May 12, 2024

Bhavana Tv

Its Your Channel

ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ‍್ಣ ಮಹೊತ್ಸವ

ರಾಮನ ಪಾದುಕೆ ಮುಂದಿಟ್ಟು ರಾಜ್ಯಭಾರ ಭರತನು ಮಾಡಿದಂತೆ, ಶ್ರೀಧರ ಸ್ವಾಮಿಗಳ ವೇದಾಂತ ಸಾಮ್ರಾಜ್ಯವನ್ನು ಜಾನಕಿಯಮ್ಮ ಹಾಗೂ ಜನರ‍್ದನ ಇವರು ಮುನ್ನಡೆಸುತ್ತಿದ್ದಾರೆ ಎಂದು ಉಡುಪಿ ಪೇಜಾವರ ಅಧೊಕ್ಷ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತರ‍್ಥ ಶ್ರೀಪಾದರು ನುಡಿದರು.

ಹೊನ್ನಾವರ ; ಪಟ್ಟಣದ ರಾಮತರ‍್ಥದ ಶ್ರೀಧರ ಆಶ್ರಮದಲ್ಲಿ ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳ ಪಾದುಕಾ ಪ್ರತಿಷ್ಟಾಪನಾ ಸುರ‍್ಣ ಮಹೊತ್ಸವ ಕರ‍್ಯಕ್ರಮದಲ್ಲಿ ರ‍್ಶಿವಚನ ನೀಡಿದ ಶ್ರೀಗಳು ಶ್ರೀಧರ ಸ್ವಾಮಿಗಳ ವೇದಾಂತಗಳ ಸಿಂಚನ ಧ್ವನಿ ಮುದ್ರಕೆ ಸಂಗ್ರಹಿಸಿ ಪುಸ್ತಕ ರೂಪದಲ್ಲಿ ನೀಡುವುದು ದೊಡ್ಡಕರ‍್ಯವಾಗಿದೆ. ಒಳ್ಳೆಯ ವಿಚಾರಗಳು ನಿರಂತರವಾಗಿ ದೂರಕಬೇಕಾದರೆ, ಅದನ್ನು ಮುದ್ರಿಸಿ ನೀಡುವುದರಿಂದ ಪ್ರತಿಯರ‍್ವರ ಮನದಲ್ಲಿ ಶಾಶ್ವತವಾಗಿ ಇರಲಿದೆ. ರಾಮ- ರಾವಣರು ಆರ‍್ಶ ಪುರುಷರು. ಸಮಾಜದಲ್ಲಿ ಹೇಗೆ ಇರಬೇಕೆಂದು ರಾಮ ತಿಳಿಸಿದರೆ, ಸಮಾಜದಲ್ಲಿ ಹೇಗಿರಬಾರದೆಂದು ರಾವಣನು ತೋರಿಸಿದ್ದಾನೆ. ಸಮಾಜದ ಸುಖಕೊಸ್ಕರ ಸ್ವರ‍್ಥವನ್ನೆಲ್ಲ ತ್ಯಾಗ ಮಾಡಿದ ರಾಮನ ನಡೆಯನ್ನು ನಾವೆಲ್ಲರೂ ಅನುಸರಿಸೋಣ.

ಸುರ‍್ಣಸೌದ ಒಬ್ಬರಿಂದ ನರ‍್ಮಾಣ ಸಾಧ್ಯವಿಲ್ಲ. ಶ್ರೀಧರ ಸ್ವಾಮಿಗಳ ಗ್ರಂಥ ಪ್ರಕಾಶನ ಬಿಡುಗಡೆಗೆ ಎಲ್ಲರ ಸಹಕಾರವಿದೆ ಹಾಗೆಯೇ ಉತ್ತಮ ಕರ‍್ಯಕ್ಕೆ ಎಲ್ಲರೂ ಕೈಜೋಡಿಸಿದಾಗ ಮಾತ್ರ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದರು.

ಪತಂಜಲಿ ವೀಣಾಕರ್ ಮಾತನಾಡಿ ಪಾದುಕಾ ಪ್ರತಿಷ್ಟಾಪನೆಯಾಗಿ 50 ರ‍್ಷವಾಗಿದೆ. ಶ್ರೀಧರ ಸ್ವಾಮಿಗಳ ಮರ‍್ಗರ‍್ಶನವು ಪುಸ್ತಕ ರೂಪದಲ್ಲಿ ಇಂದು ಶ್ರೀಗಳಿಂದ ಬಿಡುಗಡೆಯಾಗಿದ್ದು, ಇದನ್ನು ಭಕ್ತರು ರ‍್ಥೈಸಿಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದರು.

 ಆಶ್ರಮಕ್ಕೆ ನೆರವಾದವರನ್ನು ಶ್ರೀಗಳು ಸನ್ಮಾನಿಸಿ ಗೌರವಿಸಿದರು.  ಕರ‍್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದ ಹಿರಿಯ ಪತ್ರರ‍್ತರಾದ ಜಿ.ಯು.ಭಟ್ ಮಾತನಾಡಿ ಶ್ರೀಧರ ಸ್ವಾಮೀಜಿಯವರ ಕುರಿತು ಕನ್ನಡ ಇಂಗ್ಲೀಷ್, ಮರಾಠಿ ಭಾಷೆಯಲ್ಲಿ ಬಂದಿದೆ. ಶ್ರೀಧರ ಸ್ವಾಮಿಗಳು ಹುಟ್ಟಿದ್ದು, ಮಹಾರಾಷ್ಟ್ರದವರಾದರೂ, ಸನ್ಯಾಸತ್ವ ಸ್ವೀಕರಿಸಿದ್ದು, ಶಿರಸಿಯ ಶಿಗೆಹಲ್ಲಿಯಲ್ಲಿ ಆಗಿರುದರಿಂದ ಜಿಲ್ಲೆಯಲ್ಲಿ ಹೆಚ್ಚಿನ ಭಕ್ತ ವೃಂದವಿದೆ. 80 ರ‍್ಷದ ಹಿಂದೆ ರಾಮತರ‍್ಥದಲ್ಲಿ ದತ್ತಮರ‍್ತಿ ಸ್ಥಾಪಿಸಿದ್ದಾರೆ. ಜನರ‍್ದನ ಹಾಗೂ ಜಾನಕಕ್ಕ ಇಲ್ಲಿಯ ಆಶ್ರಮವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ ಎಂದು ಸ್ವಾಗತಿಸಿ ವಂದಿಸಿದರು. ಶ್ರೀಧರ ಸ್ವಾಮಿಗಳ ಕೃತಿಗಳ ಕುರಿತು ವೆಂಕ್ರಟಮಣ ಭಟ್ ಮಾತನಾಡಿದರು. ಉಪನ್ಯಾಸಕ ಪ್ರಶಾಂತ ಹೆಗಡೆ ಮೂಡಲಮನೆ ಕರ‍್ಯಕ್ರಮ ನರ‍್ವಹಿಸಿದರು.

   ಸ್ವಾಮೀಜಿಯವರು ಶ್ರೀರಾಮ ದೇವಸ್ಥಾನ, ರಾಮೇಶ್ವರ ದೇವರು, ದತ್ತಮಂದಿರಕ್ಕೆ ಭೇಟಿ ನೀಡಿ ದೇವರ ರ‍್ಶನ ಪಡೆದರು.

ಮುಂಜಾನೆಯಿಂದ 1008 ಗಣಪತಿ ಉಪನಿಷತ್, ಶ್ರೀ ಶ್ರೀಧರ ಸ್ವಾಮಿಗಳ ಪಾದುಕೆಗಳಿಗೆ ರುದ್ರಾಭಿಷೇಕ, 1008 ಶ್ರೀ ಪುರುಷಸೂಕ್ತ , ಶ್ರೀ ಸೂಕ್ತ ಅಭಿಷೇಕ, ಫಲಪಂಚಾಮೃತ ಅಭಿಷೇಕ, ವಿಷ್ಣುಸಹಸ್ರನಾಮ, ಸೇರಿದಂತೆ ವಿವಿಧ ಧರ‍್ಮಿಕ ಕರ‍್ಯಕ್ರಮ ಮಹಾಮಂಗಳಾರತಿ, ಮಹಾಪೂಜೆ, ಮಹಾಪ್ರಸಾದ ವಿತರಣೆ ಜರುಗಿತು. ಧರ‍್ಮಿಕ ಸಭಾ ಕರ‍್ಯಕ್ರಮದ ಮೊದಲು ಗಾನತರಂಗಿಣಿ ಟ್ರಸ್ಟ ವಸುದಾ ಜಿ., ಎಮ್.ಎಸ್.ಗಿರಿಧರ “ದಾಸಸಿಂಚನಾ” ಕರ‍್ಯಕ್ರಮ ಜರುಗಿತು.
ವರದಿ ; ವಿಶ್ವನಾಥ ಸಾಲ್ಕೋಡ್ ಹೊನ್ನಾವರ

error: