May 16, 2024

Bhavana Tv

Its Your Channel

ಮಕ್ಕಳಿಗಾಗಿ ಸಿದ್ಧ ಸಮಾಧಿ ಯೋಗ ಸಂಸ್ಕಾರ ಶಿಬಿರ ಮತ್ತು ಗಾಂಧಾರಿ ವಿದ್ಯೆ.

ಬೈಂದೂರು : ದಿನಾಂಕ 18/4/2024 ರಿಂದ 27/4/2024 ರ ವರೆಗೆ 10ದಿನಗಳ ಕಾಲ ಋಷಿ ಸಂಸ್ಕೃತಿ ವಿದ್ಯಾ ಕೇಂದ್ರ ಬೆಂಗಳೂರು ಇವರಿಂದ ಮಕ್ಕಳಿಗಾಗಿ ವಿಶೇಷ ಯೋಗ ಸಂಸ್ಕಾರ ಮತ್ತು ಗಾಂಧಾರಿ ವಿದ್ಯೆ ಶಿಬಿರವು ಆಚಾರ್ಯ ಕೇಶವಜೀ ಬೆಳ್ನಿ ಇವರ ಸಾರತ್ಯದಲ್ಲಿ ಬೈಂದೂರಿನ ಮೆಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಶಿಬಿರದಲ್ಲಿ ಮಕ್ಕಳಿಗೆ ಪ್ರಾಣಾಯಾಮ, ಧ್ಯಾನ, ಸೂರ್ಯನಮಸ್ಕಾರ, ಆಹಾರಪದ್ಧತಿ, ಅಗ್ನಿಹೋತ್ರ, ನಮ್ಮ ಪರಂಪರೆಯ ವಿಧ ವಿಧ ಆಟಗಳು, ಡ್ರಾವಿಂಗ್, ನಾಯಕತ್ವದ ಕಲೆ, ಜವಾಬ್ದಾರಿ, ವ್ಯಕ್ತಿತ್ವ ವಿಕಾಸ ಮತ್ತು ಗಾಂಧಾರಿ ವಿದ್ಯೆಯನ್ನು ಒಳಗೊಂಡ ವಿಶೇಷ ಜ್ಞಾನವನ್ನು ಅನುಭವದ ಮೂಲಕ ಕಳಿಸಲಾಯಿತು.

ಮಕ್ಕಳೇ ಅನುಭವವನ್ನು ಹಂಚಿಕೊAಡAತೆ: ಧ್ಯಾನ ಪ್ರಾಣಾಯಾಮ ಸೂರ್ಯನಮಸ್ಕಾರ, ಗಾಂಧಾರಿ ವಿದ್ಯೆ, ಅಗ್ನಿಹೋತ್ರಗಳ ಕಲಿಕೆಯಿಂದ ಮಕ್ಕಳಲ್ಲಿ ಏಕಾಗ್ರತೆ, ಜ್ಞಾಪಕಶಕ್ತಿ ಹೆಚ್ಚಳ ಮತ್ತು ಶಾಂತಿ ನೆಮ್ಮದಿಗಳ ಪ್ರಾಪ್ತಿಯಾಯಿತು. ಮಕ್ಕಳಲ್ಲಿ ಆಳವಾದ ಆತ್ಮವಿಶ್ವಾಸ ಮೂಡಿತು. ಮತ್ತು ತಮ್ಮಲ್ಲಿ ಹುದುಗಿರುವ ಮಹಾನ್ ವ್ಯಕ್ತಿತ್ವವನ್ನು ಅರ್ಥಮಾಡಿಕೊಂಡರು. ಅಲ್ಲದೆ ತನ್ನನ್ನು ತಾನು ಗುರುತಿಸಿಕೊಳ್ಳುವ ಮತ್ತು ತಿದ್ಫಿಕೊಳ್ಳುವ ಅರಿವನ್ನು ಪಡೆದರು.

ಕೊನೆಯ ದಿನ ಪೋಷಕರ ಸಭೆ ನಡೆಯಿತು. ಈ ಸಂದರ್ಭದಲ್ಲಿ ಮಕ್ಕಳು ಪೋಷಕರ ಎದುರು ತಾವು ಕಲಿತ ಗಾಂಧಾರಿ ವಿದ್ಯೆ ಪ್ರದರ್ಶನ ನೀಡಿದರು. ಮತ್ತು ತಮ್ಮ ಅನುಭವವನ್ನು ಹಂಚಿಕೊAಡರು. ಅಲ್ಲದೆ ಎಲ್ಲಾ ಮಕ್ಕಳು ತಮ್ಮ ತಾಯಿ ತಂದೆಯರ ಶೋಡಶೋಪಚಾರ ಸಹಿತ ಪಾದಪೂಜೆಯನ್ನು ಅತ್ಯಂತ ಶ್ರದ್ದಾ ಭಕ್ತಿಯಿಂದ ನೆರವೇರಿಸಿದರು. ಈ ದೃಶ್ಯದಿಂದ ಪೋಷಕರು ಆನಂದ ತುಂದಿಲರಾದರು.

ಆಚಾರ್ಯ ಅರವಿಂದ್ ನಿಪ್ಪಾಣಿ ಗಾಂಧಾರಿ ವಿದ್ಯೆಯಲ್ಲಿ ಸಾತ್ ನೀಡಿದರು. ಮೆಕೋಡು ದುರ್ಗಾಪರಮೇಶ್ವರಿ ದೇವಸ್ಥಾನದ ಮೋಕ್ತೇಶ್ವರರಾದ ಪ್ರಕಾಶ್ ಚಂದ್ರ ಶೆಟ್ಟಿ ಯವರು ಶಿಬಿರ ನಡೆಸಲು ಸ್ಥಳವಕಾಶ ನೀಡಿದಲ್ಲದೆ ಎಲ್ಲಾ ರೀತಿಯಿಂದ ಸಂಪೂರ್ಣ ಸಹಕಾರ ನೀಡಿದರು. ಸಿದ್ದ ಸಮಾಧಿ ಯೋಗದ ಸ್ವಯಂ ಸೇವಕರ ಸೇವೆ ಕೂಡ ಅಷ್ಟೇ ಮಹತ್ವದಾಗಿತ್ತು.

error: