
ಶಿರಸಿ: ಕುಮಟ ಮತ್ತು ಶಿರಸಿ ಸಂಪರ್ಕ ರಸ್ತೆ ಕಾಮಗಾರಿ ಚಾಲ್ತಿಯಲ್ಲಿದ್ದು, ಪ್ರಸಕ್ತ ವರ್ಷದ ಮಳೆಯಿಂದ ಪೂರ್ಣಗೊಳ್ಳದ ರಸ್ತೆ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ಆತಂಕ ಹಾಗೂ ಅಪಘಾತವಾಗದ ರೀತಿಯಲ್ಲಿ ಮುಂಜಾಗೃತ ಕ್ರಮ ಜರುಗಿಸಬೇಕೆಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜಿಲ್ಲಾಡಳಿತಕ್ಕೆ ಅಗ್ರಹಿಸಿದ್ದಾರೆ.
ದಿನನಿತ್ಯ ಸಾವಿರಾರು ವಾಹನಗಳು, ಪೂರ್ಣಗೊಳ್ಳದ ಕಾಮಗಾರಿ ರಸ್ತೆಯಿಂದ ಸಂಚರಿಸುವ ಸಂದರ್ಭದಲ್ಲಿ ಅಪಾಯ ಸಂಭವಿಸುವ ಪೂರ್ವದಲ್ಲಿಯೇ ಜಿಲ್ಲಾಡಳಿತ ಜಾಗೃತೆವಹಿಸುವುದು ಅತೀ ಅವಶ್ಯವೆಂದು ಅವರು ಹೇಳಿದರು. ಮಳೆಯಿಂದ ಪೂರ್ಣಗೊಳ್ಳದ ರಸ್ತೆ ಸಂಚಾರಕ್ಕೆ ಅನುಕೂಲವಾಗುವಂತೆ ಅಲ್ಲಲ್ಲಿ ನೀರು ತುಂಬಿದ ಹೊಂಡ-ತಗ್ಗು ಪ್ರದೆಶದ ರಸ್ತೆಯನ್ನು ಸಮತಟ್ಟು ಮಾಡುವ ತುರ್ತು ಕಾಮಗಾರಿ ಜರುಗುತಿದ್ದಾಗಿಯೂ, ತೀವ್ರ ಮಳೆಯಿಂದ ಕುಸಿಯುವ ಧರೆ ಹಾಗೂ ಏಕರಸ್ತೆಯಲ್ಲಿ ದ್ವಿಮುಖದಲ್ಲಿ ವಾಹನಗಳು ಸಂಚರಿಸುತ್ತಿರುವುದರಿAದ ಅಪಾಯ ಸಂಭವಿಸುವ ಭೀತಿ ಉಂಟಾಗುತ್ತಿದೆ.
ಬ್ರಿಡ್ಜ ಕಾಮಗಾರಿಯ ಅಕ್ಕಪಕ್ಕದಲ್ಲಿ ಹೆಚ್ಚಿನ ಸುಕ್ಷರತೆಗೆ ಗಮನವಹಿಸುವುದು ಅತೀ ಅವಶ್ಯವೆಂದು ಅವರು ಜಿಲ್ಲಾಡಳಿತಕ್ಕೆ ಕೋರಿದ್ದಾರೆ.




30 ಕೀ.ಮೀ ರಸ್ತೆಪೂರ್ಣ:
ಶಿರಸಿ-ಕುಮಟ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದರೂ, ಅಂದಾಜು 30 ಕೀ.ಮೀ ನಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡು, ಇನ್ನೂ ಅರ್ಧದಷ್ಟು ರಸ್ತೆ
ಕಾಮಗಾರಿ ಆದಷ್ಟು ಬೇಗ ಮುಗಿದು ಸಾರ್ವಜನಿಕ ಅನುಕೂಲಕ್ಕೆ ಅವಕಾಶ ಮಾಡಿಕೊಡಬೇಕೆಂದು ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ
More Stories
ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.
ಮೇಸ್ತಾ ಪ್ರಕರಣದಲ್ಲಿ ಕಾಗೇರಿಯಿಂದ ಕೀಳುಮಟ್ಟದ ಹೇಳಿಕೆ ನಿರೀಕ್ಷಿಸಿರಲಿಲ್ಲ: ದೇಶಪಾಂಡೆ
ಶೂನ್ಯ ಸಾಧನೆ ಮುಚ್ಚಿಡಲು ಬಿಜೆಪಿಯಿಂದ ಮತ್ತೆ ಮೇಸ್ತಾ ಪ್ರಕರಣ ಮುನ್ನೆಲೆಗೆ: ಭೀಮಣ್ಣ ನಾಯ್ಕ