March 26, 2025

Bhavana Tv

Its Your Channel

ಪ್ರಕೃತಿ ವಿಸ್ಮಯ : ಅಪರೂಪದ ಅವಳಿ ಬೆಕ್ಕಿನ ಮರಿಗಳು.

ಶಿರಸಿ ; ಎರಡು ತಲೆ ಒಂದೆ ದೇಹ ಹೊಂದಿರುವAತಹ ಜೀವಿಗಳು ಹುಟ್ಟಿರುವುದನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ. ಇಲ್ಲೊಂದು ಕಡೆ ಒಂದೆ ತಲೆ ಎರಡು ದೇಹಗಳನ್ನು ಹೊಂದಿರುವ ಅಪರೂಪದ ಅವಳಿ ಬೆಕ್ಕಿನ ಮರಿಗಳು ಹುಟ್ಟಿರುವುದು ಪ್ರಕೃತಿ ವಿಸ್ಮಯಕ್ಕೆ ಇನ್ನೊಂದು ಸಾಕ್ಷಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ರಶ್ಮಿ ನಾಯ್ಕ ಮುಂಡುಗೋಡ್ ಎಂಬುವವರ ಮನೆಯಲ್ಲಿ. ಬೆಕ್ಕು ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಅದರಲ್ಲಿ ನಾಲ್ಕನೆ ಮರಿ ಒಂದೆ ತಲೆ ಎರಡು ದೇಹ, ಎಂಟು ಕಾಲನ್ನು ಹೊಂದಿದೆ. ನೋಡಿದಂತಹ ಎಲ್ಲರೂ ಆಶ್ಚರ್ಯ ಪಡುವಂತೆ ಮಾಡಿದೆ. ದುರದೃಷ್ಟವಶಾತ್ ಆ ಮರಿ ಹುಟ್ಟಿದ ಕೆಲವೆ ಘಂಟೆಗಳಲ್ಲಿ ಅಶು ನೀಗಿದೆ. ಸೃಷ್ಟಿಯಲ್ಲಿ ಇಂತಹ ಹುಟ್ಟು, ಸಾವಿಗೆ ಕಾರಣ ಏನೆಂಬುದು ಆ ಭಗವಂತನಿಗೆ ಬಿಟ್ಟು ಬೇರೆ ಯಾರಿಗೂ ತಿಳಿದಿರಲಿಕ್ಕಿಲ್ಲ.

error: