April 27, 2024

Bhavana Tv

Its Your Channel

ಕಲ್ಪನಾ ಮಹಾಲೆ ಕೊಲೆ ಪ್ರಕರಣ-ಮೇಲ್ಮನವಿ ವಜಾಗೊಳಿಸಿದ ಧಾರವಾಡ ಹೈಕೋರ್ಟ್

ಭಟ್ಕಳ: ಕಳೆದ ೯ ವರ್ಷಗಳ ಹಿಂದೆ ಭಟ್ಕಳದಲ್ಲಿ ನಡೆದ ಕಲ್ಪನಾ ಮಹಾಲೆ ಕೊಲೆ ಪ್ರಕರಣಕ್ಕೆ ಸಂಬAಧಿಸಿದAತೆ ಆರೋಪಿಗಳ ವಿರುದ್ಧ ಸರಕಾರ ಸಲ್ಲಿಸಿದ ಮೇಲ್ಮನವಿಯನ್ನು ಧಾರವಾಡ ಉಚ್ಚ ನ್ಯಾಯಾಲಯ ವಜಾಗೊಳಿಸಿದೆ.
ಕಳೆದ ೨೦೧೨, ನವೆಂಬರ್ ನಲ್ಲಿ ಭಟ್ಕಳದ ಕಲ್ಪನಾ ಮಹಾಲೆ ಎಂಬ ಮಹಿಳೆಯನ್ನು ಸಾಗರ-ರೋಡ್ ಕೋಣಾರ್
ಕ್ರಾಸ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಆಕೆಯ ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ ಆಕೆಯ ಆಭರಣಗಳನ್ನು ಅಪಹರಿಸಲಾಗಿತ್ತು. ಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ೩೦ ಜನರ ಸಾಕ್ಷ್ಯಗಳನ್ನು ದಾಖಲಿಸಲಾಗಿತ್ತು. ಪ್ರಕರಣದ ಕುರಿತಂತೆ ವಿಚಾರಣೆ ನಡೆಸಿದ ಜಿಲ್ಲಾ ಸತ್ರ ನ್ಯಾಯಾಲಯ ಆರೋಪಿಗಳಾದ ಮುಂಡಳ್ಳಿಯ ಸದಾಶಿವ ನಾಗಪ್ಪ ನಾಯ್ಕ ಹಾಗೂ ನಾಗರಾಜ ಲಚ್ಚಯ್ಯ ನಾಯ್ಕರನ್ನು ದೋಷ ಮುಕ್ತಗೊಳಿಸಿ ತೀರ್ಪು ನೀಡಿತ್ತು. ಇದನ್ನು ಕರ್ನಾಟಕ ಸರಕಾರವು ಧಾರವಾಡ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿತು. ವಿಡಿಯೋ ಕಾನರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ ಹಾಗೂ ನ್ಯಾಯಮೂರ್ತಿ ಜೆ.ಎಮ್. ಖಾಜಿಯವರನ್ನು ಒಳಗೊಂಡ ನ್ಯಾಯಪೀಠವು ಕಾರವಾರ ಸೆಷನ್ ಕೋರ್ಟ್ ತೀರ್ಪನ್ನು ಎತ್ತಿ ಹಿಡಿದಿದೆ.

ಆರೋಪಿಗಳ ಪರವಾಗಿ ಕುಂದಾಪುರದ ನ್ಯಾಯವಾದಿ ರವಿಕಿರಣ ಮುರ್ಡೇಶ್ವರ ವಾದಿಸಿದ್ದು ಈ ಘಟನೆ ಬಗ್ಗೆ ಸವಿ ವಿಸ್ತಾರವಾಗಿ ನಮ್ಮ ವಾಹಿನಿಯ ಜೊತೆಗೆ ಮಾತನಾಡಿ ವಿವರ ನೀಡಿದ್ದಾರೆ.

error: