March 5, 2024

Bhavana Tv

Its Your Channel

ಕಿಕ್ಕಿರಿದು ಸೇರಿದ ಜನಸಾಗರದ ನಡುವೆ ನಡೆದ ನೀಲಗೋಡ ಯಕ್ಷಿಚೌಡೇಶ್ವರಿ ದೇವಿಯ ಅಮವಾಸ್ಯೆ ಪೂಜೆ.

ಹೊನ್ನಾವರ ; ತಾಲೂಕಿನ ನೀಲಗೋಡ ಯಕ್ಷೀ ಚೌಡೇಶ್ವರಿ ದೇವಾಲಯದಲ್ಲಿ ಅಮವಾಸ್ಯೆ ನಿಮಿತ್ತ ನವಚಂಡಿಕಾ ಯಾಗ ದಾರ್ಮಿಕ ವಿಧಿ ವಿಧಾನದಂತೆ ನೇರವೇರಿತು ಅಮವಾಸೆಯ ದಿನದಂದು ರಾಜ್ಯದ ಮೂಲೆ ಮೂಲೆಯಿಂದ ಸಾವಿರಾರು ಸಂಖೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ತಿರ್ಥ ಸ್ನಾನದಲ್ಲಿ ಪಾಲಗೋಂಡು ದೇವಿಗೆ ಪೂಜೆ ಮತ್ತು ಹರಕೆ ಸಲ್ಲಿಸುತ್ತಾರೆ ಈ ಅಮವಾಸೆ ರವಿವಾರ ಬಂದಿರುವುದರಿAದ ಹೆಚ್ಚು ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.

ಭಕ್ತರಿಗಾಗಿ ವಿಶೇಷ ಪ್ರಾರ್ಥನೆಗಳು ನ ಭಜನಾ ತಂಡದವರಿ0ದ ಭಜನಾ ಕಾರ್ಯಕ್ರಮ ಉಡಿ ಸೇವೆ, ತುಪ್ಪದ ದೀಫದ ಸೇವೆ, ಅನ್ನಧಾನ ಸೇವೆ, ಹೂವಿನ ಪೂಜೆ ಸೇವೆ, ಬಾಳೆಗೋನೆ ಸೇವೆ ಸೇರಿದಂತೆ ಅನೇಕ ದಾರ್ಮಿಕ ಕಾರ್ಯಕ್ರಮ ನೇರವೇರಿತು

ಲೋಕ ಕಲ್ಯಾಣಾರ್ಥವಾಗಿ ನವ ಚಂಡಿಕಾ ಯ್ಯಾಗವು ಮಾದೇವ ಸ್ವಾಮೀಯವರ ಮುಂದಾಳತ್ವದಲ್ಲಿ ಜರುಗಿತು ರಾಜ್ಯದ ಮೂಲೆ ಮೂಲೆಯಿಂದ ಭಕ್ತರು ಆಗಮಿಸಿ ಸರತಿ ಸಾಲಿನಲ್ಲಿ ನಿಂತು ತಿರ್ಥ ಸ್ನಾನದಲ್ಲಿ ಪಾಲ್ಗೊಂಡು ದರ್ಶನ ಪಡೆದರು.

error: