May 7, 2024

Bhavana Tv

Its Your Channel

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಕಾರ್ಯಕಾರಿಣಿ ಸಭೆ

ಶಿರಸಿ: ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಶಿರಸಿ ಇದರ ಕಾರ್ಯಕಾರಿಣಿ ಸಭೆ ಹಾಗೂ ವಾರ್ಷಿಕ ಸರ್ವಸಾಧಾರಣ ಸಭೆ ಹಳಿಯಾಳದ ಚಂದಾವನ ರೆಸಾರ್ಟ್ನಲ್ಲಿ ಎ.21ರಂದು ಸಂಘದ ಅಧ್ಯಕ್ಷ ಜಿ. ಸುಬ್ರಾಯ ಭಟ್ ಬಕ್ಕಳ ಅಧ್ಯಕ್ಷತೆಯಲ್ಲಿ ನಡೆಯಿತು.

ರಾಜ್ಯ ಸಂಘದ ನಿಯಮಾವಳಿಯಂತೆ 2024-25 ನೇ ಸಾಲಿನ ಅರ್ಹ ತಾಲೂಕಾಸಂಘದ ಮೂಲಕ ಬಂದ ಸದಸ್ಯತ್ವ
ಅರ್ಜಿಯನ್ನು ಪರಿಶೀಲಿಸಿ ಸದಸ್ಯತ್ವವನ್ನು ಅಂತಿಮಗೊಳಿಸಲಾಯಿತು. 2023-24 ನೇ ಸಾಲಿನ ಲೆಕ್ಕಪಪತ್ರವನ್ನು ಮಂಡನೆ ಮಾಡಿ ಸದಸ್ಯರ ಒಪ್ಪಿಗೆ ಪಡೆಯಲಾಯಿತು. ಜನವರಿಯಲ್ಲಿ ನಡೆದ ಸಂಘದ ಸುವರ್ಣ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದ ಖರ್ಚು-ವೆಚ್ಚವನ್ನು ಸಭೆಯಲ್ಲಿ ಮಂಡಿ ಸದಸ್ಯರ ಒಪ್ಪಿಗೆ ಪಡೆಯಲಾಯಿತು.

ಸಂಘದ ಸದಸ್ಯರು ಅನಾರೋಗ್ಯಕ್ಕೆ ತುತ್ತಾದ ಸಂದರ್ಭದಲ್ಲಿ ಸಂಘದಿAದ ನೀಡುವ ಕ್ಷೇಮನಿಧಿ ಮೊತ್ತವನ್ನು ಹೆಚ್ಚಿಸುವ ಕುರಿತು ಸುದೀರ್ಘವಾಗಿ ಸಭೆ ಚರ್ಚಿಸಿತು. ಕ್ಷೇಮನಿಧಿ ಸಂಗ್ರಹವನ್ನು ಈಗಿರುವ ಮೂರು ಲಕ್ಷ ರೂ.ಗಳ ಜೊತೆಗೆ ದೊಡ್ಡ ಮೊತ್ತದ ಹಣವನ್ನು ಸಂಗ್ರಹಿಸಿ ಠೇವಣಿಯಾಗಿ ಇಡಲು ಸಭೆಯಲ್ಲಿ ಠರಾಯಿಸಲಾಯಿತು. ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾದ ಸಂಘದ ಉಪಾಧ್ಯಕ್ಷ ವಿಠ್ಠಲದಾಸ ಕಾಮತ್ ಅವರಿಗೆ ಕ್ಷೇಮನಿಧಿಯಿಂದ 15 ಸಾವಿರ ರೂಪಾಯಿಗಳ ಆರ್ಥಿಕ ಸಹಕಾರ ಒದಗಿಸಲು ಸಭೆ ಅನುಮತಿ ಸೂಚಿಸಿತು. ಅವರು ಶೀಘ್ರ ಗುಣಮುಖರಾಗಿ ಕರ್ತವ್ಯಕ್ಕೆ ಹಾಜರಾಗುವಂತಾಗಲೆAದು ಸಭೆ ಆಶಿಸಿತು.
ಈ ಹಿಂದೆ ಅಪಘಾತವಾಗಿ ಅನಾರೋಗ್ಯಕ್ಕೆ ಒಳಗಾಗಿದ್ದ ಯಲ್ಲಾಪುರದ ವರದಿಗಾರ ದತ್ತಾತ್ರೇಯ ಕಣ್ಣಿಯವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ತನ್ನ ಕ್ಷೇಮನಿಧಿಯಿಂದ ನೀಡಿದ 10 ಸಾವಿರ ರೂ.ಗಳ ಚೆಕ್‌ನ್ನು ಅವರಿಗೆ ಸಭೆಯಲ್ಲಿ ಹಸ್ತಾಂತರಿಸಲಾಯಿತು.

ಜಿಲ್ಲಾ ಕಾರ್ಯಕಾರಿಣಿ ಸಭೆಗೆ ನಿರಂತರವಾಗಿ ಹಾಜರಾಗದ ಸದಸ್ಯರ ವರ್ತನೆಯನ್ನು ಸಭೆ ಖಂಡಿಸಿತ್ತಲ್ಲದೇ, ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹಾಜರಿದ್ದ ಸದಸ್ಯರು ಆಗ್ರಹಿಸಿದರು. ಸಭೆಗೆ ನಿರಂತರವಾಗಿ ಹಾಜರಾಗದ ಸದಸ್ಯರಿಗೆ ನೋಟೀಸ್ ನೀಡಿ, ಅವರಿಗೆ ಆಸಕ್ತಿ ಇಲ್ಲದಿದ್ದರೆ ಬದಲಿ ಸದಸ್ಯರನ್ನು ನೇಮಿಸಲು ಅರ್ಹರನ್ನು ಸೂಚಿಸಲು ಆಯಾ ತಾಲೂಕಾ ಸಂಘಕ್ಕೆ ಪತ್ರ ಬರೆದು ಕ್ರಮವಹಿಸಬೇಕೆಂದು ಸದಸ್ಯರು ಆಗ್ರಹಿಸಿದರು. ಈ ಕುರಿತು ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಈಗಾಗಲೇ ಬ್ಯಾಂಕ್ ಖಾತೆಯನ್ನು ಹೊಂದಿರದ ತಾಲೂಕಾ ಸಂಘಗಳು ಅವಶ್ಯಕವಾಗಿ ಸಂಘದ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆದು ಪಾರದರ್ಶಕವಾಗಿ ವ್ಯವಹರಿಸಲು ಅನುಕೂಲ ಮಾಡಿಕೊಡಬೇಕು ಹಾಗೂ ಪ್ರತಿವರ್ಷ ವಾರ್ಷಿಕ ಸರ್ವಸಾಧಾರಣ ಸಭೆ ಕರೆದು ಸಂಘದ ಸ್ಥಿತಿ-ಗತಿ ಕುರಿತು ಸದಸ್ಯರಿಗೆ ತಿಳಿಸಬೇಕೆಂದು ಸಭೆ ಸೂಚಿಸಿತು.

ಮೇ ಕೊನೆಯವಾರ ಜೊಯಿಡಾದಲ್ಲಿ ಸುವರ್ಣ ಮಹೋತ್ಸವ ನಿಮಿತ್ತ ನಡೆಯುವ ತಿಂಗಳ ಕಾರ್ಯಕ್ರಮ ಹಾಗೂ ಪತ್ರಕರ್ತರಿಗೆ ಒಂದು ದಿನದ ಕಿರುಪ್ರವಾಸ ಏರ್ಪಡಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು. ಬರುವ ಡಿಸೆಂಬರ್‌ನಲ್ಲಿ ಹೊನ್ನಾವರದಲ್ಲಿ ನಡೆಯುವ ಸುವರ್ಣ ಮಹೋತ್ಸವದ ಸಮಾರೋಪ ಕಾರ್ಯಕ್ರಮದ ಕುರಿತು ಸುಧೀರ್ಘವಾಗಿ ಸಭೆ ಚರ್ಚೆ ನಡೆಸಿತು.

ಸಂಘದ ಪ್ರಧಾನ ಕಾರ್ಯದರ್ಶಿ ಸುಮಂಗಲಾ ಹೊನ್ನೆಕೊಪ್ಪ ಎಲ್ಲರನ್ನು ಸ್ವಾಗತಿಸಿ ಸಭೆಯ ನಡಾವಳಿಯನ್ನು ಓದಿದರು. ಹಳಿಯಾಳ ತಾಲೂಕಾ ಅಧ್ಯಕ್ಷ ಸಂತೋಷ ಹಬ್ಬು ವಂದಿಸಿದರು.

ರಾಜ್ಯ ಸಮಿತಿ ಸದಸ್ಯ ಬಸವರಾಜ ಪಾಟೀಲ, ಕಾರ್ಯದರ್ಶಿಗಳಾದ ನರಸಿಂಹ ಸಾತೊಡ್ಡಿ, ಅನಂತ ದೇಸಾಯಿ, ಸುಮಂಗಲಾ ಅಂಗಡಿ, ಕಾರ್ಯಕಾರಿಣಿ ಸದಸ್ಯರಾದ ಮಾರುತಿ ನಾಯ್ಕ, ಪ್ರಭಾವತಿಗೋವಿ ವಿವಿಧ ತಾಲೂಕಾ ಅಧ್ಯಕ್ಷರುಗಳಾದ ಎಂ. ಆರ್ ಮಾನ್ವಿ, ಸಂದೇಶ್ ದೇಸಾಯಿ, ಶಾಂತೇಶಕುಮಾರ ಬೆನಕನಕೊಪ್ಪ. ಎಂ.ಜಿ. ನಾಯ್ಕ ಕುಮಟಾ ಹಾಗೂ ಜಿಲ್ಲೆಯ ವಿವಿಧ ತಾಲೂಕಿನಿಂದ ಬಂದ 40ಕ್ಕೂ ಹೆಚ್ಚು ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.

error: