April 27, 2024

Bhavana Tv

Its Your Channel

ಮಲ್ಪೆ ಮೀನುಗರಿಕಾ ರೈತ ಉತ್ಪಾದಕ ಕಂಪನಿಯಿ0ದ ಮೀನುಗಾರಿಕಾ ಸಚಿವ ಮಂಕಾಳು ವೈದ್ಯರಿಗೆ ಮನವಿ.

ಕುಂದಾಪುರ ; ಕರ್ನಾಟಕ ಸರ್ಕಾರ, ಮೀನುಗಾರಿಕಾ ಇಲಾಖೆ ಜಲಾನಯನ ಇಲಾಖೆ, ಹಾಗೂ ಸ್ಕೊಡ್ವೆಸ್ ಸಂಸ್ಥೆಯಿ0ದ ರಚಿತವಾದ ಮಲ್ಪೆ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಯಿ0ದ ಪಚ್ಚಲೆ ಕೃಷಿಕರಿಗೆ ಸರ್ಕಾರದಿಂದ ಸಹಾಯಧನ ಹಾಗೂ ಮಲ್ಪೆ ಮೀನುಗಾರಿಕಾ ರೈತ ಉತ್ಪಾದನಾ ಕಂಪನಿಯ ವ್ಯವಹಾರ ಅಭಿವೃದ್ಧಿಗೆ ಲೀಸ್ ಆಧಾರದಲ್ಲಿ 2000 ಸ್ಕ್ವೇರ್ ಫೀಟ್ ಸ್ಥಳವನ್ನು ಮಲ್ಪೆ ಬಳಿ ಒದಗಿಸಿ ಕೊಡುವಂತೆ ಸಚಿವ ಮಂಕಾಳು ವೈದ್ಯ ಅವರಿಗೆ ಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ಸಚಿವ ಮಂಕಳು ವೈದ್ಯ ಸಂಬ0ಧ ಪಟ್ಟ ಇಲಾಖೆಯಿಂದ ಸದ್ರಿ ಯೋಜನೆ ಕುರಿತು ಪರಿಶೀಲಿಸಿ ಸಾಧ್ಯವಾಗಬಹುದಾದ ಸಹಕಾರವನ್ನು ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಪೆ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷೆ ವನಜ ಪುತ್ರನ್, ಮುಖ್ಯಾಕಾ ರ್ಯ ನಿರ್ವಾಹಕ ವಿಷ್ಣು ಪ್ರಸಾದ್, ಸ್ಕೊಡ್ವೆಸ್ ಸಂಸ್ಥೆಯ ಉಡುಪಿ ಮತ್ತು ಉತ್ತರಕನ್ನಡ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಉಪಸ್ಥಿತರಿದ್ದರು.
ಮಲ್ಪೆ ಮೀನುಗಾರಿಕಾ ರೈತ ಉತ್ಪಾದಕ ಕಂಪನಿಯು ಸರ್ಕಾರದ ಯೋಜನೆಯಂತೆ ಉಡುಪಿ ತಾಲೂಕಿನ ಮಲ್ಪೆ ಭಾಗದ ಮೀನುಗಾರ ಮಹಿಳೆಯರಿಂದ ಪ್ರಾರಂಭವಾದ ಕಂಪನಿಯಾಗಿದೆ. ಕಂಪನಿಯು ಮಲ್ಪೆಯ ಬಂದರಿನ ಆವರಣದಲ್ಲಿ ಕಚೇರಿ ಹೊಂದಿದ್ದು ಉಡುಪಿ ಮಲ್ಪೆ ಭಾಗದ ಮೀನುಗಾರರಿಗೆ ಮೀನು ಕೃಷಿಗೆ ಬೇಕಾಗುವ ಸಲಕಣೆಗಳನ್ನು ಪೂರೈಸುವುದು, ಮೀನು ಸಾಕಾಣಿಕೆ, ಪಂಜರ ಕೃಷಿ, ಹಾಗೂ ಮೀನಿನ ಮೌಲ್ಯ ವರ್ಧನೆ ಮಾಡಿ ಮೀನಿನ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವುದು, ಸದಸ್ಯ ಮೀನುಗಾರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡುವ ಉದ್ದೇಶ ಹೊಂದಿದೆ.

error: