May 5, 2024

Bhavana Tv

Its Your Channel

ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿ ನೇಮಕ
ಡಾ. ಆರ್. ಎನ್. ಶೆಟ್ಟಿಯವರ ಹಿರಿಯ ಪುತ್ರ ಸತೀಶ ಶೆಟ್ಟಿ ಅಧಿಕಾರ ಸ್ವೀಕಾರ

ಭಟ್ಕಳ: ಶ್ರೀ ಮಹತೋಬಾರ ಮುರುಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯಾಗಿ ಡಾ. ಆರ್. ಎನ್. ಶೆಟ್ಟಿಯವರ ಹಿರಿಯ ಪುತ್ರ ಸತೀಶ ಶೆಟ್ಟಿಯವರು ಸೋಮವಾರ ಅಧಿಕಾರ ಸ್ವೀಕರಿಸಿದರು.

ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದಿದ್ದ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ ಮುರ್ಡೇಶ್ವರದ ಆಡಳಿತ ಧರ್ಮದರ್ಶಿಯವರಾಗಿದ್ದ ಡಾ. ಆರ್. ಎನ್. ಶೆಟ್ಟಿಯವರ ನಿಧನದಿಂದ ಸ್ಥಾನ ತೆರವಾಗಿತ್ತು. ರಾಜ್ಯ ಧಾರ್ಮಿಕ ಪರಿಷತ್ತು ಮುರ್ಡೇಶ್ವರ ದೇವಸ್ಥಾನದ ಆಡಳಿತ ಧರ್ಮದರ್ಶಿಯನ್ನಾಗಿ ಸತೀಶ ಶೆಟ್ಟಿಯವರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದನ್ನು ಅನುಸರಿಸಿ ಆಡಳಿತವನ್ನು ವಹಿಸಿಕೊಂಡರು.
ಸೋಮವಾರ ಬೆಳಿಗ್ಗೆಯಿಂದ ನಡೆದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರು ಭಾಗವಹಿಸಿದ್ದು ಸ್ವತಃ ಶ್ರೀ ಮುರುಡೇಶ್ವರ ದೇವರಿಗೆ ಅಭಿಷೇಕ, ಅರ್ಚನೆ ಮಾಡುವ ಸತೀಶ ಶೆಟ್ಟಿಯವರಿಗೆ ಆಶೀರ್ವಚನ ನೀಡಿ ತಮ್ಮ ಅಧಿಕಾರಾವಧಿಯಲ್ಲಿ ಮುರ್ಡೇಶ್ವರ ಕ್ಷೇತ್ರ ಇನ್ನಷ್ಟು ಅಭಿವೃದ್ಧಿ ಹೊಂದಿ ಜನತೆಗೆ ದೇವರ ಅನುಗ್ರಹ ಪ್ರಾಪ್ತವಾಗುವಂತಾಗಲಿ ಎಂದು ಹಾರೈಸಿದರು.


ಅಧಿಕಾರ ಸ್ವೀಕರಿಸಿ ಮಾತನಾಡಿದ ಸತೀಶ ಶೆಟ್ಟಿಯವರು ತಮ್ಮ ತಂದೆಯವರು ಮುರ್ಡೇಶ್ವರಕ್ಕಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದು ಅವರ ಪರಂಪರೆಯನ್ನು ತಾನು ಮುಂದುವರಿಸಿಕೊAಡು ಹೋಗುವುದಾಗಿ ಹೇಳಿದರು. ಮುರ್ಡೇಶ್ವರದ ಅಭಿವೃದ್ಧಿಯಲ್ಲಿ ಸ್ಥಳೀಯರು, ಭಕ್ತರು ಸಹಕಾರ ನೀಡುವಂತೆಯೂ ಅವರು ಕೋರಿದರು. ಈ ಸಂದರ್ಭದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಆಡಳಿತಾಧಿಕಾರಿಯಾಗಿದ್ದ ಮಮತಾದೇವಿ ಜಿ.ಎಸ್. ಅವರು ಉಪಸ್ಥಿತರಿದ್ದರು.
ಪುರಾಣ ಪ್ರಸಿದ್ಧ ಮುರ್ಡೇಶ್ವರ ಕ್ಷೇತ್ರದ ಆಡಳಿತ ಧರ್ಮದರ್ಶಿಯಾಗಿ ಅಧಿಕಾವನ್ನು ವಹಿಸಿಕೊಂಡ ಸತೀಶ ಶೆಟ್ಟಿ ಅವರನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆ ಅಭಿನಂದಿಸಿದ್ದಾರೆ.
ತಮ್ಮ ಶುಭ ಸಂದೇಶದಲ್ಲಿ ಡಾ. ಆರ್. ಎನ್. ಶೆಟ್ಟಿಯವರು ಸಮರ್ಪಣಾಭಾವದಿಂದ ತಮ್ಮನ್ನು ಶ್ರೀ ಕ್ಷೇತ್ರದ ಅಭಿವೃದ್ಧಿಗೆ ತೊಡಗಿಸಿಕೊಂಡಿದ್ದನ್ನು ಸ್ಮರಿಸಿದ ಅವರು ಅವರ ನಂತರ ಆ ಸ್ಥಾನ ಖಾಲಿಯಾಗಿರುವುದು ಧಾರ್ಮಿಕ ಮುಖಂಡರ ಕಳವಳಕ್ಕೆ ಕಾರಣವಾಗಿತ್ತು. ವಂಶಪಾರAಪರ್ಯ ಆಢಳಿತ ಧರ್ಮದರ್ಶಿಯಾಗಿ ಸತೀಶ ಶೆಟ್ಟಿಯವರನ್ನು ಧಾರ್ಮಿಕದತ್ತಿ ಇಲಾಖೆ ನೇಮಕ ಮಾಡಿರುವುದು ಸಂತಸ ತಂದಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಯಲ್ಲಿ ತಮ್ಮ ಸಹಕಾರ ಸದಾ ಇರುತ್ತದೆ ಎಂದು ಹಾರೈಸಿದ ಅವರು ಶ್ರೀ ಮಂಜುನಾಥ ಸ್ವಾಮಿಯು ಅವರಿಗೆ ಆಯುಷ್ಯ, ಆರೋಗ್ಯವನ್ನಿತ್ತು ಸನ್ಮಂಗಲವಾಗಲಿ ಎಂದು ಹಾರೈಸಿದ್ದಾರೆ.

error: