December 19, 2024

Bhavana Tv

Its Your Channel

ಭಾರತೀಯ ರೆಡ್ ಕ್ರಾಸ್ ಶಾಖೆಯ ವತಿಯಿಂದ ವೈದ್ಯರ ದಿನಾಚರಣೆ

ಕಾರ್ಕಳ : ದಿನಾಂಕ ೧/೭/೨೦೨೧ರಂದು ವೈದ್ಯರ ದಿನಾಚರಣೆಯನ್ನು ಭಾರತೀಯ ರೆಡ್ ಕ್ರಾಸ್ ಶಾಖೆಯ ವತಿಯಿಂದ ಸೊಸೈಟಿಯ ಕೇಂದ್ರ ಸ್ಥಾನದಲ್ಲಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ಕಳದ ಹಿರಿಯ ವೈದ್ಯರಾದ ಹಾಗೂ ರೆಡ್ ಕ್ರಾಸ್ ಸೊಸೈಟಿಯ ಕಾರ್ಕಳದ ಚೇರ್‌ಮೆನ್ ಆದ ಡಾಕ್ಟರ ಕೆ.ಆರ್ ಜೋಶಿ ಅವರನ್ನು ಕಾರ್ಕಳದ ರೆಡ್ ಕ್ರಾಸ್ ಹಾಗೂ ಜೆಸಿಐ ಸಂಸ್ಥೆಯ ಪರವಾಗಿ ಅಭಿನಂದಿಸಲಾಯಿತು. ಡಾಕ್ಟರ ಕೆ.ಆರ್.ಜೋಶಿ ಅವರು ಕಾರ್ಕಳದ ಜೆಸಿಐ ಸಂಸ್ಥೆಯವರು ರೆಡ್ ಕ್ರಾಸ್ ಸಂಸ್ಥೆಯ ಜೊತೆಗೆ ಹಲವಾರು ಕಾರ್ಯಕ್ರಮ ಹಾಗೂ ರಕ್ತದಾನ ಶಿಬಿರಗಳನ್ನು ನಡೆಸಿರುತ್ತಾರೆ. ವೈದ್ಯರ ಹಾಗು ಸಮಾಜದ ನಡುವೆ ಕಂದಕವು ಏರ್ಪಡುತ್ತಿರುವ ಈ ಕಾಲ ಘಟ್ಟದಲ್ಲಿ ವಿವಿಧ ಸಂಘ ಸಂಸ್ಥೆಗಳ ನಡುವಿನ ಭಾಂದವ್ಯ ಅತೀ ಮುಖ್ಯ ಎಂದು ಹೇಳಿದರು. ಜೆಸಿಐ ಸಂಸ್ಥೆ ಕಾರ್ಕಳದ ಅಧ್ಯಕ್ಷರಾದ ಸಂತೋಷ ಕುಮಾರ್ ,ನಿರ್ದೇಶಕರಾದ ಪದ್ಮಪ್ರಸಾದ್ ಜೈನ್, ರೆಡ್ ಕ್ರಾಸ್ ಸಂಸ್ಥೆಯ ರವೀಂದ್ರನಾಥ ಪೈ ಇನ್ನಿತರ ರೆಡ್ ಕ್ರಾಸ್ ಹಾಗೂ ಜೆಸಿಐ ಸಂಸ್ಥೆಯ ಸದಸ್ಯರು ಭಾಗವಹಿಸಿದರು. ಈ ಸಂದರ್ಭದಲ್ಲಿ ಕುಮಾರಯ್ಯ ಹೆಗ್ಡೆ ಹಾಗು ಕರ್ತವ್ಯ ಜೈನ್ ರೆಡ್ ಕ್ರಾಸ್ ಸಂಸ್ಥೆ ಹೊಸ ಸದಸ್ಯರಾಗಿ ನೇಮಕಗೊಂಡರು. ನಂತರ ರೆಡ್ ಕ್ರಾಸ್ ಸಂಸ್ಥೆಯ ಆರೋಗ್ಯ ಕಾರ್ಯಕರ್ತರಿಗೆ ಆಹಾರ ಕಿಟ್ ವಿತರಿಸಲಾಯಿತು. ಶೇಖರ್ ಹೆಚ್ ಕಾರ್ಯಕ್ರಮ ನಿರ್ವಹಿಸಿದರು. ಶಶಿಕಲಾ ಹೆಗ್ಡೆಯವರು ವಂಸಿಸಿದರು.
ವರದಿ ; ಅರುಣ ಭಟ್ ಕಾರ್ಕಳ

error: