May 20, 2024

Bhavana Tv

Its Your Channel

18ನೇ ವರ್ಷಕ್ಕೆ ಶೇಕಡಾ 100 ಪ್ರತಿಶತ ಫಲಿತಾಂಶ ದಾಖಲಿಸಿದ ನ್ಯೂ ಇಂಗ್ಲಿಷ ಸ್ಕೂಲ್ (ಆಂಗ್ಲಮಾಧ್ಯಮ) ಪ್ರೌಢಶಾಲೆ, ಹೊನ್ನಾವರ

ಹೊನ್ನಾವರ ; ಈ ಅಭೂತಪೂರ್ವ ಸಾಧನೆಗೆ ಕಾರಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತಮಂಡಳಿ, ಶಿಕ್ಷಕ-ಶಿಕ್ಷಕೇತರ ವೃಂದದವರು, ಪೂರ್ವ ವಿದ್ಯಾರ್ಥಿಗಳು, ಶಾಲಾ ಹಿತೈಷಿಗಳು ಅಭಿನಂದಿಸಿ ಶುಭ ಹಾರೈಸಿರುತ್ತಾರೆ. ಪರೀಕ್ಷೆಗೆ ಕುಳಿತ 55 ವಿದ್ಯಾರ್ಥಿಗಳಲ್ಲಿ 55 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.

ಸತತ 18ನೇ ವರ್ಷ 100% ಪ್ರತಿಶತ ಫಲಿತಾಂಶ. 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟೂ 55 ವಿದ್ಯಾರ್ಥಿಗಳು ಹಾಜರಾಗಿದ್ದು, 25 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 30 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.

ಕುಮಾರ.ಅನುಪ ಶೇಖರ ನಾಯ್ಕ 611 ಅಂಕಗಳಿಸಿ ಶೇಕಡಾ 97.76 ಪ್ರತಿಶತದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು, ಕುಮಾರಿ.ವಿಜೇತಾ ರಾಮ ನಾಯ್ಕ 610 ಅಂಕಗಳಿಸಿ ಶೇಕಡಾ 97.60 ಪ್ರತಿಶತದೊಂದಿಗೆ ಶಾಲೆಗೆ ದ್ವಿತೀಯ ಸ್ಥಾನವನ್ನು, ಕುಮಾರಿ. ದೀಪಿಕಾ ಸತೀಶ ಭಟ್ 608 ಅಂಕಗಳಿಸಿ ಶೇಕಡಾ 97.28 ಪ್ರತಿಶತದೊಂದಿಗೆ ಶಾಲೆಗೆ ತೃತೀಯ ಸ್ಥಾನವನ್ನು ಗಳಿಸಿರುತ್ತಾರೆ.

ಈ ಎಲ್ಲ ಸಾಧನೆಗೆ ಆಡಳಿತಮಂಡಳಿಯ ಅಧ್ಯಕ್ಷರು ಹಾಗೂ ಸದಸ್ಯರು, ಮುಖ್ಯಾಧ್ಯಾಪಕಿ ಶ್ರೀಮತಿ.ಕಮಲಾ ಎನ್ ನಾಯ್ಕ ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಅವರ ಪಾಲಕರಿಗೆ ಅಭಿನಂದಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿರುತ್ತಾರೆ.

error: