
ಹೊನ್ನಾವರ :ಕ್ರೀಡಾ ಧ್ವಜಾರೋಹನ ನೇರವೇರಿಸಿ, ಕ್ರೀಡಾಪಟುಗಳಿಂದ ಧ್ವಜವಂದನೆ ಸ್ವೀಕರಿಸಿದ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಮಾನಸಿಕವಾಗಿ ದೈಹಿಕವಾಗಿ ಬಲಿಷ್ಠವಾಗಲೂ ಕ್ರೀಡೆಯು ಬಹುಮುಖ್ಯ ಪಾತ್ರ ವಹಿಸಲಿದೆ. ತಾಲೂಕಿನ ಶಿಕ್ಷಕರು ತಮ್ಮ ಶಾಲೆಯಲ್ಲಿ ಶಿಕ್ಷಣ ಸಹಪಠ್ಯ ಹಾಗೂ ಕ್ರೀಡಾ ವಿಷಯಗಳ ಕುರಿತು ಮಕ್ಕಳಿಗೆ ಉತ್ತಮವಾಗಿ ಸಜ್ಜುಗೊಳಿಸಿ ಕಾರ್ಯಕ್ರಮವನ್ನು ಯಶ್ವಸಿಯಾಗಿ ಸಂಘಟಿಸುತ್ತಿದ್ದಾರೆ. ಆ ಮೂಲಕ ಹೊನ್ನಾವರದ ಶಿಕ್ಷಕರು ಇತರ ತಾಲೂಕಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ.ಪಂ. ಅಧ್ಯಕ್ಷರಾದ ನಾಗರಾಜ ಭಟ್ ಮಾತನಾಡಿ ಕ್ರೀಡೆಯು ಪ್ರತಿಯೊಬ್ಬರಿಗೂ ತೀರಾ ಅಗತ್ಯವಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿದರೆ ದೈಹಿಕವಾಗಿ ಇನ್ನಷ್ಟು ಸದೃಡವಾಗಬಹುದು. ಇತ್ತೀಚಿನ ದಿನದಲ್ಲಿ ಕೆಲವರಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದೆ. ಸರ್ಕಾರವು ವಿಶೇಷ ಮುತವರ್ಜಿ ವಹಿಸಿ ಕ್ರೀಡಾಕೂಟ ಹಮ್ಮಿಕೊಂಡು ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಲು ನೆರವಾಗಲಿದೆ. ಸೋಲು ಗೆಲುವು ಎಂದು ಚಿಂತಿಸಿದೇ, ವಿದ್ಯಾರ್ಥಿಗಳು ಪಾಲ್ಗೊಂಡು ಸತತವಾಗಿ ಪರಿಶ್ರಮಿಸಿದರೆ ಸಾಧನೆ ಮಾಡಲು ಸಾಧ್ಯವಿದೆ ಎಂದರು.

ವೇದಿಕೆಯಲ್ಲಿ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕ ಅಧ್ಯಕ್ಷ ಎಂ.ಜಿ.ನಾಯ್ಕ, ಪ್ರೌಡಶಾಲಾ ಶಿಕ್ಷಕಸಂಘದ ಅಧ್ಯಕ್ಷ ಸತೀಶ ನಾಯ್ಕ, ಜಿಲ್ಲಾ ಗೌರವಾಧ್ಯಕ್ಷ ಸುಧೀಶ ನಾಯ್ಕ, ಸಾಧನಾ ಬರ್ಗಿ, ಲಯನ್ಸ ಅಧ್ಯಕ್ಷ ಉದಯ ನಾಯ್ಕ, ಮಹೇಶ ಶೆಟ್ಟಿ, ಸಂತೋಷ ಕುಮಾರ, ಗೌರೀಶ ಭಂಡಾರಿ, ಬಾಬು ನಾಯ್ಕ, ಅರುಣಕುಮಾರ, ಪ್ರಮೋದನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಸ್ವಾಗತಿಸಿ ಕ್ಷೇತ್ರ ಸಮನ್ವಯಾಧಿಕಾರಿ ವಿನಾಯಕ ಅವಧಾನಿ ವಂದಿಸಿದರು. ಶಿಕ್ಷಕರಾದ ಆರ್.ಬಿ.ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ವರದಿ : ವಿಶ್ವನಾಥ ಸಾಲ್ಕೋಡ್ ಹೊನ್ನಾವರ
More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ