March 29, 2025

Bhavana Tv

Its Your Channel

ಹೊನ್ನಾವರ ಪಟ್ಟಣ ಪಂಚಾಯತಿ ವತಿಯಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮದಡಿ ಕಾಸರಕೋಡ ಟೊಂಕಾ ಕಡಲತೀರ ಸ್ವಚ್ಚತಾ ಕಾರ್ಯಕ್ರಮ

ಹೊನ್ನಾವರ ; “ಸಂಸ್ಕಾರ ಸ್ವಚ್ಚತೆ, ಸ್ವಭಾವ ಸ್ವಚ್ಚತೆ” ಎನ್ನುವ ಸಂಕಲ್ಪದೊAದಿಗೆ ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯುತ್ತಿದ್ದು, ಪಟ್ಟಣದ ವಿವಿದಡೆ ಈಗಾಗಲೇ ಯಶ್ವಸಿಯಾಗಿ ಕಾರ್ಯಕ್ರಮ ಅನುಷ್ಟಾನವಾಗುತ್ತಿದ್ದು, ರಾಷ್ಟ್ರೀಯ ಸ್ವಯಂ ಸೇವಾ ಸಂಘಟನೆ ಹಾಗೂ ಪಟ್ಟಣ ಪಂಚಾಯತಿ ಸಿಬ್ಬಂದಿಗಳು, ಕರಾವಳಿ ಕಾವಲು ಪಡೆಯ ಪೊಲೀಸರು ಟೊಂಕಾ ಕಡಲತಿರದಲ್ಲಿ ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಪ.ಪA. ಮೂಖ್ಯಾಧಿಕಾರಿ ಯೇಸು ಬೆಂಗಳೂರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿ ಕೇಂದ್ರ ಸರ್ಕಾರದ ಆದೇಶದಂತೆ ಸಪ್ಟೆಂಬರ್ 15 ರಿಂದ ಅಕ್ಟೋಬರ್ 2ರವರೆಗೆ ನಿರಂತರವಾಗಿ ಈ ಕಾರ್ಯಕ್ರಮ ಅನುಷ್ಟಾನವಾಗುತ್ತಿದೆ. ಟೊಂಕಾ ಪ್ರದೇಶದಲ್ಲಿ ಈ ದಿನ 500ರಿಂದ 600 ಮೀಟರ್ ಸ್ವಚ್ಚತೆ ಮಾಡಿ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. ನಿರಂತರವಾಗಿ ಸ್ವಚ್ಚವಾಗಿಟ್ಟರೆ, ಕೇಂದ್ರದಲ್ಲಿ ಮಾದರಿ ಪಟ್ಟಣವಾಗಿ ನಮ್ಮ ಹೊನ್ನಾವರ ಸ್ವಚ್ಚ ಹೊನ್ನಾವರ ಆಗಲಿದೆ ಎಂದರು.
ವರದಿ ; ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: