April 29, 2024

Bhavana Tv

Its Your Channel

ತ್ರಾಸಿ ಮರವಂತೆ ಕಡಲ ತೀರದಲ್ಲಿ ಪ್ರವಾಸಿಗರ ಹುಚ್ಚಾಟತನ

ಬೈಂದೂರು : ವಿಶ್ವ ಪ್ರಸಿದ್ಧ ತ್ರಾಸಿ ಮರವಂತೆ ಕಡಲ ಸೌಂದರ್ಯ ನೋಡಲು ದೇಶ, ವಿದೇಶಗಳಿಂದ ಸಾವಿರಾರು ಪ್ರವಾಸಿಗರು ದಾಂಗುಡಿ ಇಡುತ್ತಾರೆ. ಆದರೆ ಪ್ರವಾಸಿ ತಾಣದ ಅಭಿವೃದ್ಧಿ ಸೇರಿದಂತೆ ಜನರ ಸುರಕ್ಷತೆಗೆ ಯಾವುದೇ ರೀತಿಯ ಸೌಲಭ್ಯವಾಗಲಿ ಅನುಕೂಲಗಳಾಗಲಿ ಇಲ್ಲಿಲ್ಲ.
ಒಂದು ಕಡೆ ಸಮುದ್ರ ಇನ್ನೊಂದು ಕಡೆ ನದಿ ಮಧ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಾಗುವುದೇ ರೋಚಕದ ಅನುಭವ. ರಸ್ತೆಯಲ್ಲಿ ಸಂಚಾರ ಮಾಡುತ್ತಲೆ ಕಡಲ ತೀರಕ್ಕೆ ಹಾಲಿನ ನೊರೆಯಂತೆ ಧುಮುಕ್ಕಿ ಬರುವ ಕಡಲ ಅಲೆಗಳ ಸೌಂದರ್ಯವನ್ನು ಕಣ್ಣುತುಂಬಿ ಕೊಳ್ಳಬಹುದು. ತ್ರಾಸಿಯಿಂದ ಆರಂಭಗೊAಡು ಮರವಂತೆ ಸಿಲ್‌ಲ್ಯಾಂಡ್ ತನಕ ಬೀಚಿನ ಸೌಂದರ್ಯ ಕಣ್ಣಿಗೆ ರಾಚಿಸುತ್ತದೆ.
ಪ್ರಕೃತಿ ಸೌಂದರ್ಯವನ್ನು ಸವಿಯಲು ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ದಿನಂಪ್ರತಿ ಮರವಂತೆ ಮತ್ತು ತ್ರಾಸಿ ಬೀಚ್‌ಗೆ ಭೇಟಿ ನೀಡುತ್ತಾರೆ.


ಬೀಚ್‌ಗೆ ಪ್ರವಾಸಿಗರ ಹುಚ್ಚಾಟ ಮಾತ್ರ ಬಿಟ್ಟಿಲ್ಲ
ಬಿಪರ್ ಜಾಯ್ ಚಂಡಮಾರುತದ ಅಬ್ಬರಕ್ಕೆ ಕಳೆದ ಕೆಲ ದಿನಗಳಿಂದ ಅಲೆಗಳ ಅಬ್ಬರ ಹೆಚ್ಚುತ್ತಿದ್ದು, ಇದರ ಮಧ್ಯೆಯೂ ಪ್ರವಾಸಿಗರು ಅಪಾಯಕಾರಿ ಸ್ಥಳದಲ್ಲಿ ನಿಂತು ಸೆಲ್ಫಿ ತೆಗೆಯುವುದು, ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಮಕ್ಕಳು, ಮಹಿಳೆಯರ ಸಹಿತ ಅನೇಕರು ತಡೆಗೋಡೆಯಲ್ಲಿ, ನೀರಿಗಿಳಿದು ವಿಹರಿಸುತ್ತಿರುವುದು ಕಂಡು ಬಂದಿದೆ.
ತ್ರಾಸಿ- ಮರವಂತೆ ಚತುಷ್ಪಥ ಹೆದ್ದಾರಿಯುದ್ದಕ್ಕೂ ನಿರ್ಮಿಸಿದ ತಡೆಗೋಡೆಗೆ ಅಲೆಗಳು ಅಪ್ಪಳಿಸುತ್ತಿರುವ ದೃಶ್ಯ ಕಣ್ತುಂಬಲು ಪ್ರವಾಸಿಗರು ಮುಗಿ ಬೀಳುವುದು ಭೀತಿ ಹುಟ್ಟಿಸುವಂತಿದೆ.
ಕಡಲ್ಕೊರೆತ ತಡೆಗೆ ಹಾಕಿದ ಕಲ್ಲು, ಬಂಡೆಗಳ ತುದಿಯವರೆಗೆ ಹೋಗಿ ಭಾರಿ ಅಲೆಗಳು ಅಪ್ಪಳಿಸುವ ಸನಿಹದಲ್ಲೇ ಫೋಟೋ ತೆಗೆಯುವುದು, ಸಮುದ್ರಕ್ಕೆ ಇಳಿಯುವುದು ಮಾಡುತ್ತಿದ್ದಾರೆ.
ಇಲ್ಲಿನ ಕಡಲ ತೀರದಲ್ಲಿ ಸುರಕ್ಷತೆ ದೃಷ್ಟಿಯಿಂದ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು, ಲೈಫ್ ಗಾರ್ಡ್ ಹಾಕಿದ್ರು ಕೂಡ ಲೆಕ್ಕಿಸುವುದಿಲ್ಲ.
ಮೂಲಭೂತ ಸೌಕರ್ಯ ಕೊರತೆ ಎದ್ದು ಕಾಣುತ್ತಿತ್ತು ಸರಿಯಾದ ಕಸದ ತೊಟ್ಟಿ ಕಂಡು ಬರುತ್ತಿಲ್ಲ ರಸ್ತೆಯ ಪಕ್ಕದಲ್ಲಿ ದೊಡ್ಡ ದೊಡ್ಡ ಲಾರಿಗಳು ನಿಲ್ಲುತ್ತದೆ ಯಾವುದೇ ರೀತಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಕೂಡ ಕಂಡುಬರುತ್ತಿಲ್ಲ ಸ್ಥಳೀಯರು ಎಷ್ಟು ಬಾರಿ ಪ್ರವಾಸೋದ್ಯಮ ಇಲಾಖೆಗೆ ಮನವಿ ಮಾಡಿಕೊಂಡರು ಸಹ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ತಮ್ಮ ಅಳೆಲ್ಲನ್ನು ತೋಡಿಕೊಂಡಿದ್ದಾರೆ.
ವರದಿ ಭಾವನಾ ಟಿವಿ ಎಚ್ ಸುಶಾಂತ್ ಬೈಂದೂರು

error: