May 17, 2024

Bhavana Tv

Its Your Channel

ಹೊನ್ನಾವರ ಪಟ್ಟಣದಲ್ಲಿ ನೂತನವಾಗಿ ನಿರ್ಮಾಣಗೊಂಡ ಯಧುವೀರ ಕ್ರೇಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ

ಹೊನ್ನಾವರ ; ಹಿರಿಯ ಪತ್ರಕರ್ತ ಜಿ.ಯು ಭಟ್ ಉದ್ಘಾಟಿಸಿದರು. ನಂತರ ಮಾತನಾಡಿ, ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸಿ ಗ್ರಾಹಕ ಮತ್ತು ಸಾಲಗಾರರ ಇಬ್ಬರಿಗೂ ನ್ಯಾಯ ಕೊಡುವಂತಾಗಲಿ. ಸಾವಿರಾರು ಠೇವಣಿದಾರರು ಅವರ ಠೇವಣಿಯ ಒಂದು ಬೆಳಕಾಗಿ ಆ ಮುಖಾಂತರವಾಗಿ ಆ ಠೇವಣಿಯ ಫಲವನ್ನ ಬಡ್ಡಿಯನ್ನು ಅವರು ಪಡೆದುಕೊಂಡು ಬೆಳಕಿನಲ್ಲಿ ಬದುಕುವಂತಾಗಲಿ. ಈ ಸಂಸ್ಥೆಯಿAದ ಸಾಲ ಪಡೆದವರ ಬಾಳಲ್ಲಿ ಬೆಳಕು ಮೂಡಲಿ. ಹಣಕಾಸು ಸಂಸ್ಥೆಯನ್ನು ನಡೆಸುವುದು ತುಂಬಾ ಕಷ್ಟ. ಗ್ರಾಹಕರ ವಿಶ್ವಾಸ ಉಳಿಸಿಕೊಳ್ಳಬೇಕು. .ಸಹಕಾರಿ ಸಂಘಗಳು ಹೆಚ್ಚಿನ ಸೇವೆಯನ್ನು ಕೊಡುವುದಕ್ಕೆ ಅವಕಾಶ ಇದೆ. ಜನತೆ ಹೆಚ್ಚು ಹೆಚ್ಚಾಗಿ ಮುಂದೆ ಬಂದು ಇಂತಹ ಸಂಸ್ಥೆಗಳ ಲಾಭ ಪಡೆದುಕೊಂಡು ಸಂಸ್ಥೆಗಳನ್ನು ಕಟ್ಟಬೇಕು. ಆ ಮುಖಾಂತರವಾಗಿ ಈ ಜಿಲ್ಲೆಯ ತಾಲೂಕಿನ ಸಮಸ್ಯೆ ನಿವಾರಣೆ ಆಗುವುದಕ್ಕೆ ಕಾರಣ ಆಗಬೇಕು. ದಕ್ಷಿಣ ಕನ್ನಡಕ್ಕೆ ನಾವು ಹೊಂದಾಣಿಕೆ ಮಾಡಿದರೆ 50 ವರ್ಷ ಹಿಂದೆ ಇದ್ದೇವೆ. ಅಲ್ಲಿ ಮೆಡಿಕಲ್ ಕಾಲೇಜ್ ,ಸೊಸೈಟಿಗಳು ಬಹಳಷ್ಟಿದೆ. ಪೂಜ್ಯ ಡಾ. ವೀರೇಂದ್ರ ಹೆಗಡೆಯವರು ಸೊಸೈಟಿ ಮಾಡಿದ್ದಾರೆ. ಉತ್ತರ ಕನ್ನಡದಲ್ಲಿ ಬಡ ಮೀನುಗಾರರು, ರೈತರು ಮತ್ತು ಸಣ್ಣ ಇಳುವರಿದಾರರು, ಸಣ್ಣ ಕೈಗಾರಿಕೆಗಳು ಇದೆ. ಆ ದಿಶೆಯಲ್ಲಿ ಶ್ರೀಕಾಂತ್ ನಾಯ್ಕ ಅವರು ಕೂಡ ಅವರಿಗೆ ಪ್ರೋತ್ಸಾಹವನ್ನು ಮಾಡಬೇಕು. ಹೊನ್ನಾವರದಲ್ಲಿ ಅನೇಕ ಸೌಹಾರ್ದ ಬ್ಯಾಂಕಗಳಿವೆ.. ದೊಡ್ಡ ಸಹಕಾರಿ ಸಂಸ್ಥೆ ಕಟ್ಟಿ ಬೆಳೆಸಿದವರು ಹೊನ್ನಾವರದವರಾಗಿದ್ದಾರೆ. ಸವಾಲಗಳನ್ನು ಎದುರಿಸಬೇಕು.ಆರೋಗ್ಯಕರ ಸ್ಪರ್ಧೆ ಇರಬೇಕು ಎಂದು ಶುಭ ಹಾರೈಸಿದರು.

ಜೆ.ಟಿ ಪೈ ಮಾತನಾಡಿ ಸದ್ದಿಲ್ಲದೇ ಸಮಾಜ ಸೇವೆಯಲ್ಲಿ ತೊಡಗಿರುವ ಶ್ರೀಕಾಂತ ನಾಯ್ಕ ಅವರು ಜನತೆಗೆ ಇನ್ನಷ್ಟೂ ಹತ್ತಿರವಾಗಲು ಈ ಸಂಸ್ಥೆ ನಿರ್ಮಿಸಿದ್ದಾರೆ.ಸಂಸ್ಥೆ ಏಳ್ಗೆಯನ್ನು ಕಾಣಲಿ ಎಂದು ಶುಭಹಾರೈಸಿದರು.

ಸೇಫ್ ಸ್ಟಾರ್ ಸೌಹಾರ್ದದ ಅಧ್ಯಕ್ಷರಾದ ಜಿ.ಜಿ.ಶಂಕರ್ ಮಾತನಾಡಿ, ಶ್ರೀಕಾಂತ ನಾಯ್ಕರವರು ಯಧುವೀರ ಸೊಸೈಟಿ ಆರಂಭಿಸಿ ಹೊನ್ನಾವರಕ್ಕೆ ಒಂದು ಕಿರೀಟ ಇಟ್ಟಿದ್ದಾರೆ. ಈ ಸಂಸ್ಥೆ ರಾಜ್ಯ ಮಟ್ಟದಲ್ಲಿ ಪ್ರಸಿದ್ದಿ ಪಡೆಯುವ ಸಾಧ್ಯತೆಗಳು ಇದೆ. ಈ ಸಂಸ್ಥೆಯ ನಿರ್ದೇಶಕರು, ಅಧ್ಯಕ್ಷರು ಅತ್ಯಂತ ಭಲವಂತವಾಗಿರುವವರು. ಸಮಾಜದಲ್ಲಿ ಎತ್ತರದ ಸ್ಥಾನದಲ್ಲಿ ಇರುವ ಆದರ್ಶ ಪ್ರಾಯರು, ಹಲವಾರು ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದವರು. ಹೀಗಿರುವಾಗ ಈ ಸಂಸ್ಥೆ ಬಹಳ ಎತ್ತರಕ್ಕೆ ಹೋಗಲು ಎಲ್ಲ ಸಾಧ್ಯತೆ ಇದೆ ಎಂದು ಹುರಿದುಂಬಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ನಾಯ್ಕ ಆಡಳಿತ ಮಂಡಳಿ ಉಪಾಧ್ಯಕ್ಷರು,ನಿರ್ದೇಶಕರು,ಸಿಬ್ಬಂದಿಗಳ ಸಹಕಾರದೊಂದಿಗೆ ಸಂಸ್ಥೆಯನ್ನು, ದಕ್ಷತೆ,ಪ್ರಾಮಾಣಿಕತೆಯಿಂದ ಕೊಂಡೊಯ್ಯುತ್ತೇನೆ ಎಂಬ ವಿಶ್ವಾಸ ಇದೆ ಎಂದು ಸಂಸ್ಥೆ ಆರಂಭಿಸಲು ಸಹಕರಿಸಿದ ಸರ್ವರನ್ನು ಸ್ಮರಿಸಿ,ಕೃತಜ್ಞತೆ ಸಲ್ಲಿಸಿದರು.
ಉದ್ಯಮಿ ಯೊಗೀಶ ರಾಯ್ಕರ್, ಲಕ್ಷ್ಮೀನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಮೋಹನ ಸಾಲೆಹಿತ್ತಲ್, ನಿವೃತ್ತ ಶಿಕ್ಷಕ ಎಸ್.ಟಿ.ನಾಯ್ಕ, ಲಲಿತಾ ಹೆಗಡೆ ಮಾತನಾಡಿದರು.
ಸೊಸೈಟಿ ಉಪಾಧ್ಯಕ್ಷ ಕಮಲಾಕರ ನಾಯ್ಕ, ನಿರ್ದೆಶಕರು,ಸಾರ್ವಜನಿಕರು ಪಾಲ್ಗೊಂಡಿದ್ದರು.

error: