May 4, 2024

Bhavana Tv

Its Your Channel

ಗಾಂಧಿ ಪುರಸ್ಕೃತ ಚವಡಿಹಾಳ ಗ್ರಾಮಕ್ಕೆ ಜಿ.ಪಂ ಸಿಇಓ ಭೇಟಿ: ಹಳ್ಳ ಹೂಳೆತ್ತುವ ನರೇಗಾ ಕಾಮಗಾರಿ ವೀಕ್ಷಣೆ

ವಿಜಯಪೂರ “ಗಾಂಧಿ ಪುರಸ್ಕೃತ ಚವಡಿಹಾಳ ಗ್ರಾಮಕ್ಕೆ ಜಿ.ಪಂ ಸಿಇಓ ಭೇಟಿ ನೀಡಿ ಹಳ್ಳ ಹೂಳೆತ್ತುವ ನರೇಗಾ ಕಾಮಗಾರಿ ವೀಕ್ಷಣೆ ಮಾಡಿದರು. ನರೇಗಾ ಕಾರ್ಮಿಕರಿಗೆ ಕೋವಿಡ್ ಲಸಿಕೆ ವಿತರಣೆ: ಕೋವಿಡ್ ವಿರುದ್ಧದ ಸಮರಕ್ಕೆ ಪ್ರತಿಯೊಬ್ಬರು ಲಸಿಕೆ ಹಾಕಿಸಿಕೊಳ್ಳಿ: ಜಿ.ಪಂ ಸಿಇಓ ಗೋವಿಂದ ರೆಡ್ಡಿ ಸಲಹೆ ನೀಡಿದರು

ವಿಜಯಪೂರ ಜಿಲ್ಲೆಯ ಇಂಡಿ ತಾಲ್ಲೂಕಿನ ಗಾಂಧಿ ಪುರಸ್ಕೃತ ಚವಡಿಹಾಳ ಗ್ರಾಮದ ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಹಳ್ಳ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದ ರಡ್ಡಿ ಅವರು ಭೇಟಿ ನೀಡಿ, ನರೇಗಾ ಕಾರ್ಮಿಕರಿಗೆ ಕೋವಿಡ್ ಲಸಿಕೆಯನ್ನು ಹಾಕಿಸಿದರು.

ಬಳಿಕ ಮಾತನಾಡಿದ ಅವರು, ಚವಡಿಹಾಳ ಗ್ರಾ.ಪಂ ವ್ಯಾಪ್ತಿಯಲ್ಲಿ ಪಿಡಿಓ ಅವರು ಬಹಳಷ್ಟು ಅಭಿವೃದ್ಧಿ ಕೆಲಸವನ್ನು ಮಾಡುತ್ತಾ, ಮಾದರಿ ಗ್ರಾಮವಾಗಿಸುತ್ತಿದ್ದಾರೆ. ಇಲ್ಲಿನ ಕಾರ್ಮಿಕರು ಉತ್ಸಾಹದಿಂದ ಹಳ್ಳ ಹೂಳೆತ್ತುವ ಕೆಲಸ ಮಾಡುತ್ತಿದ್ದಾರೆ…

ಕೋವಿಡ್ ವಿರುದ್ಧದ ಸಮರಕ್ಕೆ ಲಸಿಕೆಯೇ ಮದ್ದು. ಪ್ರತಿಯೊಬ್ಬರು ಕೋವಿಡ್ ಲಸಿಕೆ ಹಾಕಿಸಿಕೊಂಡು ಆರೋಗ್ಯದಿಂದಿರೋಣ. ಲಸಿಕೆ ಹಾಕಿಸಿಕೊಳ್ಳವುದರಿಂದ ಯಾವುದೇ ಅಡ್ಡ ಪರಿಣಾಮವಿಲ್ಲ, ಆತಂಕ ಪಡುವ ಅಗತ್ಯವಿಲ್ಲ. ನಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಶದಿಂದ ಕೊರೋನಾ ಮುಕ್ತ ಮಾಡಲು ಸಾಮಾಜಿಕ ಅಂತರ, ಮಾಸ್ಕ್ ಸ್ಯಾನಿಟೇಸರ್ ಬಳಕೆ ಮಾಡಬೇಕು ಎಂದು ಸಲಹೆ ನೀಡಿ, ೭೦ ಕ್ಕೂ ಹೆಚ್ಚು ಕಾರ್ಮಿಕರಿಗೆ ಲಸಿಕೆ ಹಾಕಿಸಿದರು…

ಈ ಸಂದರ್ಭದಲ್ಲಿ ಇಂಡಿ ತಾ.ಪಂ ಇ.ಓ ಸುನೀಲ್ ಮುದ್ದಿನ, ತಾ.ಪಂ ಸಹಾಯಕ ನಿರ್ದೇಶಕ ಸಂಜಯ ಖಂಡಗೇಕರ, ತಾಂತ್ರಿಕ ಸಹಾಯಕ ಸಂಜೀವ ಬಿರಾದಾರ, ಪಿಡಿಓ ಚನಗೊಂಡ ಪಾರೆ, ಅಧ್ಯಕ್ಷ ದಿಲಶದಬಿ ಅಲ್ಲಾವುದ್ಧಿನ ಚೌದರಿ, ಗ್ರಾ.ಪಂ ಸರ್ವ ಸದಸ್ಯರು ಇದ್ದರು.

ವರದಿ ಬಿ ಎಸ್ ಹೊಸೂರ.

error: