ಹೊನ್ನಾವರ : ಪ್ರೀತಿ ಪದಗಳ ಸಹಯಾನಿ, ಸಂವಿಧಾನ ಓದು ಅಭಿಯಾನದ ರುವಾರಿ ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷದ ಕಾರ್ಯಕ್ರಮ ದಿ. 19-5-2024 ರಂದು ಬೆಳಿಗ್ಗೆ 10 ಗಂಟೆಯಿAದ ಹೊನ್ನಾವರದ ಕರೆಕೋಣದ ಸಹಯಾನದ ಅಂಗಳದಲ್ಲಿ ನಡೆಯಲಿದೆ. ಸಮಾನತೆಯನ್ನು ಬಯಸುವುದು ಅಪರಾಧವೆ? ಈ ವಿಷಯದ ಕುರಿತು ವಿಶೇಷ ಉಪನ್ಯಾಸ, ಒಡನಾಟದ ನೆನಪು, ಗಾನಸುಧೆ ಕಾರ್ಯಕ್ರಮ ನಡೆಯಲಿದೆ. ನಾಡಿನ ಪ್ರಸಿದ್ಧ ಕತೆಗಾರರು ಕಾದಂಬರಿಕಾರರು, ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ ಆಗಿದ್ದ ಡಾ. ಆರ್ ಸುನಂದಮ್ಮ ಉದ್ಘಾಟನೆ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕ, ಸಾಹಿತಿ ಡಾ. ರಾಜಪ್ಪ ದಳವಾಯಿಯವರು “ಸಮಾನತೆಯನ್ನು ಬಯಸುವುದು ಅಪರಾಧವೆ?” ಎಂಬ ವಿಷಯದ ಬಗ್ಗೆ ವಿಠ್ಠಲ ನೆನಪಿನ ವಿಶೇಷ ಉಪನ್ಯಾಸ ನೀಡಲಿದ್ದಾರೆ. ರಂಗಸAಘಟಕ ಬರಹಗಾರ ಟಿ. ಸುರಂದ್ರರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಜಿ. ಸುಮಿತ್ ಕುಮಾರ್ ಸಂಗಡಿಗರಿAದ ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ ಇದೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಸಾಹಿತಿ ಬರಹಗಾರರು, ಪತ್ರಕರ್ತರು, ಹೋರಾಟಗಾರರು ಒಡನಾಟದ ನೆನಪು ಹಂಚಿಕೊಳ್ಳಲಿದ್ದಾರೆ ಸರ್ವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಯಮುನಾ ಗಾಂವ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
More Stories
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ
ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಕಡವೆಯೊಂದು ಗಂಭೀರ ಗಾಯ
ಜಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಎರಡು ವಾಹನ ವಶಕ್ಕೆ