ ರೋಟರಿ ಕ್ಲಬ್ ವತಿಯಿಂದ ಹೊಸ ಸೈಕಲ್ ವಿತರಿಸಿ ಶುಭಕೋರಿದರು.

ಸೈಕಲ್ ಪಡೆದ ಪ್ರಶಾಂತ ಶೇಟ್ ಮಾತನಾಡಿ, ನನ್ನ ಒಂದೇ ಸೈಕಲ್ ಇತ್ತು ಅದು ದುರಸ್ತಿಗೆ ಬಂದಾಗ ಪತ್ರಿಕೆಯನ್ನು ಸರಿಯಾದ ಸಮಯಕ್ಕೆ ವಿತರಿಸಲು ತೊಂದರೆಯಾಗುತ್ತಿತ್ತು. ಇದನ್ನು ಮನಗಂಡ ರೋಟರಿ ಸಂಸ್ಥೆಯವರು ಹೊಸ ಸೈಕಲ್ ವಿತರಿಸಿದ್ದು ನನಗೆ ತುಂಬಾ ಸಹಕಾರಿಯಾಗಿದೆ ಎಂದು ರೋಟರಿ ಸಂಸ್ಥೆಗೆ ಕೃತಜ್ಞತೆ ವ್ಯಕ್ತ ಪಡಿಸಿದರು.
ರೋಟರಿ ಅಧ್ಯಕ್ಷ ದೀಪಕ ಲೋಪಿಸ್, ಕಾರ್ಯದರ್ಶಿ ರಾಜೇಶ ನಾಯ್ಕ, ಜಿ.ಪಿ.ಹೆಗಡೆ, ಎಂ.ಎA.ಹೆಗಡೆ, ಸ್ಟೀಫನ್ ರೋಡ್ರಿಗಿಸ್, ಸತೀಶ ನಾಯ್ಕ, ನಾರಾಯಣ ಯಾಜಿ, ಡಿ.ಜೆ.ನಾಯ್ಕ ಉಪಸ್ಥಿತರಿದ್ದರು.

ಸಂಸ್ಥೆಯ ಸಮಾಜಮುಖಿ ಕಾರ್ಯವು ಸಾರ್ವಜನಿಕರಿಂದ ಉತ್ತಮ ಪ್ರಶಂಸೆಗೆ ಪಾತ್ರವಾಗಿದೆ. ಕಳೆದ 2 ವರ್ಷಗಳ ಹಿಂದೆ ಪ್ರಶಾಂತ ಶೇಟ್ ಅವರನ್ನು ಹೊನ್ನಾವರ ಪತ್ರಕರ್ತ ಸಂಘದಿAದ ಸನ್ಮಾನಿಸಲಾಗಿತ್ತು. ರೋಟರಿ ಸಂಸ್ಥೆಯವರು ಪ್ರಶಾಂತ ಅವರಿಗೆ ಸೈಕಲ್ ನೀಡಿದ್ದು, ಅವರಿಗೆ ಪತ್ರಿಕೆ ಹಂಚಲು ತುಂಬಾ ಸಹಕಾರಿಯಾಗಿದೆ. ಸಂಸ್ಥೆಯ ಕಾರ್ಯಕ್ಕೆ ಹೊನ್ನಾವರ ಪತ್ರಕರ್ತರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಧನ್ಯವಾದ ಸಮರ್ಪಿಸಿದ್ದಾರೆ.

error: