ಬಾಗಲಕೋಟೆ ; ಜಿಲ್ಲೆಯ ಬಾದಾಮಿಯಲ್ಲಿ “ನಮ್ಮ ಹೆಮ್ಮೆ ನಮ್ಮ ಪೊಲೀಸ್” ಎನ್ನುವ ಕಾರ್ಯಕ್ರಮವನ್ನು ಇಂದು ಬಾದಾಮಿಯ ಪೊಲೀಸ್ ಠಾಣೆಯಲ್ಲಿ ಬಾದಾಮಿ ಪಿ ಎಸ್ ಐ ಶ್ರೀಮತಿ ನೇತ್ರಾವತಿ ಪಾಟೀಲ ಅವರ ಉಪಸ್ಥಿತಿಯಲ್ಲಿ ಅವರಿಗೆ ಗೌರವ ಸಲ್ಲಿಸುವ ಮುಖಾಂತರ, ೮ ಲೀಟರ್ ಟಚ್ಚ್ಲೆಸ್ಸ್ ಸ್ಯಾನಿಟರಿ ಮಷಿನ್, ಆಕ್ಸೀಮೀಟರ್, ಥರಮಾಮೀಟರ್, ಫೇಸ್‌ಶಿಲ್ಡ್, ಮಾಸ್ಕ್ಗಳನ್ನು ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ವಿತರಿಸಲಾಯಿತು. ನಮ್ಮ ಹೆಮ್ಮೆಯ ಪೊಲೀಸರಿಗೆ ಗೌರವ ಸಲ್ಲಿಸುವ ಮುಖಾಂತರ ಈ ವೈದ್ಯಕೀಯ ಉಪಕರಣಗಳನ್ನು ವಿತರಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮಹೇಶ ಎಸ್ ಹೊಸಗೌಡ್ರ ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳು, ರಾಹುಲ್ ಕಲೂತಿ ಅಧ್ಯಕ್ಷರು ಬಾಗಲಕೋಟೆ ಜಿಲ್ಲಾ ಯುವ ಕಾಂಗ್ರೆಸ್ , ಎಮ್ ಡಿ ಯಲಿಗಾರ ಬ್ಲಾಕ್ ಅಧ್ಯಕ್ಷರು ಬಾದಾಮಿ , ರಾಜ್ ಮಹಮ್ಮದ್ ಬಾಗವಾನ ಪುರಸಭೆಯ ಸದಸ್ಯರು ಬಾದಾಮಿ, ಸುಬ್ರಹ್ಮಣ್ಯ ರಾಜಪುರ ಬಾದಾಮಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರು, ಹನುಮಂತಗೌಡ ಎಸ್ ಖಾನ ಗೌಡ್ರ ಉಪಾಧ್ಯಕ್ಷರು ಬಾದಾಮಿ ಬ್ಲಾಕ್ ಯುವ ಕಾಂಗ್ರೆಸ್, ಬಸು ಗೌಡರ ಮುತ್ತಲಗೇರಿ ಗ್ರಾಮ ಪಂಚಾಯತಿ ಸದಸ್ಯರು ಉಪಸ್ಥಿತರಿದ್ದರು.
ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ
More Stories
ಏ.೨೨ ಕ್ಕೆ ಹಳಗೇರಿ- ಉಗಲವಾಟ ದಲ್ಲಿ ಬೃಹತ್ ಕಾರ್ಯಕ್ರಮ
2021-2022 ನೇ ಸಾಲಿನ ಏಳನೇ ವರ್ಗದ ವಿದ್ಯಾರ್ಥಿಗಳನ್ನು ಬೀಳ್ಕೊಡುಗೆ ಕಾರ್ಯಕ್ರಮ
ದಾಹ ತಣಿಸುವ ಆರವಟಿಗೆ ಆರಂಭಿಸಿ ಜನರ ಮೆಚ್ಚುಗೆಗೆ ಪಾತ್ರವಾದ ಯುವಾ ಬ್ರಿಗೇಡ್ ಘಟಕ