May 2, 2024

Bhavana Tv

Its Your Channel

ಅವೈಜ್ಞಾನಿಕ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ತಡೆಯಲು ಸೂಚಿಸಿದ್ದೇನೆ- ಸಚಿವ ಮಂಕಾಳು ವೈದ್ಯ

ಹೊನ್ನಾವರ ; ಶಿಕ್ಷಕರ ಸಮಸ್ಯೆಯನ್ನು ಪರಿಹರಿಸುವಂತೆ ಸಚಿವನಾದ ದಿನದಿಂದಲೇ ಇಲಾಖೆ ಗಮನಕ್ಕೆ ತಂದಿರುತ್ತೇನೆ. ಅವೈಜ್ಞಾನಿಕ ಮಾನದಂಡದ ಆಧಾರದ ಮೇಲೆ 2021 ನೇ ಸಾಲಿನ ವಿದ್ಯಾರ್ಥಿಗಳ ಹಾಜರಾತಿಯನ್ನು ಪರಿಗಣಿಸಿ ನಡೆಸುವ ಹೆಚ್ಚುವರಿ ಸಮಸ್ಯೆಯನ್ನು ತಡೆಹಿಡಿಯಬೇಕೆಂದು ಸಚಿವನಾದ ದಿನದಿಂದಲೇ ಇಲಾಖೆಯ ಗಮನಕ್ಕೆ ತಂದಿರುವುದಾಗಿ ಸಚಿವ ಮಂಕಾಳು ವೈದ್ಯ ಹೇಳಿದರು.

ಹೊನ್ನಾವರ ತಾಲೂಕಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ತಾಲೂಕಿನಲ್ಲಿ ಹೆಚ್ಚುವರಿ ಆದ ಶಿಕ್ಷಕರಿಗೆ ನ್ಯಾಯ ಒದಗಿಸಿ ಕೊಡಬೇಕೆಂದು ಮನವಿ ನೀಡಿದ ಸಂದರ್ಭದಲ್ಲಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಉಳಿದೆಲ್ಲ ಜಿಲ್ಲೆಗಳಿಗಿಂತ ನಮ್ಮ ಜಿಲ್ಲೆ ಭೌಗೋಳಿಕವಾಗಿ ಭಿನ್ನವಾಗಿರುವುದರಿಂದ ಎಲ್ಲಾ ಶಿಕ್ಷಕರಿಗೆ ಅನುಕೂಲವಾಗುವ ರೀತಿಯಲ್ಲಿ ಈ ವರ್ಷದ ಹೆಚ್ಚುವರಿ ಶಿಕ್ಷಕರ ಕೌನ್ಸಿಲಿಂಗ್ ಅನ್ನು ರದ್ದುಪಡಿಸಿ ಹೊಸದಾಗಿ ಸರ್ವೆ ಕಾರ್ಯ ನಡೆಸಿ ಮುಂದಿನ ವರ್ಷ ಕೌನ್ಸಿಲಿಂಗ್ ನಡೆಸಲು ಶಿಕ್ಷಣ ಸಚಿವರೊಂದಿಗೆ ಮಾತನಾಡಿರುತ್ತೇನೆ. ಶಿಕ್ಷಕರಿಗಾದ ಅನ್ಯಾಯವನ್ನು ಸಹಿಸಲು ಸಾಧ್ಯವಿಲ್ಲ ಎಂದರು. ಖಾಲಿ ಇರುವ ಜಿಪಿಟಿ ಹುದ್ದೆಗಳಿಗೆ ಹೆಚ್ಚುವರಿ ಶಿಕ್ಷಕರನ್ನು ಮರು ಹೊಂದಾಣಿಕೆ ಮಾಡಿದರೆ ಸಮಸ್ಯೆ ಪರಿಹರಿಸಲು ಸಾಧ್ಯವೆಂದು ತಕ್ಷಣ ಶಿಕ್ಷಣ ಮಂತ್ರಿಗಳಿಗೆ ದೂರವಾಣಿ ಸಂಪರ್ಕ ಮಾಡಿ ಸಮಸ್ಯೆಯ ಗಂಭೀರತೆಯ ಬಗ್ಗೆ ಚರ್ಚಿಸಿದರು. ಮಕ್ಕಳ ಸಂಖ್ಯೆಯನ್ನು ಪರಿಗಣಿಸದೇ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ ಇಬ್ಬರು ಶಿಕ್ಷಕರು ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಕನಿಷ್ಠ ನಾಲ್ಕು ಶಿಕ್ಷಕರಿದ್ದರೆ ಮಾತ್ರ ಶಿಕ್ಷಣದ ಗುಣಮಟ್ಟ ಸುಧಾರಿಸಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶಿಕ್ಷಕ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ, ಜಿಲ್ಲಾ ಗೌರವಾಧ್ಯಕ್ಷ ಸುದೀಶ ನಾಯ್ಕ, ಕಾರ್ಯದರ್ಶಿ ಕೆ.ಎಂ. ಹೆಗಡೆ, ಉಪಾಧ್ಯಕ್ಷೆ ಲಕ್ಷ್ಮಿ ಹೆಚ್. ಖಜಾಂಚಿ ಎಂ.ಎನ್. ಗೌಡ, ರಾಜ್ಯ ಸಂಘದ ಪದಾಧಿಕಾರಿ ಉದಯ ನಾಯ್ಕ, ಅಣ್ಣಪ್ಪ ನಾಯ್ಕ ಹೆಚ್ಚುವರಿ ಶಿಕ್ಷಕರಾದ ಸತ್ಯನಾರಾಯಣ ಹೆಗಡೆ, ಸರೋಜಾ ಹೆಗಡೆ, ಜಿ.ಎನ್. ಹೆಗಡೆ, ಶಿವರಾಮ ಭಟ್,ಪಿ.ಆರ್.ನಾಯ್ಕ, ಬಿ.ಎನ್.ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

error: