April 30, 2024

Bhavana Tv

Its Your Channel

ಸೈಬರ್ ಜಾಗ್ರತಿ ಕಾರ್ಯಾಗಾರ

ಬೈಂದೂರು : ಹಿರಿಯ ನಾಗರಿಕರ ವೇದಿಕೆ ಬೈಂದೂರು ಮತ್ತು ಶಿರೂರು ಹಾಗೂ ರೋಟರಿ ಕ್ಲಬ್ ಬೈಂದೂರು ಇವರ ಸಂಯುಕ್ತ ಆಶ್ರಯದಲ್ಲಿ ನಾಗರಿಕರ ಸುರಕ್ಷತೆ, ಭದ್ರತೆ, ಮತ್ತು ಗೌಪ್ಯತೆಯ ಸೈಬರ್ ಜಾಗ್ರತಿ ಕುರಿತ ಕಾರ್ಯಕ್ರಮವು ಬೈಂದೂರು ರೋಟರಿ ಭವನದಲ್ಲಿ ಜರಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಉಡುಪಿ ಸೈಬರ್ ಕ್ರೈಮ್ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಅವರು ಸೈಬರ್ ಜಾಗ್ರತಿ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಇತ್ತೀಚಿಗೆ ‘ಇಂಟರ್ನೆಟ್ ಫಿಷ್ಸಿಂಗ್’ ಅತಿಯಾಗಿದೆ,
ಅಂದರೆ ಮೀನು ಗಾರರು ಯಾವರೀತಿ ಬಲೆ ಬೀಸಿ,ಗಾಳ ಹಾಕಿ ಮೀನು ಹಿಡಿಯುತ್ತಾರೋ ಅಂತೆಯೇ ಜಾಲತಾಣದಲ್ಲಿ ಅಮಾಯಕರು ಮೋಸದ ಬಲೆಗೆ ಬೀಳುತ್ತಿರುವುದು ಅತಿಯಾಗಿದೆ ಎಂದರು.ಒ.ಟಿ.ಪಿ ಯನ್ನು ಹಂಚಿಕೊAಡು ಹಣ ಕಳೆದುಕೊಳ್ಳುವುದು,ಫೇಸ್‌ಬುಕ್, ಇನ್ಸ್’ಟ್ರಾಗ್ರಾಂ ಇತ್ಯಾದಿ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಗೌಪ್ಯತೆಯನ್ನು ಬಿಚ್ಚಿಟ್ಟು ಮಾಹಿತಿಗಳನ್ನು ಹಂಚಿಕೊAಡು ಹಣಕಾಸು ಕಳೆದುಕೊಳ್ಳುವ ಬಗ್ಗೆ ವಿವರವಾಗಿ ತಿಳಿಸಿ, ನಾಗರಿಕರು ಜಾಗ್ರತರಾಗಬೇಕಾದ ಅಗತ್ಯವನ್ನು ಒತ್ತಿ ಹೇಳಿದರು.
ಈ ರೀತಿಯಲ್ಲಿ ವಂಚಿತರಾದವರಲ್ಲಿ ವಿದ್ಯಾವಂತರು, ಸರಕಾರಿ ನೌಕರರು,ಹಿರಿಯ ನಾಗರಿಕರು ಅಧಿಕ ಪ್ರಮಾಣದಲ್ಲಿರುವುದು ವಿಪರ್ಯಾಸ ಎಂದರು.ಲಾಟರಿಯಲ್ಲಿ ಕೋಟಿ ಹಣ ಬಂತೆAದು ಮೋಸಗೊಳಿಸುವುದು,ಬ್ಲ್ಯಾಕ್ ಮೈಲ್ ತಂತ್ರ ಉಪಯೋಗಿಸಿ ಹಣ ಸುಲಿಗೆ ಮಾಡುವುದು ಇತ್ಯಾದಿ ಮೋಸಗಾರಿಕೆ ಬಗ್ಗೆ ಜಾಗ್ರತರಾಗುವಂತೆ ಮನವರಿಕೆ ಮಾಡಿದರು.

ಮಣಿಪಾಲನ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ಶಶಿಧರ ವೈ.ಎನ್ ಪ್ರಾಸ್ತಾವಿಕ ನುಡಿಗಳನ್ನಾಡಿ, ಹಿರಿಯ ನಾಗರಿಕರ ಆರೋಗ್ಯ ಕುರಿತು ಹಾಗೂ ಅವರಲ್ಲಿ ಉಂಟಾಗುವ ಖಿನ್ನತೆಯ ಕಾರಣಗಳನ್ನು ತಿಳಿಸಿ,ಜಾಗರೂಕತೆಯಿಂದ ಇರುವಂತೆ ಕಿವಿಮಾತು ಹೇಳಿದರು.
ಬೈಂದೂರು ಹಿರಿಯ ನಾಗರಿಕರ ವೇದಿಕೆಯ ಅಧ್ಯಕ್ಷ ಕೆ.ಪುಂಡಲೀಕ ನಾಯಕರು ಸಂಪನ್ಮೂಲ ವ್ಯಕ್ತಿಗಳ ನುಡಿಗಳನ್ನು ಉಲ್ಲೇಖಿಸಿ, ಹಿರಿಯನಾಗರಿಕರು ಜಾಗ್ರತರಾಗಿರಬೇಕೆಂದು ಸಲಹೆ ನೀಡಿದರು.
ಆರಂಭದಲ್ಲಿ ಹಿರಿಯ ನಾಗರಿಕ ವೇದಿಕೆಯ ಸದಸ್ಯೆ ಶ್ರೀ ಮತಿ ಕೆ.ಶಾರದಾ ಪ್ರಾರ್ಥನೆ ಮಾಡಿದರು. ಬೈಂದೂರು ರೋಟರಿ ಕ್ಲಬ್ ಅಧ್ಯಕ್ಷ ರೋ.ಪ್ರಸಾದ್ ಪ್ರಭು ಸ್ವಗತಿಸಿದರು.
ಬೈಂದೂರು ಹಿ.ನಾ.ವೇದಿಕೆಯ ಸ್ಥಾಪಕ ಅಧ್ಯಕ್ಷ ವಸಂತ ಹೆಗಡೆ,ಸದಸ್ಯರಾದ ರಾಮ ಮಾಸ್ಟರ್,ನಿಕಟಪೂರ್ವ ಕಾರ್ಯದರ್ಶಿ ಸಂಜೀವ ಆಚಾರ್, ಐ.ನಾರಾಯಣ,ಗೋವಿಂದ್ರಾಯ ಪೈ ಮುಂತಾದವರು ಚರ್ಚೆಯಲ್ಲಿ ಭಾಗವಹಿಸಿ ಕಾರ್ಯಕ್ರಮ ಅರ್ಥಪೂರ್ಣ ಗೊಳಿಸಿದರು.
ಶಿರೂರು ಹಿರಿಯ ನಾಗರಿಕ ವೇದಿಕೆಯ ಅಧ್ಯಕ್ಷ ಎಸ್.ಎಮ್.ಅಜ್ಮಲ್,ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಬೈಂದೂರು ಹಿರಿಯ ನಾಗರಿಕ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಗೋವಿಂದ ಎಮ್, ಉಪಾಧ್ಯಕ್ಷ ನಾಕಟ್ಟೆ ಜಗನ್ನಾಥ ಶೆಟ್ಟಿ, ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ಕಾರ್ಯದರ್ಶಿ ಗೋವಿಂದ ಬಿಲ್ಲವ ಕಾರ್ಯಕ್ರಮ ನಿರೂಪಿಸಿದರು.ಜಗದೀಶ್ ಆಚಾರ್ ಸಹಕರಿಸಿದರು.ಕೊನೆಯಲ್ಲಿ ಕಾರ್ಯಕ್ರಮದ ಸಂಯೋಜಕರಾದ ವೆಲ್ಕಂ ಗ್ರೂಪ್ ಗ್ರಾಜುಯೇಟ್ ಸ್ಕೂಲ್ ಆಫ್ ಹೋಟೆಲ್ ಅಡ್ಮಿನಿಸ್ಟ್ರೇಶನ್ ಮಣಿಪಾಲ ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ರಾಘವೇಂದ್ರ ಜಿ. ಕಾರ್ಯಕ್ರಮ ಸಂಯೋಜಿಸಿ ಧನ್ಯವಾದ ಸಮರ್ಪಣೆ ಮಾಡಿದರು.

error: