September 13, 2024

Bhavana Tv

Its Your Channel

ಎಮ್ ಇ ಎಸ್ ಹೋರಾಟ ಸಮರ್ಥಿಸಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ಹೇಳಿಕೆಯನ್ನು ಕರುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷರಾದ ಎನ್. ದತ್ತಾ, ಖಂಡಿಸಿದ್ದಾರೆ.

ಕಾರವಾರ ; ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಅಂಜಲಿ ನಿಂಬಾಳ್ಕರ್ ಅವರು ಎಂಇಎಸ್ ಪರವಾದ ನಿಲುವನ್ನು ತಲೇದಿರುವುದು ಉತ್ತರ ಕನ್ನಡದ ಜನರಿಗೆ ಆತಂಕದ ವಿಷಯವಾಗಿದೆ.
ಎಂಇಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿರಂಜನ್ ಸರ್ ದೇಸಾಯಿ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ನೀತಿ ಸಂಹಿತೆ ಕಾನೂನು ವ್ಯವಸ್ಥೆ ಉಲ್ಲಂಘಿಸಿ ಕಾರವಾರ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂದು ಕಾರವಾರದಲ್ಲಿ ಹೇಳಿಕೆ ನೀಡಿರುವುದು ನಾಡ ವಿರೋಧಿ ಹೇಳಿಕೆ ನೀಡಿರುವುದು ಖಂಡನಾರ್ಹ . ಇವರ ಮೇಲೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಠಿಣ ಕಾನೂನು ಕೈಗೊಳ್ಳಬೇಕು ಇವರ ಈ ಹೇಳಿಕೆಗೆ ಕರುನಾಡ ರಕ್ಷಣಾ ವೇದಿಕೆ ಖಂಡಿಸುತ್ತದೆ.

ಈಗಾಗಲೇ ಕರ್ನಾಟಕ ಸರ್ಕಾರ ಕಾಂಗ್ರೆಸ್ ಬಿಜೆಪಿ ಹಾಗೂ ಇತರ ಎಲ್ಲ ಪಕ್ಷಗಳು ಕಾರವಾರ ಜಾಯಿಡಾ ಹಳಿಯಾಳ ಮತ್ತು ಖಾನಾಪುರಗಳು ಕರ್ನಾಟಕದ ಅವಿಭಾಜ್ಯ ಅಂಗ ಎಂದು ತಮ್ಮ ನಿಲುವನ್ನು ಸ್ಪಷ್ಟ ಪಡಿಸಿವೆ. ಹಾಗೆ ನಾಡಿನ ನೆಲ ಜಲ ರಕ್ಷಣೆ ಮಾಡುವುದಾಗಿ ಹೇಳಿಕೆಗಳು ನೀಡುತ್ತಾರೆ. ಹೀಗಿರುವಾಗ ಅಂಜಲಿ ನಿಂಬಾಳ್ಕರ್ ಅವರು ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಿ ಎಂಇಎಸ್‌ಗೆ ಮಹಾರಾಷ್ಟ್ರಕ್ಕೆ ಖಾನಾಪುರವನ್ನು ಹಾಗೂ ಕಾರವಾರ ಭಾಗವನ್ನು ಸೇರಿಸುವಂತೆ ಹೋರಾಟ ಮಾಡಲು ಕಾನೂನು ಬದ್ಧ ಹಕ್ಕಿದೆ ಎಂದು ಹೇಳುವ ಮೂಲಕ ಅವರನ್ನು ಪ್ರಚೋದಿಸಿದ್ದಾರೆ ಅಲ್ಲದೆ ಈ ಪ್ರಕರಣ ನ್ಯಾಯಾಲಯದಲ್ಲಿ ಇದೆ ಎಂದು ಹೇಳುವ ಮೂಲಕ ತಮ್ಮ ಮರಾಠಿ ಪ್ರೇಮವನ್ನು ಮೆರೆದಿದ್ದಾರೆ.

ನ್ಯಾಯಾಲಯದಲ್ಲಿ ಈ ಪ್ರಕರಣ ಇದೆ ಎಂದಾದ ಮೇಲೆ ಎಂಇಎಸ್ ನವರು ಚುನಾವಣೆಗೆ ಸ್ಪರ್ಧಿಸಿ ಕರ್ನಾಟಕ ವಿರೋಧಿ ಘೋಷಣೆಯನ್ನು ಏಕೆ ಕೂಗುತ್ತಿದ್ದಾರೆ ಇದನ್ನು ಖಂಡಿಸುವ ಬದಲು ಅಂಜಲಿ ನಿಂಬಾಳಕರ್ ಅವರು ಅದನ್ನು ಬೆಂಬಲಿಸಿದ್ದು ನಿಜಕ್ಕೂ ಬೇಸರದ ಸಂಗತಿಯಾಗಿದೆ.

ಅಂಜಲಿಯವರು ಆಯ್ಕೆಯಾಗಿ ಸಂಸದರಾದರೆ ಭವಿಷ್ಯದಲ್ಲಿ ಕಾರವಾರ ಜೋಯಿಡಾ ಹಳಿಯಾಳ ಖಾನಾಪುರ ಇತ್ಯಾದಿ ಗಡಿ ವಿವಾದ ಲೋಕಸಭೆಯಲ್ಲಿ ಪ್ರಸ್ತಾಪವಾದರೆ ಮುಂದೆ ಲೋಕಸಭೆಯಲ್ಲಿ ಅಂಜಲಿ ಅವರು ಮಹಾರಾಷ್ಟ್ರದ ಪರ ನಿಲುವು ತಡೆಯುವುದು ಖಂಡಿತ ಎಂಬುದು ಈಗಿನ ಅವರ ಹೇಳಿಕೆಯಿಂದ ತಿಳಿಯುತ್ತಿದೆ. ಹೀಗಾಗಿ ಅಂಜಲಿ ಅವರ ಈ ಹೇಳಿಕೆಗೆ ಕಾಂಗ್ರೆಸ್ ಪಕ್ಷ ಕ್ಷಮೆ ಯಾಚನೆ ಮಾಡಬೇಕು ಹಾಗೂ ಅಂಜಲಿಯವರು ಕರ್ನಾಟಕದ ಪರವೊ ಅಥವಾ ನಾಡದ್ರೋಹಿ ಎಂಇಎಸ್ ಫರವೊ ಎಂಬುದನ್ನು ಚುನಾವಣೆಯ ಪೂರ್ವದಲ್ಲಿಯೇ ಸ್ಪಷ್ಟೀಕರಣ ನೀಡಬೇಕು ಇಲ್ಲದಿದ್ದಲ್ಲಿ ಕನ್ನಡ ಸಂಘಟನೆಗಳು ಹಾಗೂ ಕನ್ನಡ ಪ್ರೇಮಿಗಳು ಚುನಾವಣೆಯಲ್ಲಿ ಅಂಜಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂಬುದನ್ನು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದಿದ್ದಾರೆ. .

error: